ಬೆಂಗಳೂರು : ಬಿಬಿಎಂಪಿ ಮಹದೇವಪುರ ವಲಯದ ವಾರ್ಡ್ 82ರ ಇಪಿಐಪಿ ಪ್ರದೇಶದ ರಸ್ತೆಯ ಎರಡು ಬದಿಗಳಲ್ಲಿ ಪಾದಚಾರಿ ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಆಯುಕ್ತರ ಸೂಚನೆ ಹಿನ್ನೆಲೆ ಮಹದೇವಪುರ ವಲಯದಲ್ಲಿ ಬರುವ ವಿವಿಧ ವಾರ್ಡ್ಗಳಲ್ಲಿ ಒಟ್ಟು 48 ಕಿ.ಮೀ ಅನಧಿಕೃತವಾಗಿ ಅಳವಡಿಸಲಾಗಿದ್ದ ಒಎಫ್‌ಸಿ ಕೇಬಲ್‌ಗಳನ್ನು ಕೆಆರ್ಪುರಂ ಮತ್ತು ಮಹದೇವಪುರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ.
ಹೊರಮಾವು, ಕೆಆರ್ಪುರಂ, ಹೆಚ್‌ಎಎಲ್, ಹೂಡಿ, ವೈಟ್‌ಫೀಲ್ಡ್, ಮಹದೇವಪುರ ಉಪ ವಿಭಾಗ ಸೇರಿ ಇನ್ನಿತರೆ ವಾರ್ಡ್ಗಳಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.