ಬೆಂಗಳೂರು : ಹೆಸರಾಂತ ವಿಜ್ಞಾನಿ ಭಾರತ ರತ್ನ ಪ್ರೊ.ಸಿ ಎನ್ ಆರ್ ರಾವ್ ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ವಿಜ್ಞಾನದಲ್ಲಿನ ತಮ್ಮ ಅಪಾರ ಪಾಂಡಿತ್ಯದ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ರಾವ್ ಅವರು, ಹಲವು ವೈಜ್ಞಾನಿಕ ಸಂಸ್ಥೆಗಳನ್ನು ಮುನ್ನಡೆಸಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ನೂರಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಸಿಎನ್ಆರ್, ಜಾಗತಿಕ ಮಟ್ಟದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ.
-
ಅಪ್ರತಿಮ ಸಾಧಕರು, ರಾಷ್ಟ್ರದ ಹೆಮ್ಮೆಯ ಹಿರಿಯ ವಿಜ್ಞಾನಿ, ಭಾರತರತ್ನ ಪ್ರೊ ಸಿ.ಎನ್.ಆರ್. ರಾವ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಯುವಜನತೆಗೆ ಸ್ಫೂರ್ತಿಯಾಗಿ ತಮ್ಮ ದೇಶಸೇವೆ ಹೀಗೆಯೇ ಮುಂದುವರಿಯಲಿ, ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ. pic.twitter.com/BrqfOah0qn
— B.S. Yediyurappa (@BSYBJP) June 30, 2020 " class="align-text-top noRightClick twitterSection" data="
">ಅಪ್ರತಿಮ ಸಾಧಕರು, ರಾಷ್ಟ್ರದ ಹೆಮ್ಮೆಯ ಹಿರಿಯ ವಿಜ್ಞಾನಿ, ಭಾರತರತ್ನ ಪ್ರೊ ಸಿ.ಎನ್.ಆರ್. ರಾವ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಯುವಜನತೆಗೆ ಸ್ಫೂರ್ತಿಯಾಗಿ ತಮ್ಮ ದೇಶಸೇವೆ ಹೀಗೆಯೇ ಮುಂದುವರಿಯಲಿ, ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ. pic.twitter.com/BrqfOah0qn
— B.S. Yediyurappa (@BSYBJP) June 30, 2020ಅಪ್ರತಿಮ ಸಾಧಕರು, ರಾಷ್ಟ್ರದ ಹೆಮ್ಮೆಯ ಹಿರಿಯ ವಿಜ್ಞಾನಿ, ಭಾರತರತ್ನ ಪ್ರೊ ಸಿ.ಎನ್.ಆರ್. ರಾವ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಯುವಜನತೆಗೆ ಸ್ಫೂರ್ತಿಯಾಗಿ ತಮ್ಮ ದೇಶಸೇವೆ ಹೀಗೆಯೇ ಮುಂದುವರಿಯಲಿ, ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ. pic.twitter.com/BrqfOah0qn
— B.S. Yediyurappa (@BSYBJP) June 30, 2020
ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ದೇವರು ಅವರಿಗೆ ಆಯುರಾರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.