ETV Bharat / state

ಜಿಎಸ್​ಟಿ ತೆರಿಗೆ ವಿಧಾನವನ್ನು ಸಮರ್ಥವಾಗಿ ನಿಭಾಯಿಸಿರುವ ರಾಜ್ಯ ಕರ್ನಾಟಕ: ಸಿಎಂ

ವಿಧಾನಸೌಧದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ವತಿಯಿದ ಜಿಎಸ್​ಟಿ ದಿನಾಚರಣೆ ಉದ್ಘಾಟನೆ ಹಾಗೂ ಮುಖ್ಯಮಂತ್ರಿಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

author img

By

Published : Jul 1, 2022, 10:39 PM IST

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜಿಎಸ್​ಟಿ ತೆರಿಗೆ ವಿಧಾನವನ್ನು ಸಮರ್ಥವಾಗಿ ನಿಭಾಯಿಸಿರುವ ರಾಜ್ಯ ಕರ್ನಾಟಕ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಎಸ್​ಟಿ ತೆರಿಗೆ ವಿಧಾನದ ತಂತ್ರಜ್ಞಾನ, ಅನುಸರಣೆ, ಹೊಸ ಉಪಕ್ರಮಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾದಾಗಲೂ ಸಮರ್ಥವಾಗಿ ನಿಭಾಯಿಸಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿನ ಸಧೃಡ, ಪರಿಣಿತ ತೆರಿಗೆ ಅಧಿಕಾರಿ ಸಿಬ್ಬಂದಿಗಳಿಂದ ಇಂತಹ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು. ಒಂದು ತೆರಿಗೆ ವಿಧಾನದಿಂದ ಹೊಸ ತೆರಿಗೆ ವಿಧಾನಕ್ಕೆ ಅತ್ಯಂತ ಸರಳವಾಗಿ ಅಳವಡಿಸಿಕೊಂಡಿರುವುದು ಅಭಿನಂದನೀಯ ಎಂದು ತಿಳಿಸಿದರು.

ಜಿಎಸ್​ಟಿ ಬಗ್ಗೆ ಹತ್ತು ವರ್ಷಗಳ ಕಾಲ ಚರ್ಚೆಯಾಗಿದೆ. ಜಿಎಸ್​ಟಿ ಬಿಲ್ ಅನ್ನು ಎಲ್ಲ ರಾಜ್ಯಗಳೊಂದಿಗೆ ಚರ್ಚಿಸಿ, ಎಲ್ಲರ ಸಹಮತಿಯನ್ನು ಪಡೆದು ದಿ. ಅರುಣ್ ಜೇಟ್ಲಿ ಕೇಂದ್ರ ಸಚಿವರಿದ್ದಾಗ ಜಾರಿಗೊಳಿಸಿದರು. ಒಂದು ತೆರಿಗೆಯ ವಿಧಾನ ಇನ್ನೊಂದು ತೆರಿಗೆಯ ವಿಧಾನಕ್ಕೆ ಹೋದಾಗ ಬಹಳಷ್ಟು ಅಕೌಂಟ್ಸ್ ಮತ್ತು ನಿರ್ವಹಣೆಯ ಸಮಸ್ಯೆಗಳಾಗುತ್ತವೆ. ರಾಜ್ಯ ಹಾಗೂ ಕೇಂದ್ರ ವಾಣಿಜ್ಯ ತೆರಿಗೆ, ವ್ಯಾಟ್ ವಿಧಾನವನ್ನು ನೋಡಿದ್ದೇವೆ.

ವಿಶೇಷ ತೆರಿಗೆ ಸ್ಲ್ಯಾಬ್​ಗಳನ್ನು ಒಪ್ಪಿಕೊಂಡಿದೆ: 1997-98 ರಲ್ಲಿ ವ್ಯಾಟ್ ತೆರಿಗೆ ಪದ್ಧತಿ ಪ್ರಾರಂಭಿಸಲಾಯಿತು. ಆ ಸಂದರ್ಭದಲ್ಲಿಯೂ ಹಲವು ಪ್ರಶ್ನೆಗಳು ಎದ್ದಿದ್ವು. ಜಿ ಎಸ್ ಟಿ ಯಾರಿಗೂ ಹೊರೆಯಾಗದೆ, ಉತ್ಪದಾನೆ, ಮಾರಾಟ ಪ್ರಕ್ರಿಯೆಯ ವಿವಿಧ ಹಂತದಲ್ಲಿ ತೆರಿಗೆಯನ್ನು ಹಾಕಲಾಗುತ್ತದೆ. ಟ್ಯಾಕ್ಸ್ ಸ್ಲ್ಯಾಬ್ ಗಳು ಆದಷ್ಟು ಕಡಿಮೆಯಿರಬೇಕು ಎನ್ನುವ ಉದ್ದೇಶವಿದ್ದರೂ ಕೂಡ ದೇಶಿಯ ಹಾಗೂ ಅಂತರರಾಜ್ಯ ವಹಿವಾಟು ಇದೆ. ಎಲ್ಲ ಉತ್ಪನ್ನಗಳಿಗೂ ತನ್ನದೇ ಆದ ಪ್ರಕ್ರಿಯೆಯ ವಿವಿಧ ಹಂತಗಳಿರುತ್ತವೆ. ಆದ್ದರಿಂದ, ಜಿಎಸ್​ಟಿ ವಿಧಾನದಲ್ಲಿ 3 ಸ್ಲ್ಯಾಬ್​ಗಳು ಹಾಗೂ ವಿಶೇಷ ತೆರಿಗೆ ಸ್ಲ್ಯಾಬ್​ಗಳನ್ನು ಒಪ್ಪಿಕೊಂಡಿದೆ ಎಂದರು.

ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಸೂಚನೆ: ಪ್ರಾರಂಭದಲ್ಲಿ ರಾಜ್ಯದ ತೆರಿಗೆಗಳಿಗೆ ಸಂಬಂಧಿಸಿದಂತೆ ಅವಶ್ಯಕತೆಯಿದ್ದಾಗ ತೆರಿಗೆಗಳಿಗೆ ಹೆಡ್ ರೂಂಗಳನ್ನು ಸೃಜಿಸಲಾಗಿದೆ. ಆದಾಯ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ತಳಹಂತದಲ್ಲಿನ ಚಟುವಟಿಕೆಗಳಿಂದ ನಮ್ಮ ಆರ್ಥಿಕತೆಯನ್ನು ನಿಗದಿಪಡಿಸುತ್ತದೆ. ಇಂತಹ ಸಮುದಾಯಗಳ ಮೇಲೆ ಹೆಚ್ಚಿನ ಗಮನ ಹರಿಸಿ. ಪ್ರದೇಶ ಹಾಗೂ ಸಮುದಾಯ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಪ್ರತಿ ವರ್ಷ ಮುಂದುವರೆಯಲಿದೆ: ದುಡಿಮೆಯೇ ದೊಡ್ಡಪ್ಪ ಎನ್ನುವ ಚಿಂತನೆಯನ್ನು ಇಟ್ಟುಕೊಂಡು ರಾಜ್ಯವನ್ನು ಕಟ್ಟಬೇಕಿದೆ. ರಾಜ್ಯದ ಪ್ರಗತಿ ಪ್ರತಿ ವರ್ಷ ಎಷ್ಟು ಮೂಲ ಬಂಡವಾಳವನ್ನು ಹೂಡಿಕೆ ಮಾಡುತ್ತೇವೆ ಎನ್ನುವುದರ ಮೇಲಿದೆ. ಕಳೆದ ವರ್ಷ ಒಟ್ಟು ಒಂದು ಲಕ್ಷ ಕೋಟಿ ಸಂಗ್ರಹವಾಗಿದೆ. ನಿಮ್ಮ ಆಸಕ್ತಿ, ಬದ್ಧತೆ, ಶ್ರಮವನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಇದು ಪ್ರತಿ ವರ್ಷ ಮುಂದುವರೆಯಲಿದೆ. ಉಳಿದವರಿಗೂ ಇದು ಪ್ರೇರಣೆಯಾಗಲಿ ಎನ್ನುವ ಚಿಂತನೆಯಿಂದ ಈ ಕೆಲಸ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ನೇರ ಪಾವತಿ ಪೌರ ಕಾರ್ಮಿಕರ ಸೇವೆ ಕಾಯಂಗೆ ಸರ್ಕಾರದ ಒಪ್ಪಿಗೆ: ಅನುಷ್ಠಾನಕ್ಕೆ ಸಮಿತಿ ರಚನೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.