ಬೆಂಗಳೂರು: ಒಂದು ಸಾವಿರ ಮೀನುಗಾರರ ಸಂಘಗಳಿಗೆ ಸಹಾಯಧನ ವಿಸ್ತರಿಸುವ ಮಹತ್ವದ ಘೋಷಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ.
ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಒಳನಾಡು ಮೀನು ಉತ್ಪಾದಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯ 300 ಮೀನುಗಾರರ ಸಂಘಗಳಿಗೆ 3 ರಿಂದ 5 ಲಕ್ಷ ಸಹಾಯಧನ ನೀಡಲಾಗ್ತಿದೆ. ಇನ್ನು ಮುಂದೆ 1 ಸಾವಿರ ಸಂಘಗಳಿಗೆ ಸಹಾಯಧನ ನೀಡಲಾಗುತ್ತದೆ. ಜತೆಗೆ ಮೀನುಗಾರ ಮಕ್ಕಳಿಗೆ ವಿದ್ಯಾನಿಧಿಯಡಿ ಸ್ಕಾಲರ್ ಶಿಪ್, ಬಡ ಮೀನುಗಾರರಿಗೆ 5 ಸಾವಿರ ಮನೆಗಳನ್ನು ನೀಡಲಾಗುವುದು ಎಂದು ಘೋಷಿಸಿದರು.
ಬೆಂಗಳೂರಿನ ಪ್ರತಿ ವಾರ್ಡ್ನಲ್ಲಿ ಮೀನು ಆಹಾರ ಮಳಿಗೆ: ಬೆಂಗಳೂರಿನ ಪ್ರತಿ ವಾರ್ಡ್ನಲ್ಲಿ ಮೀನಿನ ಆಹಾರ ಮಳಿಗೆ ತೆರೆಯಲಾಗುವುದು ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ಘೋಷಿಸಿದರು.
ಇದನ್ನೂ ಓದಿ: ಮೀನುಗಾರನಿಗೆ ಜಾಕ್ ಪಾಟ್: ಸುರತ್ಕಲ್ನಲ್ಲಿ ಬಲೆಗೆ ಬಿದ್ದ ರಾಶಿ ರಾಶಿ ಮೀನುಗಳು
ಬಿಬಿಎಂಪಿಯ ಪ್ರತಿ ವಾರ್ಡ್ನಲ್ಲೂ ಮೀನಿನ ಆಹಾರ ಕೇಂದ್ರ ತೆಗೆಯುತ್ತೇವೆ. 243 ವಾರ್ಡ್ನಲ್ಲೂ ಮಾಡುವ ಗುರಿ ಇದೆ. ಖಾಸಗಿಯವರಿಗೆ ಸ್ಥಳಾವಕಾಶ ಮಾಡಿಕೊಡುತ್ತೇವೆ. ಖಾಸಗಿಯವರು ಮುಂದೆ ಬಂದು ಮೀನಿನ ಹೋಟೆಲ್ ಮಾಡಬಹುದು. ಇದು ಯಶಸ್ವಿಯಾದರೆ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಮಾಡುತ್ತೇವೆ ಎಂದರು.
ಮೀನು ಸಸ್ಯಾಹಾರಿ, ಮೀನು ತಿನ್ನೋರು ಮಾಂಸಹಾರಿ. ಕೆಲವು ದೇಶಗಳಲ್ಲಿ ಮೀನು ಸಸ್ಯಹಾರವಾಗಿ ಪರಿಗಣಿಸಲ್ಪಟ್ಟಿದೆ. ಮೀನು ಉದ್ಯಮದಲ್ಲಿ ಬಹಳ ಚಟುವಟಿಕೆ ಇವೆ. ಮೀನುಗಾರಿಕೆ ಉದ್ಯಮಕ್ಕೆ ಸರ್ಕಾರ ಹೆಚ್ಚಿನ ಬೆಂಬಲ ಕೊಡ್ತಿದೆ. ಒಳನಾಡು ಮೀನುಗಾರಿಕೆಗೂ ಸಮುದ್ರ ಮೀನುಗಾರಿಕೆ ತರ ಸಹಕಾರ, ನೆರವು ಕೊಡ್ತೇವೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ ಮೀನು ಮಾರುಕಟ್ಟೆ ನಿರ್ಮಾಣಗೊಂಡರೂ ಉದ್ಘಾಟನೆಯಾಗ್ತಿಲ್ಲ: ವ್ಯಾಪಾರಿಗಳ ಗೋಳು ಕೇಳುವವರಾರು..?
ಸಚಿವ ನಾಗೇಶ್ ಮೇಲೆ ಗರಂ: ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮೇಲೆ ಸಿಎಂ ಗರಂ ಆದ ಘಟನೆ ನಡೆಯಿತು. ಸಿಎಂ ಭಾಷಣದ ವೇಳೆ ವೇದಿಕೆಯಲ್ಲಿ ಪಕ್ಕದವರ ಜತೆ ಸಚಿವ ನಾಗೇಶ್ ಮಾತಾಡುತ್ತಿದ್ದರು. ನಾಗೇಶ್ ಮಾತನಾಡ್ತಿರೋದನ್ನು ಕಂಡು ಸಿಎಂ ಸಿಟ್ಟಾದರು. ನಾಗೇಶ್, ನಿನಗೆ ಮಾತಾಡಬೇಕು ಅಂದ್ರೆ ಹೊರಗೆ ಹೋಗಿ ಮಾತಾಡಿ ಎಂದು ಗರಂ ಆದರು.