ETV Bharat / state

ಕೆಂಗಲ್ ಹನುಮಂತಯ್ಯ113ನೇ ಜನ್ಮ ದಿನೋತ್ಸವ: ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಸಿಎಂ ಬಿಎಸ್​ವೈ - Bangaluru

ಕೆಂಗಲ್ ಹನುಮಂತಯ್ಯ 113ನೇ ಜನ್ಮ ದಿನೋತ್ಸವದ ನಿಮಿತ್ತ ವಿಧಾನ ಸೌಧ ಮುಂಭಾಗವಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಮಾಲಾರ್ಪಣೆ ಮಾಡಿದರು.

Bangalore
:ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಸಿಎಂ ಯಡಿಯೂರಪ್ಪ ಪುಷ್ಪಾರ್ಚನೆ
author img

By

Published : Feb 10, 2021, 12:23 PM IST

ಬೆಂಗಳೂರು: ಕೆಂಗಲ್ ಹನುಮಂತಯ್ಯ 113ನೇ ಜನ್ಮ ದಿನೋತ್ಸವದ ನಿಮಿತ್ತ ಕೆಂಗಲ್ ಹನುಮಂತಯ್ಯ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿದರು.

ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಸಿಎಂ ಯಡಿಯೂರಪ್ಪ ಪುಷ್ಪಾರ್ಚನೆ..

ವಿಧಾನಸೌಧ ಮುಂಭಾಗವಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂದರ್ಭ ಸಿಎಂ ಜತೆ ಗೃಹ ಸಚಿವ ಬಸವರಾಜ್ ಬೊಮ್ಮಯಿ, ಉಮೇಶ್ ಕತ್ತಿ, ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ, ಕೆಂಗಲ್ ಹನುಮಂತಯ್ಯ ಮೊಮ್ಮಗ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಉಪಸ್ಥಿತರಿದ್ದರು.

ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬಿಎಸ್​ವೈ, ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇವೆ. ದಿನಾಂಕ ಯಾವಾಗ ಅಂತ ಚರ್ಚೆ ಮಾಡಿ ನಿಗದಿ ಮಾಡುತ್ತೇವೆ. ಈಗಾಗಲೇ ಬಜೆಟ್ ತಯಾರಿ ಬಗ್ಗೆ ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ. ಇನ್ನೊಂದು ವಾರದಲ್ಲಿ ಬಜೆಟ್ ಸಭೆ ಪೂರ್ಣಗೊಳಿಸುತ್ತೇನೆ ಎಂದರು.

ಓದಿ: ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ : ಸಿಎಂ ಬಿಎಸ್​ವೈ

ಮೀಸಲಾತಿ ಹೋರಾಟ ಹೆಚ್ಚಾಗುತ್ತಿರುವ ಹಿನ್ನೆಲೆ ಸಂವಿಧಾನ ಚೌಕಟ್ಟಿನಲ್ಲಿ, ಕಾನೂನು ಚೌಕಟ್ಟಿನಲ್ಲಿ ಏನೇನು ಮಾಡೋಕೆ ಸಾಧ್ಯ ಅದನ್ನು ಮಾಡೋಣ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಇಡೀ ದೇಶದಲ್ಲಿ ಏನೇನು ಮಾಡಿದ್ದಾರೆ ಅದನ್ನು ನಾನು ಇಲ್ಲಿ ಮಾಡಿದ್ದೇನೆ. ಅದಕ್ಕಾಗಿ ನಾವು ಕುಲಿತು ಕೂತು ಚರ್ಚೆ ಮಾಡುತ್ತಿದ್ದೇವೆ. ಕಾನೂನು ತಜ್ಞರ ಜತೆ, ಪ್ರಮುಖರ ಜತೆ ಚರ್ಚೆ ಮಾಡಿ. ಏನು ಮಾಡೋಕೆ‌ ಸಾಧ್ಯವೋ ಅದನ್ನು ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.