ETV Bharat / state

103ರ ಹರೆಯದಲ್ಲೂ ತೊಗಲುಗೊಂಬೆ ಕಲೆಯೇ 'ಜೀವ'ನ: ಭೀಮವ್ವನಿಗೆ ಸಿಎಂ ಸನ್ಮಾನ - togalu gombe artist Bhimavva

ಹಿಂದೆಲ್ಲಾ ಬಯಲಾಟ, ಸಿನಿಮಾ, ನಾಟಕ, ಬಯಲಾಟಗಳು ಯಾವುದೂ ಇರಲಿಲ್ಲ. ಕೇವಲ ತೊಗಲುಗೊಂಬೆಯಾಟ, ಕಿನ್ನರಜೋಗಪ್ಪ ಆಟಗಳು ಪರಂಪರೆಯಾಗಿ ಬಂದವು ಎನ್ನುತ್ತಾರೆ 103 ವರ್ಷದ ಭೀಮವ್ವ.

CM basavaraj bommai honored to the togalu gombe artist Bhimavva
103 ವರ್ಷದ ಹರೆಯದಲ್ಲೂ ತೊಗಲುಗೊಂಬೆ ಕಲೆಯೇ 'ಜೀವ'ನ
author img

By

Published : Oct 1, 2021, 9:53 PM IST

ಬೆಂಗಳೂರು: ನನಗೆ 103 ವರ್ಷ. ಆರು ಮಂದಿ ಮಕ್ಕಳು, 12 ಮಂದಿ ಮೊಮ್ಮಕ್ಕಳು, 16 ಮಂದಿ ಮರಿಮೊಮ್ಮಕ್ಕಳು ಇದ್ದಾರೆ. ತೊಗಲುಗೊಂಬೆ ಆಟ ಆಡಿಸುವ ಕಸುಬನ್ನು ಇಂದಿಗೂ ಮಾಡುತ್ತೇವೆ. ಗೊಂಬೆಯಾಟವನ್ನು ಮಕ್ಕಳಿಗೂ, ಮೊಮ್ಮಕ್ಕಳಿಗೂ ಕಲಿಸಿದ್ದೇನೆ ಎನ್ನುತ್ತಾರೆ ಕೊಪ್ಪಳದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ.

ಈಟಿವಿ ಭಾರತದ ಜೊತೆ ಮಾತನಾಡಿರುವ ಅವರು, ಹಿಂದೆ ಬಯಲಾಟ, ಸಿನಿಮಾ, ನಾಟಕ, ಬಯಲಾಟಗಳು ಯಾವುದೂ ಇರಲಿಲ್ಲ. ಕೇವಲ ತೊಗಲುಗೊಂಬೆಯಾಟ, ಕಿನ್ನರಜೋಗಪ್ಪ ಆಟಗಳು ಪರಂಪರೆಯಾಗಿ ಬಂದವು. ನನ್ನ ಕುಟುಂಬ ಈಗಲೂ ಗೊಂಬೆಯಾಟ ಆಡುತ್ತಾ ಬರುತ್ತಿದೆ ಎನ್ನುತ್ತಾ ಗೊಂಬೆಯಾಟದ ಪದವೊಂದನ್ನು ಹಾಡಿ ಲವಲವಿಕೆಯಿಂದ ಮಾತಾಡಿದರು ಭೀಮವ್ವ.

103ರ ಹರೆಯದಲ್ಲೂ ತೊಗಲುಗೊಂಬೆ ಕಲೆಯೇ 'ಜೀವ'ನ

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಹಿರಿಯ ನಾಗರಿಕ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಭೀಮವ್ವ ಅವರನ್ನು ಸನ್ಮಾನಿಸಲಾಯಿತು. ಭೀಮವ್ವ ಅವರಿಗೆ 103 ವರ್ಷವಾಗಿದ್ದರೂ ಮುಂಜಾನೆ 4 ಗಂಟೆಗೆ ತನ್ನ ದಿನಚರಿ ಆರಂಭಿಸುತ್ತಾರೆ. ಯಾವ ಖಾಯಿಲೆಯೂ ಇಲ್ಲದೆ ಆರೋಗ್ಯವಾಗಿದ್ದಾರೆ. ಸಾಮಾನ್ಯ ಬಿಪಿ, ಶುಗರ್ ಕೂಡಾ ಇಲ್ಲದೆ ಆರೋಗ್ಯಕರ ಜೀವನ ನಡೆಸುತ್ತಿರುವುದು ವಿಶೇಷ.

ದೇಶ ವಿದೇಶದಲ್ಲೂ ಕಲಾಸೇವೆ:

ಈಕೆ ಅಮೆರಿಕ ಪ್ಯಾರಿಸ್​, ಸ್ವಿಟ್ಜರ್​ಲ್ಯಾಂಡ್​, ಇಟಲಿ, ಇರಾನ್​ ಮತ್ತು ಇರಾಕ್​ ಹಾಗೂ ದುಬೈ ಸೇರಿದಂತೆ ಇನ್ನೂ ಹತ್ತು ಹಲವು ದೇಶಗಳಿಗೆ ತೆರಳಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.

ಸಂದ ಪ್ರಶಸ್ತಿಗಳು:

ಇವರ ಈ ಕಾರ್ಯಕ್ಕೆ ಹಲವಾರು ಸಂಘ ಸಂಸ್ಥೆಗಳು ಸೇರಿದಂತೆ ಸರ್ಕಾರ ಕೂಡ ಸನ್ಮಾನಿಸಿ ಪ್ರಶಸ್ತಿ ನೀಡಿವೆ. ಈವರೆಗೆ ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ಜಾನಪದ ಶ್ರೀ ಪ್ರಶಸ್ತಿ ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

ತಮ್ಮ 14 ನೇ ವಯಸ್ಸಿಗೆ ತೊಗಲುಗೊಂಬೆಯಾಟವನ್ನು ಕರಗತ ಮಾಡಿಕೊಂಡ ಭೀಮವ್ವ ಈಗಲೂ ಕೂಡ ರಾಮಾಯಣ, ಮಹಾಭಾರತದಂತಹ ಮಹಾನ್ ಕಥೆಗಳನ್ನು ಸಲೀಸಾಗಿ ತಮ್ಮ ಕಲೆಯ ಮೂಲಕ ತೋರ್ಪಡಿಸುವ ಶಕ್ತಿ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.