ETV Bharat / state

ಚುನಾವಣೆಗೆ ಮುನ್ನ ನೀಡುವ ಭರವಸೆ ಈಡೇರಿಸುವ ಪಕ್ಷ ಕಾಂಗ್ರೆಸ್: ಸಿಎಂ ಅಶೋಕ್ ಗೆಹ್ಲೋಟ್ - ಪ್ರತಿ ಮನೆಗೆ 200 ಯುನಿಟ್ ವಿದ್ಯುತ್

ಕರ್ನಾಟಕದ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪ್ರಗತಿ ಬೇಕಾಗಿದೆಯೇ ಹೊರತು ಬಿಜೆಪಿಯ ದ್ರೋಹವಲ್ಲ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

cm-ashok-gehlot-reaction-on-bjp
ಚುನಾವಣೆಗೆ ಮುನ್ನ ನೀಡುವ ಭರವಸೆ ಈಡೇರಿಸುವ ಪಕ್ಷ ಕಾಂಗ್ರೆಸ್: ಸಿಎಂ ಅಶೋಕ್ ಗೆಹ್ಲೋಟ್
author img

By

Published : May 1, 2023, 10:56 PM IST

ಬೆಂಗಳೂರು: ತಾನು ಚುನಾವಣೆಗೂ ಮುನ್ನ ನೀಡುವ ಭರವಸೆಗಳನ್ನು ಈಡೇರಿಸುವ ಪಕ್ಷ ಎಂದರೆ ಕಾಂಗ್ರೆಸ್. ಕಾಂಗ್ರೆಸ್ ಪಕ್ಷದ ಈ ಯೋಜನೆಗಳು ಬಿಜೆಪಿಯ ನಿದ್ದೆಗೆಡಿಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಆರು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ತೋರಿಸಿದೆ ಎಂದರು.

ಸುಳ್ಳಿನ ಪಕ್ಷವಾಗಿರುವ ಬಿಜೆಪಿಗೆ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ನೋಡಿ ಸಹಿಸಲಾಗುತ್ತಿಲ್ಲ. ಬಿಜೆಪಿ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಗಂಗಾ ನದಿ ಶುಚಿ, ಬುಲೆಟ್ ರೈಲು ಆರಂಭ, ಎಲ್ಲರ ಖಾತೆಗೆ 15 ಲಕ್ಷ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂಬ ಸುಳ್ಳನ್ನು ಹೇಳಿ ಅಧಿಕಾರಕ್ಕೆ ಬಂದಿತ್ತು. ಆದರೆ ಅವರ ಎಲ್ಲಾ ಭರವಸೆಗಳು ಕೇವಲ ಗಿಮಿಕ್ ಆಗಿದ್ದವು. ಬಿಜೆಪಿಯ ಈ ಸುಳ್ಳಿನ ಭರವಸೆಗಳಿಂದ ಬೇಸತ್ತಿರುವ ಜನರು ಈಗ ಜಾಗೃತರಾಗಿದ್ದಾರೆ. ರಾಜಸ್ಥಾನದ ಬಿಕನೇರ್ ನಿಂದ ಬೆಂಗಳೂರಿನವರೆಗೆ, ಉದಯಪುರದಿಂದ ಉಡುಪಿವರೆಗೆ ಬಿಜೆಪಿಯ ಸುಳ್ಳಿನ ಭರವಸೆಗಳಿಂದ ಹತಾಶರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈಗ ಕರ್ನಾಟಕ ರಾಜ್ಯದ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪ್ರಗತಿ ಬೇಕಾಗಿದೆಯೇ ಹೊರತು ಬಿಜೆಪಿಯ ದ್ರೋಹವಲ್ಲ. ಬಿಜೆಪಿಯ 40% ಕಮಿಷನ್, ಪೇಸಿಎಂ ಸರ್ಕಾರ ರಾಜ್ಯದ ಜನರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದು, ನೈತಿಕತೆ, ಮಾನವೀಯ ಮೌಲ್ಯಗಳನ್ನು ಬದಿಗೊತ್ತಿ, ಸಾಮಾಜಿಕ ರಕ್ಷಣೆ ಬಲಿಕೊಟ್ಟು ರಾಜ್ಯವನ್ನು ಲೂಟಿ ಮಾಡಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಸಾಮಾಜಿಕ ಸುರಕ್ಷತೆಯ ಸಾಕ್ಷಿಯಾಗಿ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಐದು ವರ್ಷಗಳ ಆಡಳಿತ ಮಾಡಿರುವ ಬಿಜೆಪಿ ಸರ್ಕಾರ ಹಳೇ ಪಿಂಚಣಿ ವ್ಯವಸ್ಥೆ ಜಾರಿ ಬಗ್ಗೆ ತಿಳಿಯಲು ರಾಜಸ್ಥಾನದ ಕಡೆ ತಿರುಗಿ ನೋಡುತ್ತಾರೆ. ಸಾಮಾಜಿಕ ಭದ್ರತೆ ಮತ್ತು ಮಹಿಳೆಯರ ಸಬಲೀಕರಣ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ದೂರದೃಷ್ಠಿಯಾಗಿದೆ ಎಂದು ವಿವರಿಸಿದರು.

ಇಂದಿರಾ ಗಾಂಧಿ ಗ್ಯಾಸ್ ಸಿಲಿಂಡರ್ ಯೋಜನೆ ಮೂಲಕ 500 ರೂ.ಗೆ ಸಿಲಿಂಡರ್ ನೀಡಿದ ದೇಶದ ಮೊದಲ ರಾಜ್ಯ ರಾಜಸ್ಥಾನವಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಹೊರೆ ಇಳಿಸಲು ಪ್ರತಿ ತಿಂಗಳು ಪ್ರತಿ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ನೀಡಲಿದೆ. ರಾಜಸ್ಥಾನದಲ್ಲಿ 100 ಯುನಿಟ್ ಮನೆಬಳಕೆಗೆ ಹಾಗೂ 2 ಸಾವಿರ ಯುನಿಟ್ ಕೃಷಿ ಉದ್ದೇಶಕ್ಕೆ ಉಚಿತವಾಗಿ ನೀಡಲಾಗಿದ್ದು, ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ಪ್ರತಿ ತಿಂಗಳು ನೀಡಲಾಗುವುದು. ರಾಜಸ್ಥಾನದಲ್ಲಿ 1 ಕೋಟಿ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಉದ್ದೇಶದಿಂದ ಪಿಂಚಣಿ ನೀಡುತ್ತಿದ್ದು, ಅದೇ ರೀತಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಾಸಿಕ ಪಿಂಚಣಿಯನ್ನು ಅಗತ್ಯ ಫಲಾನುಭವಿಗಳಿಗೆ ನೀಡಲಿದೆ ಎಂದು ಹೇಳಿದರು.

ರಾಜಸ್ಥಾನದಲ್ಲಿ ಆರೋಗ್ಯ ಹಕ್ಕು, ಯೋಜನೆ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲಾಗಿದೆ. ಚಿರಂಜೀವಿ ಆರೋಗ್ಯ ವಿಮಾ ಯೋಜನೆ ಮೂಲಕ 25 ರಕ್ಷ ಮೊತ್ತದ ಆರೋಗ್ಯ ವಿಮೆ ಹಾಗೂ 10 ಲಕ್ಷ ಅಪಘಾತ ವಿಮೆಯನ್ನು ಫಲಾನುಭವಿ ಕುಟುಂಬಗಳಿಗೆ ನೀಡಿದೆ. ಕರ್ನಾಟಕ ರಾಜ್ಯದ ಮತದಾರರು ಮತದಾನ ಮಾಡಲು ಹೋದಾಗ ನಿಮ್ಮ ಕುಟುಂಬದ ಸ್ಥಿತಿ, ಬೆಲೆ ಏರಿಕೆ, ದುಬಾರಿ ಆರೋಗ್ಯ ಸೇವೆ ಬಗ್ಗೆ ಆಲೋಚಿಸಿ ಮತ ಹಾಕಿ. ನಿಮ್ಮ ಪ್ರತಿಯೊಂದು ಮತವು ಬೆಲೆ ಏರಿಕೆ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಿದಂತಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ:ದೇಶಕ್ಕೆ ಉತ್ತಮ ಕಾರ್ಯಕ್ರಮ ನೀಡಿದ್ದು ಕಾಂಗ್ರೆಸ್.. ಬಿಜೆಪಿ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಿದೆ: ಎಂ.ಬಿ ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.