ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ ಹಣ ದೋಚಿದ ಬಳಿಕ 'ನಿಷ್ಕರ್ಷ ಸಿನಿಮಾ' ಮಾದರಿಯಲ್ಲಿ ಎಸಿ ಡಕ್ಟ್ ಮೂಲಕ ಎಸ್ಕೇಪ್ ಆಗಿದ್ದ ಕಳ್ಳನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಜಿಗಣಿ ಮೂಲದ ಆನಂದ ಬಂಧಿತ ಆರೋಪಿ. ಈತ ಜನವರಿ 31 ರಂದು ಸಂಪಿಗೆ ರಸ್ತೆಯ ಪ್ರಶಾಂತಿ ಸ್ಯಾರಿ ಸೆಂಟರ್ನ 5ನೇ ಮಹಡಿಯ ಗ್ರಿಲ್ ಮುರಿದು ಒಳಗೆ ಬಂದಿದ್ದ. ಡ್ರಾಯರ್ನಲ್ಲಿದ್ದ 6.5 ಲಕ್ಷ ರೂ. ದೋಚಿದ್ದ. ಬಳಿಕ ಹಣ ಮತ್ತು ಸಿಸಿಟಿವಿ ಡಿವಿಆರ್ ಅನ್ನು ಎಸಿ ಡಕ್ಟ್ ಮೂಲಕ ಹೊತ್ತೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ವಿರುದ್ಧ ಭಾರತೀನಗರ, ಜೆಬಿ ನಗರ, ಮೈಕೋಲೇಔಟ್ ಸೇರಿದಂತೆ ರಾಜ್ಯದ ಮಂಡ್ಯ, ಶಿವಮೊಗ್ಗದ ಠಾಣೆಯಲ್ಲೂ ಪ್ರಕರಣಗಳಿವೆ. ಸದ್ಯ ಆರೋಪಿಯಿಂದ 5.8 ಲಕ್ಷ ರೂ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆನ್‌ಲೈನ್ ಮೂಲಕವೇ ವ್ಯವಹರಿಸುತ್ತಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಬಂಧನ