ETV Bharat / state

ಕೊರೊನಾ ಎಫೆಕ್ಟ್​: ರಾಜ್ಯದಲ್ಲಿ ದೀಪಾವಳಿ ಪಟಾಕಿ ಠುಸ್​! - CM BSY clarifies fireworks ban

ಕೋವಿಡ್ ಕಾರಣದಿಂದಾಗಿ ಪಟಾಕಿ ನಿಷೇಧ ಕುರಿತು ಚರ್ಚೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಈ ಕುರಿತಂತೆ ಆದೇಶ ಹೊರಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

cm-bsy
ಪಟಾಕಿ
author img

By

Published : Nov 6, 2020, 1:30 PM IST

ಬೆಂಗಳೂರು: ಕೊರೊನಾ ಸೋಂಕು ಹೆಚ್ಚುವ ಸಾಧ್ಯತೆ ಹಿನ್ನೆಲೆ ಈ ಬಾರಿಯ ದೀಪಾವಳಿಗೆ ಪಟಾಕಿ ನಿಷೇಧಿಸಲು ಸರ್ಕಾರ ಮುಂದಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಆದಷ್ಟು ಬೇಗ ಪಟಾಕಿ ನಿಷೇಧಿಸುವ ಬಗ್ಗೆ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ನಂತರ ಮಾತನಾಡಿದ ಅವರು, ಆರ್.ಆರ್. ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ನಾನು ಏನನ್ನೇ ಹೇಳಬೇಕಾದರೂ ನೂರು ಬಾರಿ ಯೋಚಿಸಿ ಹೇಳುತ್ತೇನೆ. ಇದುವರೆಗೂ ನಾನು ಹೇಳಿದ್ದು ಸುಳ್ಳಾಗಿಲ್ಲ. ಎರಡು ವಿಧಾನಸಭೆ, ವಿಧಾನ ಪರಿಷತ್​​ನ ಸ್ಥಾನ ಸೇರಿ ಒಟ್ಟು ಆರು ಸ್ಥಾನಗಳಲ್ಲೂ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ದೂರವಾಣಿ ಮೂಲಕವೇ ಹೈಕಮಾಂಡ್ ಜೊತೆ ಮಾತುಕತೆ ನಡೆಸಲಾಗುತ್ತದೆ. ದೂರವಾಣಿಯಲ್ಲೇ ಎಲ್ಲಾ ಅಂತಿಮಗೊಳಿಸುವ ಪ್ರಯತ್ನ ನಡೆಸಲಾಗುತ್ತದೆ. ಒಂದು ವೇಳೆ ಅಗತ್ಯ ಬಿದ್ದರೆ ಫಲಿತಾಂಶದ ನಂತರ ನವೆಂಬರ್ 11 ರಂದು ದೆಹಲಿಗೆ ಭೇಟಿ ನೀಡಿ, ಚರ್ಚೆ ನಡೆಸಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಂಡು ಬರಲಾಗುತ್ತದೆ ಎಂದರು.

ಮದಲೂರು ಕೆರೆಗೆ ಆರು ತಿಂಗಳಿನಲ್ಲಿ ನೀರು ತುಂಬಿಸದಿದ್ದರೆ ಪಾದಯಾತ್ರೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಆರು ತಿಂಗಳಲ್ಲ ಮೂರ್ನಾಲ್ಕು ತಿಂಗಳಿನಲ್ಲೇ ನೀರು ತುಂಬಿಸಲಾಗುತ್ತದೆ. ಈಗಾಗಲೇ ಡಿಸಿಗೆ ಕೆರೆ ಸ್ವಚ್ಛವಾಗಿಸಲು ಸೂಚನೆ ನೀಡಿದ್ದು, ಆದಷ್ಟು ಬೇಗ ನೀರು ತುಂಬಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.