ETV Bharat / state

ರಾಜ್ಯದಲ್ಲಿ ಮುಂದುವರೆದ ಕೊರೊನಾ ಸ್ಫೋಟ: ನಾಳೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ - ಕೋವಿಡ್ ಕುರಿತು ಸಿಎಂ ವರ್ಚುವಲ್ ಸಭೆ

ಕೋವಿಡ್ ನಿಯಂತ್ರಣ ಕುರಿತು ಚರ್ಚೆ ನಡೆಸಲು ನಾಳೆ ತಜ್ಞರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಹಿರಿಯ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ ನಡೆಸಲಿದ್ದಾರೆ.

cm-basavaraj-bommai-to-hold-meeting-with-covid-experts-tomorrow
ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
author img

By

Published : Jan 16, 2022, 8:54 PM IST

ಬೆಂಗಳೂರು: ರಾಜ್ಯದಲ್ಲಿ ಕಠಿಣ ನಿಯಮ ಜಾರಿಗೊಳಿಸಿದ್ದರೂ ಕೋವಿಡ್​​ ಸ್ಫೋಟ ಮುಂದುವರೆದಿದ್ದು, ಈ ಕುರಿತು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹತ್ವದ ಸಭೆ ಕರೆದಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ಕೋವಿಡ್ ಕುರಿತು ವರ್ಚುವಲ್ ಮೂಲಕ ಸಿಎಂ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ತಜ್ಞರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಹಿರಿಯ ಸಚಿವರು, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರಾತ್ರಿ ನಿಷೇಧಾಜ್ಞೆ, ವಾರಾಂತ್ಯದ ನಿಷೇಧಾಜ್ಞೆ, ಸಿನಿಮಾ ಮಂದಿರ, ರೆಸ್ಟೋರೆಂಟ್ ಸೇರಿ ಎಲ್ಲಾ ಕಡೆ ಶೇ. 50ರ ನಿಯಮ ಜಾರಿ, ಮದುವೆ ಸಮಾರಂಭಗಳಿಗೆ ಜನರ ಮಿತಿ ಹೇರಲಾಗಿದೆ. ಆದರೂ ಕೋವಿಡ್ ಸೋಂಕು ಪ್ರಕರಣಗಳು ಮಾತ್ರ ಏರುತ್ತಲೇ ಇದೆ. ಸದ್ಯ ನಿತ್ಯ 30 ಸಾವಿರ ಸಂಖ್ಯೆಯನ್ನು ದಾಟಿದ್ದು, ಆತಂಕ ಮೂಡಿಸಿದೆ. ಈ ಕುರಿತು ನಾಳೆ ಮಹತ್ವದ ಸಮಾಲೋಚನೆ ನಡೆಯಲಿದೆ.

ಈಗಾಗಲೇ ಇರುವ ನಿಯಮವನ್ನು ಜನವರಿ 19ರ ಬದಲು ತಿಂಗಳಾಂತ್ಯದವರೆಗೂ ವಿಸ್ತರಿಸಲಾಗಿದೆ. ಮತ್ತಷ್ಟು ಬಿಗಿ ಕ್ರಮ ಅಗತ್ಯವಿದ್ದು, ಈ ಕುರಿತು ನಾಳಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಲಾಕ್​ಡೌನ್ ಮಾಡುವುದು ಬೇಡ ಎನ್ನುವುದೇ ಬಹುತೇಕರ ನಿಲುವಾಗಿದ್ದು, ಅದನ್ನು ಹೊರತುಪಡಿಸಿ ಏನೆಲ್ಲ ಕ್ರಮ ಕೈಗೊಳ್ಳಬಹುದು ಎನ್ನುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 34,047 ಮಂದಿಗೆ ಕೊರೊನಾ, ಸೋಂಕಿನಿಂದ 13 ಸಾವು: ಪಾಸಿಟಿವಿಟಿ ರೇಟ್​ ಶೇ.19..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.