ETV Bharat / state

ಇಬ್ರಾಹಿಂ ಸುತಾರ ನಿಧನಕ್ಕೆ ಸಿಎಂ ಕಂಬನಿ.. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸೂಚನೆ

author img

By

Published : Feb 5, 2022, 12:44 PM IST

ಇಬ್ರಾಹಿಂ ಸುತಾರ ನಿಧನಕ್ಕೆ ಸಿಎಂ ಸೇರಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ.

Political leaders condolences pour in for Ibrahim sutar, CM and Political leaders condolences pour in for Ibrahim sutar,  Ibrahim sutar news, Ibrahim sutar no more news, ರಾಜಕೀಯ ನಾಯಕರಿಂದ ಇಬ್ರಾಹಿಂ ಸುತಾರರಿಗೆ ಸಂತಾಪ, ಸಿಎಂ ಮತ್ತು ರಾಜಕೀಯ ನಾಯಕರಿಂದ ಇಬ್ರಾಹಿಂ ಸುತಾರರಿಗೆ ಸಂತಾಪ, ಇಬ್ರಾಹಿಂ ಸುತಾರ ಸುದ್ದಿ, ಇಬ್ರಾಹಿಂ ಸುತಾರ ಸಾವಿನ ಸುದ್ದಿ,
ಇಬ್ರಾಹಿಂ ಸುತಾರ ನಿಧನಕ್ಕೆ ಸಿಎಂ ಕಂಬನಿ

ಬೆಂಗಳೂರು: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನಕ್ಕೆ ಸಿಎಂ ಬೊಮ್ಮಾಯಿ ಸೇರಿ ಸಚಿವರು, ಬಿಜೆಪಿ ಮುಖಂಡರು, ಕಾಂಗ್ರೆಸ್​ ಮುಖಂಡರು, ಜೆಡಿಎಸ್​ ಮುಖಂಡರು ಕಂಬನಿ ಮಿಡಿದಿದ್ದಾರೆ.

ಸಿಎಂ ಸಂತಾಪ: ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಇಂದು ಮುಂಜಾನೆ ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ‌. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ. ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಸಿಎಂ ಕಂಬನಿ ಮಿಡಿದಿದ್ದಾರೆ. ಇದೇ ವೇಳೆ ಇಬ್ರಾಹಿಂ ಸುತಾರ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸಿಎಂ ಸೂಚಿಸಿದರು.

ಯಡಿಯೂರಪ್ಪ ಸಂತಾಪ: ನಾಡಿನ ಭಾವೈಕ್ಯತೆಯ ರಾಯಭಾರಿಯಂತಿದ್ದ ಪದ್ಮಶ್ರೀ ಇಬ್ರಾಹಿಂ ಸುತಾರ ಅವರು ಇಂದು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಧರ್ಮ, ಸೂಫಿ ಪರಂಪರೆಗಳ ಪ್ರವಚನಗಳ ಮೂಲಕ ಸಾಮರಸ್ಯಕ್ಕಾಗಿ ಅವರು ಶ್ರಮಿಸಿದ್ದರು. ಅವರಿಗೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ‌ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಟೀಲ್​ ಸಂತಾಪ: ಪದ್ಮಶ್ರೀ ಪುರಸ್ಕೃತರಾದ ಇಬ್ರಾಹಿಂ ಸುತಾರ ಇನ್ನಿಲ್ಲವೆಂಬುವುದು ತುಂಬಾ ನೋವಿನ ವಿಷಯವಾಗಿದೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಶ್ರೀಯುತರು ತಮ್ಮ ಜೀವನದುದ್ದಕ್ಕೂ ಜಾತಿ ಮತ ಪಂಥಗಳೆಲ್ಲಕ್ಕಿಂತ ಮನುಷ್ಯತ್ವ, ಸಹೋದರತೆ, ಸೌಹಾರ್ದತೆ ಮುಖ್ಯ ಎಂದು ಸಾರಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಮರಿಸಿದ್ದಾರೆ.

ದೇವೇಗೌಡರ ಸಂತಾಪ: ಕೃಷ್ಣೆಯ ನಾಡಿನ ಕಬೀರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರವಚನಕಾರ ಇಬ್ರಾಹಿಂ ಸುತಾರ ಅವರು ಹೃದಯಾಘಾತದಿಂದ ದೈವಾದೀನರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ. ಕುರಿತು ಟ್ವೀಟ್ ಮಾಡಿರುವ ಅವರು, ಭಜನೆ, ಪ್ರವಚನ, ಸಂವಾದಗಳ ಮೂಲಕ ಹಿಂದೂ–ಮುಸ್ಲಿಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

ಸಚಿವ ಗೋವಿಂದ ಕಾರಜೋಳ: ಪದ್ಮಶ್ರೀ ಪುರಸ್ಕೃತ ಶ್ರೀ ಇಬ್ರಾಹಿಂ ಸುತಾರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತತ್ತ್ವ ಪದಗಳು, ಭಾವೈಕ್ಯತೆಯ ಸಂದೇಶ ಸಾರುವ ಮೂಲಕ ಸರ್ವಧರ್ಮ ಸಾಮರಸ್ಯದ ಸೌಹಾರ್ದದ ಪ್ರತೀಕವಾಗಿದ್ದ ಸಂತ ಕಬೀರರೆಂಬ ನಾಮವನ್ನು ಅನ್ವರ್ಥಕಗೊಳಿಸಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ರವರು ಪೈಗಂಬರವಾಸಿಯಾದದ್ದರಿಂದ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕನ್ನಡ ನಾಡು ಬಡವಾಗಿದೆ ಎಂದಿದ್ದಾರೆ.

ನಿಜಗುಣ ಶಿವಯೋಗಿಗಳ ಶಾಸ್ತ್ರ, ಭಗವದ್ಗೀತೆಯ ಸಾರ, ತತ್ವ ಪದಗಳ ಅರಿವು, ತಮ್ಮ ಜೀವನವನ್ನು ವಿಸ್ತಾರಗೊಳಿಸಿತು ಎಂದು ನಂಬಿದ್ದ ಸಂತ ಸುತಾರರವರು 1970 ರಲ್ಲಿ ಭಾವೈಕ್ಯದ ಜನಪದ ಸಂಗೀತ ಮೇಳವನ್ನು ಆಯೋಜಿಸಿ ಕನ್ನಡ ನಾಡು ಮತ್ತು ಮಹಾರಾಷ್ಟ್ರದಲ್ಲಿ ಭಾವೈಕ್ಯ ಮತ್ತು ತತ್ತ್ವಪದಗಳ ಚೈತ್ರ ಯಾತ್ರೆಯನ್ನು ಕೈಗೊಂಡಿದ್ದರು ಎಂದು ಹೇಳಿದರು.

ಓದಿ: ಹಿಜಾಬ್ ಹೆಸರಿನಲ್ಲಿ ನಮ್ಮ ಪ್ರದೇಶವನ್ನು ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ: ಕಟೀಲ್​ ಕಿಡಿ

2018 ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ವಾಸ್ತವಿಕವಾಗಿ ಈ ಪ್ರಶಸ್ತಿ ಅವರಿಂದಾಗಿ ಆ ಪ್ರಶಸ್ತಿಗೆ ಸಂದ ಗೌರವವಾಗಿತ್ತು. ಸಂತ ಸುತಾರರವರ ನಿಧನದಿಂದ ಕನ್ನಡ ನಾಡಿಗೆ ವಿಶೇಷವಾಗಿ ಅವರ ಅಭಿಮಾನಿಗಳಿಗೆ ಕುಟುಂಬ ವರ್ಗದವರಿಗೆ ಆಗಿರುವ ದುಃಖವನ್ನು ಸೈರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸಂತಾಪ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, 'ಕನ್ನಡದ ಕಬೀರ'ರೆಂದೇ ಖ್ಯಾತಿ ಪಡೆದಿದ್ದ ಜನಪರ ಪ್ರವಚನಕಾರ ಇಬ್ರಾಹಿಂ ಸುತಾರ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಜಾತಿ-ಧರ್ಮಗಳ ಹೆಸರಲ್ಲಿ ಮನಸ್ಸುಗಳನ್ನು ಒಡೆಯಲಾಗುತ್ತಿರುವ ದಿನಗಳಲ್ಲಿ ಪ್ರವಚನಕಾರ ಸುತಾರ ಅವರು ಭಾವೈಕ್ಯದ ಕೊಂಡಿಯಾಗಿದ್ದರು. ಅವರ ಸಾವು ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುವೆ ಎಂದಿದ್ದಾರೆ.

ಚಂದ್ರಶೇಖರ ಶಿವಾಚಾರ್ಯರು ಕಂಬನಿ: ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರನ್ನು ಕಳೆದುಕೊಂಡಿದ್ದು, ಕಾವಿ ಕುಲಕ್ಕೆ ತೀವ್ರ ನೋವಾಗಿದೆ ಎಂದು ಹುಕ್ಕೇರಿ ಮಠದ ಮಠಾಧೀಶರಾದ ಚಂದ್ರಶೇಖರ ಶಿವಾಚಾರ್ಯರು ಕಂಬನಿ ಮಿಡಿದಿದ್ದಾರೆ.

ಅವರು ಹುಕ್ಕೇರಿ ಮಠದಲ್ಲಿ ಮಾದ್ಯಮಗಳ ಜೊತೆ ಮಾತನಾಡುತ್ತಾ, ಮಠಮಾನ್ಯಗಳಲ್ಲಿ ಪ್ರವಚನ ಮಾಡುವ ಅಪರೂಪ ಸಂತ, ಯಾವತ್ತೂ ನಗುಮುಖದಿಂದ ಇರುತ್ತಿದ್ದ ಅಪರೂಪದ ವ್ಯಕ್ತಿ. ಅತಿ ದೊಡ್ಡ ದೇಶ ಭಕ್ತ, ಎಲ್ಲರೂ ಒಟ್ಟಾಗಿ ಸಾಗಬೇಕೆಂಬ ಮಹದಾಶೆ ಅವರದಾಗಿತ್ತು. ಜಾತಿ ಅಭಿಮಾನ ಬಿಟ್ಟರೆ ಬಹುಮಾನ ಎಂದು ಇಬ್ರಾಹಿಂ ಸುತಾರ ಆಗಾಗ ಹೇಳುತ್ತಿದ್ದರು ಎಂದು ನೆನೆದರು.

Political leaders condolences pour in for Ibrahim sutar, CM and Political leaders condolences pour in for Ibrahim sutar,  Ibrahim sutar news, Ibrahim sutar no more news, ರಾಜಕೀಯ ನಾಯಕರಿಂದ ಇಬ್ರಾಹಿಂ ಸುತಾರರಿಗೆ ಸಂತಾಪ, ಸಿಎಂ ಮತ್ತು ರಾಜಕೀಯ ನಾಯಕರಿಂದ ಇಬ್ರಾಹಿಂ ಸುತಾರರಿಗೆ ಸಂತಾಪ, ಇಬ್ರಾಹಿಂ ಸುತಾರ ಸುದ್ದಿ, ಇಬ್ರಾಹಿಂ ಸುತಾರ ಸಾವಿನ ಸುದ್ದಿ,
ಇಬ್ರಾಹಿಂ ಸುತಾರ ನಿಧನಕ್ಕೆ ಚಂದ್ರಶೇಖರ ಶಿವಾಚಾರ್ಯ ಕಂಬನಿ

ಹುಕ್ಕೇರಿಮಠದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ನಮ್ಮ ಮಠದ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿದ್ದರು. ಪಂಚಪೀಠ ಕಾರ್ಯಕ್ರಮದಲ್ಲಿ, ವಿರಕ್ತ ಮಠದ ಪರಂಪರೆ ಕಾರ್ಯಕ್ರಮದಲ್ಲಿ, ಅದ್ವೈತ ಮಠಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅವರು ಬಾಯಲ್ಲಿ ಭಗವದ್ಗೀತೆ ಸಿದ್ಧಾಂತಶಿಖಾಮಣಿ, ವಚನ ಸಾಹಿತ್ಯ, ನಿಜಗುಣರ ಸಾಹಿತ್ಯಗಳನ್ನು ಅದ್ಭುತವಾಗಿ ಹೇಳುತ್ತಿದ್ದರು. ಇವತ್ತು ಹುಕ್ಕೇರಿ ತಾಲೂಕಿನ ಬೆನವಾರ ಗ್ರಾಮದಲ್ಲಿ ಅವರ ಕಾರ್ಯಕ್ರಮ ಇತ್ತು, ಸದ್ಯ ನಮ್ಮ ಜೊತೆಯಿಲ್ಲ, ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹುಕ್ಕೇರಿ ಮಠದ ಮಠಾಧೀಶರಾದ ಚಂದ್ರಶೇಖರ ಶಿವಾಚಾರ್ಯರು ಕಂಬನಿ ಮಿಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.