ETV Bharat / state

ದಾರಿ ತಪ್ಪಿಸುವ, ಯಾಮಾರಿಸುವ ಯೋಜನೆಗೆ ಕಿವಿಗೊಡಬೇಡಿ : ಕಾಂಗ್ರೆಸ್ ಉಚಿತ ಯೋಜನೆಗಳಿಗೆ ಸಿಎಂ ತಿರುಗೇಟು - ಸಂಜೀವಿನಿ ಯೋಜನೆಗೆ ಆರ್ಥಿಕ ಸಹಾಯ‌

ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್​ ಪ್ರಚಾರದ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Mar 8, 2023, 5:40 PM IST

ಬೆಂಗಳೂರು: ಚುನಾವಣೆ ಬಂತು ಎಂದು ಈಗ ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ಕಾರ್ಡ್ ಹೆಸರಿನಲ್ಲಿ ಉಚಿತ ಯೋಜನೆಗಳ ಭರವಸೆ ಕೊಡುತ್ತಿದ್ದಾರೆ. ಅದಕ್ಕೆ ಏನಾದರೂ ಹಣ ಇಟ್ಟಿದ್ದಾರಾ? ನಿಮ್ಮನ್ನು ಯಾಮಾರಿಸುವ ಕೆಲಸ ನಡೆಯುತ್ತಿದೆ. ಉಚಿತ ಯೋಜನೆಗಳಿಗೆ ವರ್ಷಕ್ಕೆ 24 ಸಾವಿರ ಕೋಟಿ ಬೇಕು. ಯಾವುದಾದರೂ ಬ್ಯಾಂಕ್​ನಲ್ಲಿ ಹಣ ಇಟ್ಟಿದ್ದಾರಾ? ನಿಮಗೆ ಭಿಕ್ಷೆ ಬೇಕಿಲ್ಲ, ಅವಕಾಶ ಬೇಕು. ದಾರಿ ತಪ್ಪಿಸುವ, ಯಾಮಾರಿಸುವ ಯೋಜನೆಗೆ ಕಿವಿಗೊಡಬೇಡಿ, ನಾವು ಸ್ತ್ರೀ ಸಾಮರ್ಥ್ಯ ಯೋಜನೆ ಘೋಷಿಸಿದ್ದೆವು. ಅದರಂತೆ ಜಾರಿಗೆ ತಂದಿದ್ದೇವೆ ಎಂದು ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್ ಪ್ರಚಾರದ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಸ್ತ್ರೀ ಸಾಮರ್ಥ್ಯ- ನಮೋ ಸ್ತ್ರೀ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದರು. ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದು, ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಯೋಜನೆಯಡಿ 10 ಸಾವಿರ ಸ್ವ ಸಹಾಯ ಗುಂಪುಗಳಿಗೆ ತಲಾ 1 ಲಕ್ಷದಂತೆ 100 ಕೋಟಿ ವಿಶೇಷ ಬಂಡವಾಳ ನಿಧಿ ವಿತರಣೆಗೆ ಸಿಎಂ ಚಾಲನೆ ನೀಡಿದರು.

ನಂತರ ಮಾತನಾಡಿದ ಸಿಎಂ, ಕಾಂಗ್ರೆಸ್ ಪಕ್ಷದವರು ಈಗ ಉಚಿತ ಯೋಜನೆಗಳ ಹೆಸರಿನಲ್ಲಿ ಗ್ಯಾರಂಟಿ ಕಾರ್ಡ್ ಕೊಡ್ತಾರೆ? ಇದು ಯಾಕೆ? ಅದರಿಂದ ಏನಾಗುತ್ತದೆ. ಇದರ ಹಿಂದೆ ಏನಾದರೂ ಹಣ ಇಟ್ಟಿದ್ದಾರಾ? ನಿಮಗೆ ಭಿಕ್ಷೆ ಬೇಕಿಲ್ಲ, ಅವಕಾಶ ಬೇಕು. ದಾರಿ ತಪ್ಪಿಸುವ, ಯಾಮಾರಿಸುವ ಯೋಜನೆಗೆ ಕಿವಿಗೊಡಬೇಡಿ. ವರ್ಷಕ್ಕೆ 24 ಸಾವಿರ ಕೋಟಿ ದುಡ್ಡು ಬೇಕು. ಇದು ಕೊಡಲು ಸಾಧ್ಯನಾ? ಬ್ಯಾಂಕ್​ನಲ್ಲಿ ದುಡ್ಡು ಇಟ್ಟು ಕಾರ್ಡ್ ಕೊಡಲಿ ಬೇಕಾದರೆ ಎಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಘೋಷಣೆಯನ್ನ ಟೀಕಿಸಿದರು. ನಮ್ಮ ಹಣೆಬರಹ ನಾವೇ ಬರೆದುಕೊಳ್ಳಬೇಕು. ಓದುವ ಹೆಣ್ಣು ಮಕ್ಕಳಿಗೆ ಉಚಿತ ಬಸ್​​ಪಾಸ್​ ಕೊಡುತ್ತಿದ್ದೇವೆ. ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಪಾಸ್ ಕೊಡುತ್ತಿದ್ದೇವೆ. ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಿ. ನಿಮ್ಮ ಬದುಕಿನಲ್ಲಿ ಬೆಳಕು ಬರಲಿದೆ. ಇಂತಹ ಕಾರ್ಯಕ್ರಮ ನಮ್ಮ ಸರ್ಕಾರ ಮಾಡುತ್ತದೆ ಸಿಎಂ ಹೇಳಿದರು.

  • " class="align-text-top noRightClick twitterSection" data="">

ಸ್ತ್ರೀ ಸಂಘದಿಂದ ಜಿಡಿಪಿಗೆ ನೆರವು : ನನಗೆ ಇವತ್ತು ಬಹಳಷ್ಟು ಸಂತೋಷವಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಗೆ ಚಾಲನೆ ಕೊಟ್ಟಿರೋದಕ್ಕೆ ಸಂತೋಷವಾಗುತ್ತಿದೆ. ಪ್ರತಿವಾರ ಡಿಬಿಟಿ ಮೂಲಕ ಹಣ ಸಂದಾಯವಾಗಲಿದೆ. ಬ್ಯಾಂಕ್​ನಿಂದ ಪಡೆದ ಹಣವನ್ನ ಮಹಿಳೆಯರು ಸ್ವಯಂ ಉದ್ಯೋಗಕ್ಕೆ ವಿನಿಯೋಗಿಸಿ ಸ್ವಾವಲಂಬನೆಯಾಗಿ ಸ್ವತಂತ್ರವಾಗಿ ಉದ್ಯೋಗ ಮಾಡಬೇಕು. ಈ ಯೋಜನೆಯಿಂದ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬನೆಯಾಗಿ ಬದುಕಬಹುದು. 50 ಸಾವಿರ ಸ್ತ್ರೀ ಸಂಘಕ್ಕೆ 500 ಕೋಟಿ ಹಣ ಮೀಸಲಿಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಸ್ತ್ರೀ ಸಂಘದಿಂದ ಜಿಡಿಪಿಗೆ ನೆರವು ನಿರೀಕ್ಷಿಸಲಾಗಿದೆ ಎಂದರು.

ಮಹಿಳೆಯರ ದುಡಿಮೆಯಿಂದ ರಾಜ್ಯಕ್ಕೂ ಆದಾಯವಿದೆ. ನಿಮ್ಮಗಳ ಮೇಲೆ ನಮಗೆ ತುಂಬಾ ನಂಬಿಕೆ ಇದೆ. ಸರ್ಕಾರಕ್ಕಿಂತ ರಾಜ್ಯದ ಜನರು ಶ್ರೀಮಂತವಾಗಬೇಕು. ನಿಮ್ಮ ದುಡಿಮೆಯ ಶ್ರಮ ಸರ್ಕಾರದ ಬಂಡವಾಳ ಸೇರಿದರೆ ದೊಡ್ಡ ಉತ್ಪಾದನೆಯಾಗಲಿದೆ. ಸ್ಯಾನಿಟರಿ ನ್ಯಾಪ್ಕಿನ್ ಉತ್ಪಾದನೆ ಇಲ್ಲೇ ಮಾಡಬೇಕು. ಇದರಿಂದ ಬಡಮಕ್ಕಳಿಗೆ ಸಹಾಯವಾಗಲಿದೆ. ಒಂದುಕಡೆ ಆರೋಗ್ಯದ ದೃಷ್ಟಿಯಿಂದ ಇನ್ನೊಂದು ಕಡೆ ಸ್ಥಳೀಯ ಉತ್ಪಾದನೆಗೆ ಒತ್ತು ನೀಡಿದಂತಾಗಲಿದೆ. ಗುಣಮಟ್ಟದ ಉತ್ಪಾದನೆ ಮಾಡಿ ಬ್ರ್ಯಾಂಡ್ ಮಾಡಿ ಎಂದು ಕರೆ ನೀಡಿದರು.

  • ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ https://t.co/xW4gmKJ76A

    — Sanjeevini-KSRLPS Karnataka (@KarnatakaKsrlps) March 8, 2023 " class="align-text-top noRightClick twitterSection" data=" ">

ಶಿಕ್ಷಣ ಕ್ರಾಂತಿಯಾದರೆ ಸ್ವಾಭಿಮಾನದ ಕ್ರಾಂತಿಯಾಗಲಿದೆ: ಮಹಿಳೆಯರ ಸ್ವಯಂ ಉದ್ಯೋಗದಿಂದ ಗ್ರಾಮೀಣ ಪ್ರದೇಶದ ಆರ್ಥಿಕ ವ್ಯವಸ್ಥೆ ಏಳಿಗೆಯಾಗಲಿದೆ. 5 ಲಕ್ಷ ಉದ್ಯೋಗ ಈ ವರ್ಷವೇ ಸಿಗಲಿದೆ. ಇಂದು ಆರ್ಥಿಕ ಕ್ರಾಂತಿ, ಸಾಮಾಜಿಕ ಕ್ರಾಂತಿ, ಶಿಕ್ಷಣ ಕ್ರಾಂತಿಯಾದರೆ ಸ್ವಾಭಿಮಾನದ ಕ್ರಾಂತಿಯಾಗಲಿದೆ. ತಾವು ಫಲಾನುಭವಿಗಳಲ್ಲ. ಇದು ನಿಮ್ಮ ಹಕ್ಕು. ನೀವು ಪಾಲುದಾರರು. ಇದು ಸಣ್ಣ ಪ್ರಮಾಣದ ಬದಲಾವಣೆಯಲ್ಲ, ದೊಡ್ಡ ಪ್ರಮಾಣದ ಬದಲಾವಣೆ. ಎರಡು ಮೂರು ವರ್ಷದಲ್ಲಿ ದೊಡ್ಡ ಬದಲಾವಣೆ ಕಾಣುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಈ ಯೋಜನೆ ಮಹತ್ವ ಮಂದೆ ಗೊತ್ತಾಗಲಿದೆ. ನಿಜವಾದ ಸ್ತ್ರಿ ಶಕ್ತಿ ಏನು ಅನ್ನೋದು ಭವಿಷ್ಯದಲ್ಲಿ ತಿಳಿಯಲಿದೆ. ಈ ರಾಜ್ಯದ ಅಭಿವೃದ್ಧಿಗಾಗಿ ರೈತರು, ಮಹಿಳೆಯರು, ಕೂಲಿಕಾರರು, ದೀನದಲಿತರ ಬಳಿ ದುಡ್ಡು ಇಲ್ಲ. ಆದರೆ ಅವರಲ್ಲಿ ಬುದ್ದಿವಂತಿಕೆ ಇದೆ. ಇನ್ನೊಬ್ಬರ ಬಳಿ ದುಡ್ಡು ಕೇಳೋದು ಬೇಡ. ನಿಮ್ಮ ದುಡಿಮೆಯಿಂದ ನೀವು ಬದುಕಿರಿ ಎಂದು ಸಿಎಂ ಸಲಹೆ ನೀಡಿದರು.

ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರದಿಂದ ಹಲವು ಯೋಜನೆ: ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವತ್ಥ್​ ನಾರಾಯಣ್​, ರಾಜ್ಯದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆಯನ್ನ ಮಹಿಳೆಯರಿಗಾಗಿ ತಂದಿದ್ದೇವೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಿ ಮುಂದೆ ಬರಲು ಈ ಯೋಜನೆ ಸಹಕಾರಿಯಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ 500 ಕೋಟಿಯನ್ನ ಮೀಸಲಿಟ್ಟಿದೆ. ಆರಂಭದಲ್ಲಿ ಈಗ 100 ಕೋಟಿ ಬಿಡುಗಡೆ ಮಾಡಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಯೋಜನೆ ಹಮ್ಮಿಕೊಂಡಿದೆ. ಆರ್ಥಿಕ ವ್ಯವಸ್ಥೆ ಬಲಪಡಿಸಲು ಮಹಿಳೆಯರ ದೊಡ್ಡ ಕೊಡುಗೆ ಅಗತ್ಯವಿದೆ.

ಸಂಜೀವಿನಿ ಯೋಜನೆಗೆ ಆರ್ಥಿಕ ಸಹಾಯ‌ ನೀಡಲಾಗುತ್ತಿದೆ. ಭೂ ರಹಿತ ಮಹಿಳೆಯರಿಗೆ ನಮ್ಮ ಬಜೆಟ್​ನಲ್ಲಿ ವಿಶೇಷ ಆರ್ಥಿಕ ನೆರವನ್ನ ಮುಖ್ಯಮಂತ್ರಿ ಘೋಷಿಸಿದ್ದಾರೆ. ನಮ್ಮ ಸರ್ಕಾರ ನಿಮಗೆ ಎಲ್ಲಾ ರೀತಿಯ ಸಹಕಾರವನ್ನ ನೀಡಲಿದೆ. ನೀವು ಇನ್ನೊಂದು ಹೆಜ್ಜೆ ಮುಂದೆ ಬರಬೇಕು. ನೀವು ಮುಂದೆ ಸಾವಿರಾರು ಜನಕ್ಕೆ ಉದ್ಯೋಗ ನೀಡುವಂತಾಗಲಿ ಎಂದರು.

ಇದನ್ನೂ ಓದಿ : ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿರುವ ಬಗ್ಗೆ ವರದಿ ಇದೆ: ಕೆ ಎಸ್ ಈಶ್ವರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.