ETV Bharat / state

ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಈಗಲಾದರೂ ಜನರ ಕ್ಷಮೆ ಕೇಳಲಿ; ಸಿಎಂ ಬಿಎಸ್​ವೈ

ಕರಾಳ ಶಾಸನ ಜನಜೀವನದ ಮೇಲೆ ಬೀರಿದ ದುಷ್ಪರಿಣಾಮ 46 ವರ್ಷಗಳಾದ ಮೇಲೆಯೂ ಕಾಣುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ದೇಶದ ಜನರಲ್ಲಿ ಕ್ಷಮೆ ಕೇಳಬೇಕು ಆ ಮೂಲಕ ಅವರು ಮಾಡಿದ ಅಕ್ಷ್ಯಮ್ಯ ಅಪರಾಧವನ್ನು ಒಪ್ಪಿಕೊಳ್ಳಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.

cm bs yadiyurappa
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
author img

By

Published : Jun 25, 2021, 12:52 PM IST

Updated : Jun 25, 2021, 1:05 PM IST

ಬೆಂಗಳೂರು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಿ ಕರಾಳ ಶಾಸನ ಬರೆದಿರುವ ಕಾಂಗ್ರೆಸ್ ಪಕ್ಷವು ದೇಶದ ಜನತೆಯ ಕ್ಷಮೆಯಾಚಿಸುವ ಮೂಲಕ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 46 ವರ್ಷಗಳ ಹಿಂದೆ ಇದೇ ದಿನ ಅಂದಿನ ಪ್ರಧಾನಿ ಇಂದಿರಾಗಾಂಧಿ ಯಾವುದೇ ಕಾರಣ ಇಲ್ಲದೇ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಕೇವಲ ತನ್ನ ಖುರ್ಚಿ ಉಳಿವಿಗಾಗಿ ಇಂತಹ ತೀರ್ಮಾನ ಮಾಡಿದ್ದರು. ದೇಶದ ಅನೇಕ ನಾಯಕರು ಜೈಲುವಾಸ ಅನುಭವಿಸಬೇಕಾಯಿತು. ವಾಕ್ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ ಕಸಿದುಕೊಳ್ಳಲಾಯಿತು. ಇದನ್ನು ಅಂದು ಹಲವು ಪತ್ರಿಕೆಗಳು ಖಂಡಿಸಿ ಪ್ರತಿಭಟಿಸಿದ್ದವು ಎಂದರು.

ನಾವು ಜೈಲುವಾಸ ಅನುಭವಿಸಬೇಕಾಯಿತು:

ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ನಟಿ ಸ್ನೇಹಲತಾ ಜೈಲಿನಲ್ಲಿ ಸಾವನ್ನಪ್ಪಿದ್ದರು. ನಾನು ಸೇರಿದಂತೆ ಅನೇಕ ಕಾರ್ಯಕರ್ತರು ಜೈಲುವಾಸ ಅನುಭವಿಸಬೇಕಾಯಿತು. ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡೀಸ್, ದೇವೇಗೌಡ ಸೇರಿದಂತೆ ಎಲ್ಲರನ್ನೂ ಬಂಧಿಸಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಟ್ಟಿದ್ದರು. ನಮ್ಮನ್ನು ಮುಗಿಸುವ ಪ್ರಯತ್ನವೂ ನಡೆದಿತ್ತು. ಆನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಜನ ಅವರನ್ನು ತಿರಸ್ಕರಿಸಿದರು. ಈ ದಿನ ಬಿಜೆಪಿಯಿಂದ ಅಂದು ಬಂಧಿತರಾದವರ ಮನೆಗೆ ಹೋಗಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕರಾಳ ಶಾಸನ ಜನಜೀವನದ ಮೇಲೆ ಬೀರಿದ ದುಷ್ಪರಿಣಾಮ 46 ವರ್ಷಗಳಾದ ಮೇಲೆಯೂ ಕಾಣುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ದೇಶದ ಜನರಲ್ಲಿ ಕ್ಷಮೆ ಕೇಳಬೇಕು ಆ ಮೂಲಕ ಅವರು ಮಾಡಿದ ಅಕ್ಷಮ್ಯ ಅಪರಾಧವನ್ನು ಒಪ್ಪಿಕೊಳ್ಳಬೇಕು ಎಂದರು.

ಜೈಲಿನಲ್ಲೇ ನಮ್ಮನ್ನು ಮುಗಿಸುವ ಪ್ರಯತ್ನ ನಡೆದಿತ್ತು:

ಇಂದು ಮನೆ ಮನೆಗೆ ಹೋಗಿ ಗುರುತಿಸಿ ಸನ್ಮಾನ ಮಾಡುತ್ತಿರುವ ನಮ್ಮ ಕಾರ್ಯಕ್ರರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಜೈಲಿನಲ್ಲಿದ್ದಾಗ ಅಲ್ಲೇ ನಮ್ಮನ್ನು ಮುಗಿಸೋಕೆ ಪ್ರಯತ್ನ ಮಾಡಿದ್ದನ್ನು ಜೀವನ ಪೂರ್ತಿ ನೆನಪಿಟ್ಟುಕೊಳ್ಳಬೇಕು. ಜಯಪ್ರಕಾಶ್ ನಾರಾಯಣ್ ಪುಣ್ಯಾತ್ಮನ ಹೋರಾಟದಿಂದ ತುರ್ತು ಪರಿಸ್ಥಿತಿ ಅಂತ್ಯ ಆಯಿತು ಎಂದು ಹಳೆಯ ನೆನಪುಗಳನ್ನು ಸಿಎಂ ಮೆಲುಕು ಹಾಕಿದರು.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಮೊದಲು 113 ಸ್ಥಾನ ಗೆಲ್ಲಲಿ, ಆಮೇಲೆ ಸಿಎಂ ವಿಚಾರ: ಸಚಿವ ಭೈರತಿ ಬಸವರಾಜ್

Last Updated : Jun 25, 2021, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.