ETV Bharat / state

ಜನಪ್ರಿಯ ಬಜೆಟ್​​ಗಾಗಿ ಸಿಎಂ ಬೊಮ್ಮಾಯಿ ಸಿದ್ಧತೆ; ಹಣ ಹೊಂದಿಸಲು ರಾಜಸ್ವಗಳ ಮೇಲೆ ಕಣ್ಣು

author img

By

Published : Feb 5, 2023, 5:00 PM IST

ಫೆ.17ಕ್ಕೆ ರಾಜ್ಯ ಆಯವ್ಯಯ - ಚುನಾವಣಾ ವರ್ಷದಲ್ಲಿ ಮಂಡನೆ ಆಗುತ್ತಿರುವ ಬಜೆಟ್​ - ಜನಪ್ರಿಯ ಬಜೆಟ್​ ಮಂಡಿಸಲು ಸಿಎಂ ಬೊಮ್ಮಾಯಿ ಸಿದ್ಧತೆ

ಜನಪ್ರಿಯ ಬಜೆಟ್ ಗಾಗಿ ಹಣ ಹೊಂದಿಸಲು ಸಿಎಂ ಬೊಮ್ಮಾಯಿ ಕಸರತ್ತು: ವಿವಿಧ ರಾಜಸ್ವ ಜಮೆಗಳ ಮೇಲೆ ಕಣ್ಣು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ಜನಪ್ರಿಯ ಬಜೆಟ್ ಮಂಡನೆಗೆ ತಯಾರಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಆದಾಯ ಸಂಗ್ರಹಕ್ಕಾಗಿ ಕಸರತ್ತು ಆರಂಭಿಸಿದ್ದಾರೆ. ಹೆಚ್ಚಿನ ಆದಾಯ ಕ್ರೋಢೀಕರಣಕ್ಕಾಗಿ ಬೊಮ್ಮಾಯಿ‌ ಸರ್ಕಾರ ವಿವಿಧ ರಾಜಸ್ವ ಜಮೆಗಳ ಮೇಲೆ ಕಣ್ಣಿಟ್ಟಿದೆ. ಸಿಎಂ ಬೊಮ್ಮಾಯಿ ಫೆ.17ಕ್ಕೆ 2023-24 ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಚುನಾವಣೆ ವರ್ಷದಲ್ಲಿ ಸಿಎಂ ಸಹಜವಾಗಿಯೇ ಚುನಾವಣಾ ಬಜೆಟ್ ಮಂಡನೆ ಮಾಡಲಿದ್ದಾರೆ. ಅಂದರೆ ಮುಂದಿನ ಚುನಾವಣೆಯಲ್ಲಿ ಅನುಕೂಲವಾಗುವಂತೆ ಜನಪ್ರಿಯ ಘೋಷಣೆಗಳೊಂದಿಗೆ ಬಜೆಟ್ ಮಂಡಿಸುವುದು ಬಹುತೇಕ ಖಚಿತ. ಹೀಗಾಗಿ ಬಜೆಟ್​​ಗಾಗಿ ದೊಡ್ಡ ಪ್ರಮಾಣದಲ್ಲಿ ಹಣಕಾಸು ನಿರ್ವಹಣೆ ಮಾಡಬೇಕಾಗಿದೆ.

ಜನಪ್ರಿಯ ಯೋಜನೆ ಘೋಷಣೆಗಾಗಿ ಗರಿಷ್ಠ ಪ್ರಮಾಣದಲ್ಲಿ ಆದಾಯ ಸಂಗ್ರಹಿಸುವ ಅನಿವಾರ್ಯತೆ ಬಿಜೆಪಿ ಸರ್ಕಾರಕ್ಕಿದೆ. 2023-24 ಸಾಲಿನಲ್ಲಿ ದೊಡ್ಡ ಪ್ರಮಾಣದ ರಾಜಸ್ವ ವೆಚ್ಚ ಇರುವ ಕಾರಣ ಹೆಚ್ಚಿನ ರಾಜಸ್ವ ಜಮೆಗಳತ್ತ ಸಿಎಂ ಬೊಮ್ಮಾಯಿ‌ ಗಮನ ಹರಿಸಿದ್ದಾರೆ. ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರದಿದ್ದರೂ, ತಕ್ಕ ಮಟ್ಟಿಗೆ ಅನುದಾನ ಬರಲಿದೆ. ಸದ್ಯ ಸಿಎಂ ಬೊಮ್ಮಾಯಿ ತಮ್ಮ ಬಜೆಟ್ ಘೋಷಣೆಗಳಿಗೆ ಹಣ ಹೊಂದಿಸುವ ನಿಟ್ಟಿನಲ್ಲಿ ರಾಜಸ್ವ ಜಮೆ ಹೆಚ್ಚಿಸಲು ಕಸರತ್ತು ನಡೆಸುತ್ತಿದ್ದಾರೆ.

ಕೇಂದ್ರದ ಹಣದ ಮೇಲೆ ಬೊಮ್ಮಾಯಿ ಕಣ್ಣು: ಸಿಎಂ ಬೊಮ್ಮಾಯಿ ಈ ಬಾರಿ ಬಜೆಟ್​ಗಾಗಿ ಕೇಂದ್ರ ಸರ್ಕಾರ ಕೊಡಮಾಡುವ ಅನುದಾನ, ಹಣಕಾಸು ನೆರವಿನತ್ತ ಹೆಚ್ಚಿನ ಗಮನ‌ಹರಿಸಿದೆ. ಆ ಮೂಲಕ ಬಜೆಟ್ ಹೊರೆ ಕಡಿಮೆ ಮಾಡುವ ನಿರೀಕ್ಷೆ ಇಟ್ಟಿದೆ. ಚುನಾವಣೆ ವರ್ಷವಾಗಿರುವುದರಿಂದ ಜನರ ಮೇಲೆ ಹೊರೆ ಹಾಕುವಂತಿಲ್ಲ. ಹೀಗಾಗಿ ರಾಜ್ಯ ಮಟ್ಟದಲ್ಲೇ ಅತಿ ಹೆಚ್ಚು ಆದಾಯ ಸಂಗ್ರಹಿಸುವುದು ಕಷ್ಟ ಸಾಧ್ಯವಾಗಲಿದೆ. ಈ ಬಾರಿ ಕೇಂದ್ರ ಬಜೆಟ್​ನಲ್ಲಿ ರಾಜ್ಯ ನಿರೀಕ್ಷಿಸಿದಷ್ಟು ಕೊಟ್ಟಿಲ್ಲವಾದರೂ, ತೀರಾ ನಿರಾಶೆಯಾಗುವಂಥ ಪರಿಸ್ಥಿತಿಯೂ ಇಲ್ಲ. ಈ ಬಾರಿ ಕೇಂದ್ರ ಬಜೆಟ್ ನಲ್ಲಿ 15ನೇ ಹಣಕಾಸು ಆಯೋಗದ ವರದಿಯಂತೆ ಕರ್ನಾಟಕಕ್ಕೆ ಅಂದಾಜು 37,252 ಕೋಟಿ ರೂ. ಕೇಂದ್ರದ ತೆರಿಗೆ ಪಾಲು ಬರಲಿದೆ. ಕಳೆದ ವರ್ಷ ರಾಜ್ಯಕ್ಕೆ 29,783 ಕೋಟಿ ರೂ. ಕೇಂದ್ರದ ತೆರಿಗೆ ಪಾಲು ನಿಗದಿ ಮಾಡಲಾಗಿತ್ತು. ಪರಿಷ್ಕರಣೆ ಬಳಿಕ ಅದು 34,596 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನು, 2023-24 ಸಾಲಿನಲ್ಲಿ ಅದು 37,252 ಕೋಟಿ ರೂ. ಬರುವ ಅಂದಾಜು ಮಾಡಲಾಗಿದೆ. ಇದು ಸಿಎಂ ಬೊಮ್ಮಾಯಿ ನಿಟ್ಟುಸಿರು ಬಿಡುವಂತಾಗಿದೆ.

2021-22ರಲ್ಲಿ ಜಿಎಸ್ ಟಿ ಪರಿಹಾರ ನೀಡುವಿಕೆ ಕೊನೆಗೊಂಡಿದೆ. ಆದರೆ ಇನ್ನು ಕೇಂದ್ರದಿಂದ ರಾಜ್ಯಕ್ಕೆ 12,000 ಕೋಟಿ ರೂ. ಜಿಎಸ್​ಟಿ ಪರಿಹಾರ ರೂಪದಲ್ಲಿ ಹಣ ಬಾಕಿ ಉಳಿದು ಕೊಂಡಿದೆ. ಈ ಹಣದ ಮೇಲೆ ಸಿಎಂ ಬೊಮ್ಮಾಯಿ‌ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. 2023-24ರಲ್ಲಿ ಜಿಎಸ್​ಟಿ ಪರಿಹಾರವಾಗಿ 4,000 ಕೋಟಿ ರೂ. ಮತ್ತು ಮುಂದಿನ ವರ್ಷಗಳಲ್ಲಿ ತಲಾ 2,000 ಕೋಟಿ ರೂ.ನಂತೆ ನಿರೀಕ್ಷೆ ಇರಿಸಲಾಗಿದೆ. ಈ ಪರಿಹಾರ ಮೊತ್ತವನ್ನು ಆದಷ್ಟು ಬೇಗ ಪಾವತಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಿದ್ದಾರೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.

ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಸುಮಾರು 5,000 ಕೋಟಿ ರೂ. ಹಣ ನೀಡಿರುವುದು ಸಿಎಂ ಬೊಮ್ಮಾಯಿ‌ ಭಾರವನ್ನು ಕಡಿಮೆ ಮಾಡಿದೆ. ಇನ್ನು ರೈಲ್ವೇ ಯೋಜನಗಳಿಗೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ಕಲ್ಪಿಸಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಖುಷಿ ತಂದಿದೆ. ಜೊತೆಗೆ ಕೇಂದ್ರ ಬಜೆಟ್​ನಲ್ಲಿ 50 ವರ್ಷ ಅವಧಿಯ ಬಡ್ಡಿ ರಹಿತ ಸಾಲ ನೀಡುವುದನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ. ಇದು ಬಿಜೆಪಿ ಸರ್ಕಾರಕ್ಕೆ ಹೆಚ್ಚಿನ ಹಣಕಾಸು ಹೊಂದಿಸಲು ಅನುಕೂಲ ಮಾಡಿಕೊಡಲಿದೆ.

ರಾಜ್ಯದ ಸ್ವಂತ ತೆರಿಗೆ ಮೇಲೆ ಹೆಚ್ಚಿನ ನಿರೀಕ್ಷೆ: ಈ ಬಾರಿ ಸಿಎಂ ಬೊಮ್ಮಾಯಿ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯ ಸ್ವಂತ ತೆರಿಗೆಗಳನ್ನು ಸಂಗ್ರಹಿಸುವ ಬಗ್ಗೆ ಬಜೆಟ್ ಪೂರ್ವ ಸಿದ್ದತಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೋವಿಡ್ ಪರಿಣಾಮ ರಾಜಸ್ವ ಸಂಗ್ರಹದಲ್ಲಿ ತಕ್ಷಣ ಚೇತರಿಕೆ ಕಷ್ಟ ಎಂಬುದು ಸಿಎಂ ಬೊಮ್ಮಾಯಿಗೆ ಅರಿವಾಗಿದೆ. ಆದರೂ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ. 2023-24ರಲ್ಲಿ ಸುಮಾರು 1,99,019 ಕೋಟಿ ರಾಜಸ್ವ ಜಮೆಯ ಅಂದಾಜು ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಲ್ಲಿ ರಾಜಸ್ವ ಸ್ವಂತ ತೆರಿಗೆ ರೂಪದಲ್ಲಿ 1,40,067 ಕೋಟಿ ಸಂಗ್ರಹಿಸುವ ಅಂದಾಜು ಮಾಡಲಾಗಿದ್ದು, ಇನ್ನೂ ಹೆಚ್ಚಿನ ಸಂಗ್ರಹದ ಗುರಿ ಇಡಲಾಗಿದೆ.

2023-24ರಲ್ಲಿ ಜಿಎಸ್​ಟಿ ಸಂಗ್ರಹದಲ್ಲಿ ಶೇ 8 ರಿಂದ 10 ರಷ್ಟು ವೃದ್ಧಿ ಕಾಣುವ ನಿರೀಕ್ಷೆ ಇದೆ. ಇನ್ನು ಮಾರಾಟ ತೆರಿಗೆಯಲ್ಲಿ ಸುಮಾರು ಶೇ 8 ರಷ್ಟು ಬೆಳವಣಿಗೆಯಾಗುವ ಅಂದಾಜು ಇರಿಸಲಾಗಿದೆ. ಈಗಾಗಾಲೇ ಅಬಕಾರಿಯ ಪರಿಷ್ಕರಣಾ ದರ ಗರಿಷ್ಠ ಮಟ್ಟ ತಲುಪಿರುವುದರಿಂದ ಮುಂದಿನ ವರ್ಷ ಕನಿಷ್ಠ ಶೇ 1 ಅಬಕಾರಿ ಸುಂಕದ ಸಂಗ್ರಹದ ಬೆಳವಣಿಗೆಯ ಅಂದಾಜು ಮಾಡಲಾಗುತ್ತಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಇತ್ತ ನೋಂದಣಿ ತೆರಿಗೆ ಸಂಗ್ರಹದಲ್ಲಿ ಶೇ 10 ವೃದ್ಧಿ ಕಾಣುವ ಗುರಿಯನ್ನು ಹೊಂದಲಾಗಿದ್ದರೆ, ಮೋಟಾರು ವಾಹನ ತೆರಿಗೆಯಲ್ಲಿ ಮುಂದಿನ ವರ್ಷ ಶೇ 5 ಬೆಳವಣಿಗೆಯಾಗುವ ನಿರೀಕ್ಷೆ ಇರಿಸಲಾಗಿದೆ. ಇನ್ನು ತೆರಿಗೆಯೇತರ ರಾಜಸ್ವ ಪೈಕಿ ಗಣಿಗಾರಿಕೆಯ ಸಂಗ್ರಹ ಶೇ 12 ರಷ್ಟು ವೃದ್ಧಿಯಾಗುವ ನಿರೀಕ್ಷೆ ಇಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೇಂದ್ರಕ್ಕೆ ಹಣ ಬರುವುದು ಎಲ್ಲಿಂದ? ಹೆಚ್ಚು ಖರ್ಚು ಯಾವುದಕ್ಕೆ?: ₹ ಲೆಕ್ಕಾಚಾರದಲ್ಲಿ ಬಜೆಟ್‌ ವಿವರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.