ETV Bharat / state

ರಾಜ್ಯದ ಎಲ್ಲಾ ಹಳ್ಳಿಗಳ ಮನೆ ಬಾಗಿಲಿಗೆ ಜನಸೇವಕ ಯೋಜನೆ.. ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಚಾಲನೆ - ಜನಸ್ಪಂದನ ಯೋಜನೆಗೆ ಚಾಲನೆ

ಜನಸೇವಕ ಕಾರ್ಯಕ್ರಮವು ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ. ಈ ಯಶಸ್ಸು ಸರ್ಕಾರಕ್ಕೆ ಭದ್ರ ಬುನಾದಿಯಾಗಲಿದೆ. ಮುಂಬರುವ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸುವ ಕೆಲಸ ಮಾಡಲಿದ್ದೇವೆ. ರಾಜ್ಯೋತ್ಸವವು ಜನೋತ್ಸವ ಆಗಬೇಕು. ಆಡಳಿತ ಸುಧಾರಣೆ ನಮ್ಮೆಲ್ಲರ ಮನೆ ಬಾಗಿಲು ಮುಟ್ಟಿದಾಗ ಅದು ಆಗಲಿದೆ ಎಂದು ಸಿಎಂ ತಿಳಿಸಿದರು.

cm-basavaraj-bommai-inaugurated-janasevaka-yojana
ರಾಜ್ಯದ ಎಲ್ಲಾ ಹಳ್ಳಿಗಳ ಮನೆ ಬಾಗಿಲಿಗೆ... ಜನಸೇವಕ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ
author img

By

Published : Nov 1, 2021, 2:13 PM IST

Updated : Nov 1, 2021, 2:29 PM IST

ಬೆಂಗಳೂರು: ರಾಜ್ಯದ ಎಲ್ಲ ಹಳ್ಳಿಗಳ ಮನೆ ಬಾಗಿಲಿಗೆ ಜನವರಿ 26 ರಿಂದ ಜನಸೇವಕ ಬರಲಿದ್ದಾನೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿಂದು ವಿಧಾನಸೌಧದಲ್ಲಿ ಜನಸೇವಕ, ಜನಸ್ಪಂದನ ಹಾಗೂ ಸಾರಿಗೆ ಇಲಾಖೆಯ ಆನ್​ಲೈನ್ ಸೇವೆಗೆ ಮೂಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.

ಬಳಿಕ ಮಾತನಾಡಿದ ಸಿಎಂ, ಜನರ ಮನೆ ಮನೆ ಬಾಗಿಲಿಗೆ ಸೇವೆ ತಲುಪಿಸುವ ಜನಸೇವಕ ಯೋಜನೆಯನ್ನು ರಾಜ್ಯಾದ್ಯಂತ ಜನವರಿ 26ರಿಂದ ಜಾರಿಗೆ ತರಲಿದ್ದೇವೆ. ಬೆಂಗಳೂರಲ್ಲಿ ಪ್ರಾಯೋಗಿಕವಾಗಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸೇವಕ ಯೋಜನೆ ಜಾರಿಯಲ್ಲಿತ್ತು. ಅದನ್ನು ಜ.26ರಂದು ರಾಜ್ಯಾದ್ಯಂತ ವಿಸ್ತರಿಸಲಿದ್ದೇವೆ ಎಂದರು.

cm-basavaraj-bommai-inaugurated-janasevaka-yojana
ಜನಸೇವಕ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರಿನಾದ್ಯಂತ ಜನಸೇವಕ ಜಾರಿ:

ಬೆಂಗಳೂರಿನ ಐದು ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಜನಸೇವಕ ಯೋಜನೆಯನ್ನು ಇದೀಗ ಬೆಂಗಳೂರಿನ 28 ಕ್ಷೇತ್ರಗಳಿಗೂ ವಿಸ್ತರಿಸಲಾಗಿದೆ. ಜನಸೇವಕ ಮೂಲಕ ಎಂಟು ಇಲಾಖೆಗಳ ವ್ಯಾಪ್ತಿಯಲ್ಲಿ 58 ಸೇವೆಗಳನ್ನು ಒದಗಿಸಲಾಗುವುದು. ಬೆಂಗಳೂರು ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿದೆ. ಇಲ್ಲಿ ಅತಿ ಹೆಚ್ಚು ಜನರಿದ್ದು, ಇಲ್ಲಿಂದಲೇ ಸೇವೆ ಆರಂಭಿಸಲಾಗುವುದು. ತೊಂದರೆ ಆದರೆ ಇಲ್ಲಿಂದಲೇ ಸರಿಪಡಿಸೋಣ ಎಂದು ಸಿಎಂ ಹೇಳಿದರು.

ಈ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ. ಈ ಯಶಸ್ಸು ಸರ್ಕಾರಕ್ಕೆ ಭದ್ರ ಬುನಾದಿಯಾಗಲಿದೆ. ಮುಂಬರುವ ಸಮಸ್ಯೆ ದಿಟ್ಟವಾಗಿ ಎದುರಿಸುವ ಕೆಲಸ ಮಾಡಲಿದ್ದೇವೆ. ರಾಜ್ಯೋತ್ಸವ ಜನೋತ್ಸವ ಆಗಬೇಕು. ಆಡಳಿತ ಸುಧಾರಣೆ ನಮ್ಮೆಲ್ಲರ ಮನೆ ಬಾಗಿಲು ಮುಟ್ಟಿದಾಗ ಅದು ಆಗಲಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಪರಿಪೂರ್ಣ ಆಗಲು ನಾಗರಿಕರಿಗೆ ಸಹಾಯ ಬೇಕು. ಈ ಯೋಜನೆಯ ಯಶಸ್ವಿಗೊಳಿಸುವುದು ಅಧಿಕಾರಿಗಳ ಹೊಣೆಯಾಗಿದೆ ಎಂದರು.

ಜನಸೇವಕ ಯೋಜನೆಗೆ ಚಾಲನೆ ಕಾರ್ಯಕ್ರಮ

ಕರ್ನಾಟಕದ ಆಡಳಿತದಲ್ಲಿ ಇಂದು ಅತ್ಯಂತ ಮಹತ್ವದ ದಿನ. ಬದಲಾವಣೆಯ ಪರ್ವ ಪ್ರಾರಂಭವಾದ ದಿನ. ಆಡಳಿತ ಬೇರೆ, ಆಡಳಿತ ಮಾಡುವುದು ಬೇರೆ. ಜನ ಪ್ರತಿನಿಧಿಗಳು ಇರೋ ಸರ್ಕಾರ ಆಡಳಿತ ಮಾಡುವ ಕೆಲಸ ಮಾಡಬೇಕು. ಜನ ಹಿತ, ಜನಪರ ಕೆಲಸ ಮಾಡುವುದು ಆಡಳಿತ. ಕಾರ್ಯಕ್ರಮ ಅನುಷ್ಠಾನ ಮಾಡುವುದು ಆಡಳಿತ ಯಂತ್ರದ ಕೆಲಸ. ಆದರೆ ಇತ್ತೀಚಿನ ದಿನಗಳಲ್ಲಿ ಆಳುವವರು ಆಡಳಿತ ಮಾಡಲು ಹೋಗುತ್ತಿದ್ದಾರೆ. ಆಡಳಿತ ಮಾಡುವವರು ಆಳುವವರಾಗುತ್ತಿದ್ದು, ಜನಸ್ನೇಹಿ ಕೆಲಸ ಮಾಡಬೇಕು. ಕೆಳ ಹಂತದಲ್ಲಿ ನಾಗರಿಕರಿಗೆ ಮತ್ತು ಜನರಿಗೆ ಸೇವೆ ತಲುಪಿಸುವ ಕೆಲಸ ಆಗುತ್ತಿಲ್ಲ. ನಾಗರಿಕರು ಯಾವುದಾದರೂಕಚೇರಿಗೆ ಹೋದರೆ ಸುಲಭವಾಗಿ ಕೆಲಸ ಆಗಬೇಕು ಎನ್ನುವ ಸರ್ಕಾರ ನೆರವಾಗಲು ಮುಂದಾಗಿದೆ. ಕೆಳ ಹಂತದ ನಾಗರಿಕ ಸೇವೆಯೇ ಮರೀಚಿಕೆಯಾಗಿದೆ. ನಮ್ಮ ಸರ್ಕಾರದಿಂದ ಜನರ ಬಾಗಿಲಿಗೆ ಹೋಗುವ ಕೆಲಸ ಮಾಡುತ್ತಿದ್ದೇವೆ ಎಂಧು ತಿಳಿಸಿದರು.

4.11ಲಕ್ಷ ಪಡಿತರ ಕಾರ್ಡ್​ಗೆ ಅನುಮೋದನೆ:

ಇದೇ ವೇಳೆ ಸಿಎಂ 4.11 ಪಡಿತರ ಕಾರ್ಡ್​ಗಳಿಗೆ ಅನುಮೋದನೆ ನೀಡಿದರು. ಅರ್ಜಿ ಸಲ್ಲಿಕೆಯಾಗಿರುವ 2.66 ಲಕ್ಷ ಬಿಪಿಎಲ್, 1.45 ಲಕ್ಷ ಎಪಿಎಲ್ ಕಾರ್ಡ್​​ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಜನಸ್ಪಂದನ ಸೇವೆಗೆ ಚಾಲನೆ:

ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಜನಸ್ಪಂದನ ಸೇವೆಗೆ ಸಿಎಂ ಚಾಲನೆ ನೀಡಿದರು. ಅಲ್ಲದೆ 1902 ಸಹಾಯವಾಣಿ, ಮೊಬೈಲ್ ಆ್ಯಪ್, ವೆಬ್ ಪೋರ್ಟಲ್​ಗೆ ಕೂಡ ಚಾಲನೆ ನೀಡಿದರು. ಸರ್ಕಾರದ ವಿವಿಧ ಇಲಾಖೆಗಳ ಯೋಜನೆ, ಸೇವೆಗಳ ಕುರಿತಂತೆ ಇರುವ ಕುಂದುಕೊರತೆಗಳನ್ನು ದಾಖಲಿಸಲು ಜನಸ್ಪಂದನ ಕಾಗದ ರಹಿತ ತಾಂತ್ರಿಕ ವೇದಿಕೆಯನ್ನು ಒದಗಿಸಲಿದೆ. ಇದೇ ವೇಳೆ 1902 ಸಹಾಯವಾಣಿಗೆ ಸ್ವತ: ಸಿಎಂ ಕರೆ ಮಾಡಿ ಚಾಲನೆ ಒದಗಿಸಿದರು.

ಈ ಸೇವೆಯಡಿ ನಾಗರಿಕರು ತಾವು ದಾಖಲಿಸಿದ ದೂರುಗಳ ನಿವಾರಣೆಗಾಗಿ ಕೈಗೊಂಡ ಕ್ರಮಗಳನ್ನು ಪರಿಶೀಲನೆ ಮಾಡಲಾಗುತ್ತದೆ. ನಿಗದಿತ ಅವಧಿಯೊಳಗೆ ಕುಂದು ಕೊರತೆ ನಿವಾರಣೆ ಮಾಡಲಾಗುತ್ತದೆ. ಯಾವುದೇ ಕೊಂದು ಕೊರತೆ ನಿಗದಿತ ಕಾಲಾವಧಿಯೊಳಗೆ ನಿವಾರಿಸದಿದ್ದಲ್ಲಿ, ಅದು ಸ್ವಯಂ ಪ್ರೇರಿತವಾಗಿ ಮುಂದಿನ ಮೇಲಧಿಕಾರಿಗೆ ರವಾನಿಸಲ್ಪಡುತ್ತದೆ. ದೂರು ನಿವಾರಿಸಲು ಕ್ರಮ ಕೈಗೊಳ್ಳದ ಅಧಿಕಾರಿಗೆ ಸ್ವಯಂಚಾಲಿತವಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುತ್ತದೆ.

ಸಾರಿಗೆ ಇಲಾಖೆಯ ಸಂಪರ್ಕರಹಿತ ಆನ್​ಲೈನ್ ಸೇವೆಗೆ ಚಾಲನೆ:

ಆಡಳಿತ ಸುಧಾರಣಾ ಕ್ರಮಗಳ ಜಾರಿಗೆ ಮುಂದಾದ ಸರ್ಕಾರ ಜನಸೇವಕ, ಜನಸ್ಪಂದನ, ಜೊತೆಗೆ ಸಾರಿಗೆ ಇಲಾಖೆಯ 30 ಸಂಪರ್ಕ ರಹಿತ ಆನ್​​ಲೈನ್ ಸೇವೆಗಳನ್ನು ಸಿಎಂ ಲೋಕಾರ್ಪಣೆ ಮಾಡಿದರು. 60 ಲಕ್ಷ ಜನ ಸಾರಿಗೆ ಇಲಾಖೆ ಕಚೇರಿಗೆ ಹೋಗುತ್ತಾರೆ, ಅದನ್ನು ತಪ್ಪಿಸಲು 30 ಕಾರ್ಯಕ್ರಮ ನೀಡುತ್ತಿದ್ದೇವೆ. ಎಲ್ಎಲ್ಆರ್, ಎಲ್ಎಲ್​ಆರ್ ಹೆಸರು ಬದಲಾವಣೆ, ನಿರ್ವಾಹಕರ ಪರವಾನಿಗೆ, ಪರವಾನಿಗೆ ನವೀಕರಣ, ಅಂತರಾಷ್ಟ್ರೀಯ ಡಿಎಲ್, ವಾಹನ ನೋಂದಣಿ ಸೇರಿದಂತೆ 30 ವಿವಿಧ ಸೇವೆಗಳನ್ನು ಆನ್​​ಲೈನ್ ಮೂಲಕ ಒದಗಿಸಲಾಗುವುದು ಎಂದರು.

ಇದನ್ನೂ ಓದಿ: 'MES' ಸಂಘಟನೆ ಮೂಲೆ ಗುಂಪಾಗಿದ್ದು, ಮಹಾರಾಷ್ಟ್ರದಲ್ಲಿಯೂ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Last Updated : Nov 1, 2021, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.