ETV Bharat / state

ಕನ್ನಡದ ಕಂಪನ್ನು ಇಡೀ ನಾಡಿನಲ್ಲಿ ಬಿತ್ತುವುದೇ ಕರ್ನಾಟಕ ರಕ್ಷಣಾ ವೇದಿಕೆಯ ಧ್ಯೇಯೋದ್ದೇಶ: ಸಿಎಂ ಬೊಮ್ಮಾಯಿ - ತಾಯಿ ಭುವನೇಶ್ವರಿಯ ಆರ್ಶೀವಾದ

ತಾಯಿ ಭುವನೇಶ್ವರಿಯ ಆರ್ಶೀವಾದ ನಮ್ಮ ನಾರಾಯಣಗೌಡರ ಮೇಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Mar 24, 2023, 9:30 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕನ್ನಡದ ಕಂಪನ್ನು ಇಡೀ ನಾಡಿನಲ್ಲಿ ಬಿತ್ತಬೇಕೆಂಬ ಧ್ಯೇಯೋದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಟ್ಟುವ ಸಾಹಸವನ್ನು ರಾಜ್ಯಾಧ್ಯಕ್ಷ ನಾರಾಯಣಗೌಡರು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ 25ನೇ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದ ನಮ್ಮ ನಾರಾಯಣಗೌಡರ ಮೇಲಿದೆ. ಹಾಗಾಗಿ ಜಗತ್ತಿನ ಯಾವುದೇ ಶಕ್ತಿ ಅವರನ್ನು ತಡೆಯಲು ಸಾಧ್ಯವಿಲ್ಲ. ಅವರನ್ನು ಪ್ರಾರಂಭದ ದಿನಗಳಿಂದ ನಾನು ಬಲ್ಲೆ, ಅವರ ಪ್ರಯಾಣ ಸುಲಭವಾಗಿಲ್ಲ. 25 ವರ್ಷ ಕರವೇ ಕಟ್ಟುವಂತದ್ದು ಸುಲಭವಲ್ಲ. ಪ್ರಾರಂಭದ ದಿನಗಳಲ್ಲಿ ಅವರಿಗಾದ ತೊಂದರೆ ಒಂದಲ್ಲ ಎರಡಲ್ಲ. ಆದರೂ ಯಾವುದನ್ನು ಲೆಕ್ಕಿಸದೇ ಕನ್ನಡದ ಕಂಪನ್ನು ಇಡೀ ನಾಡಿನಲ್ಲಿ ಬಿತ್ತಬೇಕು. ಕನ್ನಡದ ಹುಲಿಗಳನ್ನು ತಯಾರಿಸಬೇಕು ಎನ್ನುವ ಧ್ಯೇಯೋದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಟ್ಟುವ ಸಾಹಸವನ್ನು ಮಾಡಿದ್ದಾರೆ ಎಂದರು.

ಆಧುನೀಕರಣ, ಜಾಗತೀಕರಣದಿಂದ ಕನ್ನಡಕ್ಕೆ ಕುತ್ತು ಬಂದಾಗ ಒಬ್ಬ ನಾರಾಯಣಗೌಡ ಪ್ರಾರಂಭ ಮಾಡಿದ ಕನ್ನಡದ ಕ್ರಾಂತಿ ನಿರಂತರವಾಗಿದೆ. ಜಾತಿ-ಮತ, ಭೇದ ಭಾವ ಇಲ್ಲದ ಕನ್ನಡವೇ ಸರ್ವಸ್ವವೆಂದು 25 ವರ್ಷ ತಮ್ಮ ಬದುಕನ್ನು ಪ್ರತಿಯೊಂದು ಕ್ಷಣವೂ ಕನ್ನಡಕ್ಕಾಗಿ ಮೀಸಲಿಟ್ಟಿದ್ದಾರೆ. ಯಾವುದೇ ಹಂಗಿಲ್ಲದೆ ಕೇವಲ ಕನ್ನಡದ ಹಂಗಿನಲ್ಲಿ ಕೆಲಸ ಮಾಡಿದ್ದಾರೆ. ಮುಂದಿನ 25 ವರ್ಷವು ಇವರ ಹಿತರಕ್ಷಣೆ ಮುಂದುವರೆಸಬೇಕಾಗಿದೆ. ಕಾವೇರಿ, ಕೃಷ್ಣ ಹೋರಾಟ ಎಲ್ಲದರಲ್ಲೂ ಕೂಡ ನಾರಾಯಣಗೌಡರು ಮುಂದಾಳತ್ವ ವಹಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಕನ್ನಡದ ವಿಷಯಕ್ಕೆ ಬಂದಾಗ ನಮ್ಮ ಸರ್ಕಾರ ರಾಜಿ ಮಾಡಿಲ್ಲ ಎಂದು ಒತ್ತಿ ಹೇಳಿದರು.

ಕರವೇ 25ನೇ ಬೆಳ್ಳಿ ಹಬ್ಬ ಸಂಭ್ರಮ
ಕರವೇ 25ನೇ ಬೆಳ್ಳಿ ಹಬ್ಬ ಸಂಭ್ರಮ

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಎಲ್ಲರಿಗೂ ಗೊತ್ತಿದೆ. ಕರ್ನಾಟಕದ 11 ಜಿಲ್ಲೆಗಳಲ್ಲೂ ಕಳೆದ 25 ವರ್ಷದ ಪಯಣದ ನಿಸ್ವಾರ್ಥತೆಯಿಂದ ಕೂಡಿದೆ. ಹಂತ ಹಂತವಾಗಿ ರಕ್ಷಣಾ ವೇದಿಕೆ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮತ್ತು ಸೇವೆಯನ್ನು ಮಾಡುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡರು 25 ವರ್ಷದಿಂದ ಯಾವುದೇ ಟೀಕೆ ಟಿಪ್ಪಣಿ ಇದ್ದರೂ ಕನ್ನಡದ ಅಭಿಮಾನಕ್ಕಾಗಿ ಇವರ ಕೆಲಸ ಅಪಾರವಾಗಿದೆ. ಈ ಬೆಳ್ಳಿಹಬ್ಬ ಆಚರಣೆ ಮಾಡುತ್ತಿರುವುದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ವಿಚಾರ. 65 ಕೋಟಿ ಕನ್ನಡಿಗರು ಈ ಸಂಸ್ಥೆ ಹಾಗೂ ಸಂಘಟನೆಯ ಮೇಲೆ ಅಪಾರವಾದ ವಿಶ್ವಾಸವನ್ನಿಟ್ಟಿದ್ದಾರೆ ಎಂದರು.

ತುಮಕೂರು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗಸ್ವಾಮಿಗಳು ಮಾತನಾಡಿ, ಒಬ್ಬ ವ್ಯಕ್ತಿಗೆ ವಯಸ್ಸಾದರೆ ಅವನ ಶಕ್ತಿ ಕುಂಠಿತವಾಗುತ್ತದೆ. ಆದರೆ ಒಂದು ಸಂಸ್ಥೆಗೆ ವಯಸ್ಸಾದರೆ ಅದರ ಶಕ್ತಿ ಹೆಚ್ಚಾಗುತ್ತದೆ ಎನ್ನುವುದಕ್ಕೆ ಕರವೇ ಸಾಕ್ಷಿಯಾಗಿದೆ. 25 ವರ್ಷಗಳಲ್ಲಿ ಕರ್ನಾಟಕದ ಉದ್ದಗಲಕ್ಕೆ ಅಷ್ಟೇ ಅಲ್ಲ ಬೇರೆ ಬೇರೆ ಕಡೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಂತ ರೀತಿಯಲ್ಲಿ ನಾರಾಯಣಗೌಡರು ದೊಡ್ಡ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಕನ್ನಡ ನಾಡಿನಲ್ಲಿ ಯಾವುದೇ ಕಷ್ಟಗಳು ಬಂದರೆ ಅದಕ್ಕೆ ಎದೆಯೊಡ್ಡಿ ನಿಲ್ಲುವ ಸಂಸ್ಥೆಯಿದೆ ಎಂದರೆ ಅದು ಕರವೇ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಕರವೇ 25ನೇ ಬೆಳ್ಳಿ ಹಬ್ಬ ಸಂಭ್ರಮ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆಯ ಅನೇಕ ಸಭೆಗಳಲ್ಲಿ ನಾನು ಭಾಗವಹಿಸಿದ್ದೇನೆ. ನಮ್ಮ ದೇಶದ ಯಾವ ರಾಜ್ಯದಲ್ಲೂ ಇಂತಹ ಸಂಸ್ಥೆಯಿಲ್ಲ. ನಾರಾಯಣಗೌಡರ ಬಳಗವು ದಿನದಿನಕ್ಕೆ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಈ ಸಂಸ್ಥೆ ನಂಬಿಕೆಯನ್ನು ಪಡೆಯುತ್ತಿದೆಯೇ ಹೊರತು ನಂಬಿಕೆ ಕಳೆದುಕೊಂಡಿಲ್ಲ. ಪ್ರತಿ ಹಳ್ಳಿಗಳಲ್ಲಿ ನಾರಾಯಣಗೌಡರ ಶಿಷ್ಯರು ಮತ್ತು ಕಾರ್ಯಕರ್ತರು ಹುಟ್ಟುತ್ತಿದ್ದಾರೆ. ಇದು ಸಂತೋಷದ ವಿಷಯವಾಗಿದೆ. ನಾಡಿನ ಯುವಕರನ್ನು ಬಡಿದೆಬ್ಬಿಸುವ ಮತ್ತು ಹುರುಪು ಕೊಡುವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ 25 ವರ್ಷಗಳನ್ನು ಕಳೆದು ಭದ್ರವಾದ ಅಡಿಪಾಯವನ್ನು ಹಾಕಿ ಮುನ್ನಡೆಯುತ್ತಿದೆ. ಒಬ್ಬ ವ್ಯಕ್ತಿ ಹೇಗೆ ತಾರುಣ್ಯದ 25 ವರ್ಷಕ್ಕೆ ಭದ್ರ ಬುನಾದಿಯನ್ನು ಹಾಕಿಕೊಂಡು ತನ್ನ ಉಳಿದ ಜೀವನಕ್ಕೆ ಬುನಾದಿಯನ್ನು ಮಾಡಿಕೊಂಡು ಮುನ್ನುಗ್ಗುತ್ತಾನೋ ಹಾಗೆ ಸಂಘಟನೆ ಬೆಳೆದು ನಿಂತಿದೆ. ಮುಂದಿನ 75 ವರ್ಷದ ಜೀವನಕ್ಕೆ ಸಂಘಟನೆ ಮುಂದಾಗಿದೆ.

ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿ ಮಾತನಾಡಿ, ಮುಂದೆ ಬಂಗಾರದ ವಜ್ರದ ಮಹೋತ್ಸವವನ್ನು ಸಂಘಟನೆ ಆಚರಿಸಬೇಕು ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಇಲ್ಲದಿದ್ದರೆ ಕನ್ನಡ ಚಿತ್ರೋದ್ಯಮ ಸಂಕಷ್ಟದಲ್ಲಿರುತ್ತಿತ್ತು. ರಕ್ಷಣಾ ವೇದಿಕೆ ನಮ್ಮ ನಟ ನಿರ್ಮಾಪಕರ ರಕ್ಷಣೆಗೆ ನಿಂತಿದೆ. ಈ ವೇದಿಕೆಯ ಆಶೀರ್ವಾದ ಸದಾ ನಮಗೆ ಬೇಕಾಗಿದೆ. ಕರ್ನಾಟಕಕ್ಕೆ ನೂರಾರು ನಾರಾಯಣಗೌಡರು ಬೇಕಾಗಿದ್ದಾರೆ ಎಂದು ನಟ, ನಿರ್ಮಾಪಕ ದ್ವಾರಕೀಶ್ ಹೇಳಿದರು.

ಇದನ್ನೂ ಓದಿ : ಒಕ್ಕಲಿಗರಿಗೆ ಶೇ 6, ಲಿಂಗಾಯತರಿಗೆ ಶೇ 7 ಮೀಸಲಾತಿ ಪ್ರಮಾಣ ಘೋಷಣೆ: ಮುಸ್ಲಿಮರ ಓಬಿಸಿ ಕೋಟಾ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.