ಬೆಂಗಳೂರು: ಉಪ ಚುನಾವಣಾ ಅಖಾಡಕ್ಕೆ ಧುಮುಕಲು ಸಿಎಂ ಯಡಿಯೂರಪ್ಪ ಸಜ್ಜಾಗಿದ್ದು, ಇಂದು ಹೆಚ್‌ಎಎಲ್‌ನಿಂದ ವಿಶೇಷ ಹೆಲಿಕಾಪ್ಟರ್ನಲ್ಲಿ ಬೆಳಗಾವಿಗೆ ತೆರಳಿ, ಅಥಣಿ, ಕಾಗವಾಡ, ಗೋಕಾಕ್‌ನಲ್ಲಿ ಅನರ್ಹರ ಪರ ಪ್ರಚಾರ ನಡೆಸಲಿದ್ದಾರೆ.
ಇಂದಿನಿಂದ ನನ್ನ ಚುನಾವಣಾ ಪ್ರಚಾರ ಆರಂಭವಾಗ್ತಿದೆ. ಮೂರನೇ ತಾರೀಖಿನ ಒಳಗೆ ಮತ್ತೊಂದು ಬಾರಿ 15 ವಿಧಾನಸಭಾ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗಲಿದ್ದೇನೆ. ವಾತಾವರಣ ನಮ್ಮ ನಿರೀಕ್ಷೆಗೂ ಮೀರಿ ತುಂಬಾ ಚೆನ್ನಾಗಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಯಾವುದೇ ಉತ್ತರವನ್ನ ಕೊಡಲು ಇಷ್ಟಪಡುವುದಿಲ್ಲ. ನೂರಕ್ಕೆ ನೂರು 15 ಕ್ಷೇತ್ರಗಳನ್ನ ಗೆಲ್ತೀವಿ. 9ನೇ ತಾರೀಖು ಫಲಿತಾಂಶ ಬಂದ ಮೇಲೆ ಜನ ಯಾರ ಜೊತೆಗಿದ್ದಾರೆ ಅನ್ನೊದು ಗೊತ್ತಾಗುತ್ತೆ. ಬರುವ ಮೂರು ವರ್ಷಗಳಲ್ಲಿ ಕರ್ನಾಟಕ ರಾಜ್ಯವನ್ನ ಮಾದರಿ ರಾಜ್ಯವನ್ನಾಗಿ ಮಾಡುವುದೇ ನನ್ನ ಸಂಕಲ್ಪ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುಭದ್ರ ಸರ್ಕಾರ
ರಾಜ್ಯದಲ್ಲಿ ಅತಂತ್ರ ಸ್ಥಿತಿ ಉಂಟಾಗಬೇಕು ಅನ್ನೋದೇ ಕಾಂಗ್ರೆಸ್, ಜೆಡಿಎಸ್ ನಾಯಕರ ಉದ್ದೇಶ. ಶಾಸಕರಾಗಿದ್ದವರು, ಮಂತ್ರಿಯಾಗಿದ್ದವರು ರಾಜೀನಾಮೆ ಕೊಟ್ಟು ಆ ಸರ್ಕಾರ ತೊರೆದು ಬಂದಿದ್ದಾರೆ. ಅದರ ಉದ್ದೇಶ ರಾಜ್ಯದಲ್ಲಿ ಸುಭದ್ರ ಸರ್ಕಾರ ಬರಬೇಕು ಅನ್ನೋದು. ಇದೆಲ್ಲ ಜನರಿಗೆ ಗೊತ್ತಾಗಿದೆ. ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಅಂತ ವಿಶ್ವಾಸದ ಮಾತುಗಳನ್ನ ಆಡಿದರು.