ಆನೇಕಲ್: ಬನ್ನೇರುಘಟ್ಟ - ಬಿಳೇಕಹಳ್ಳಿ ರಸ್ತೆಯ ಅಗಲೀಕರಣ ಹಿನ್ನೆಲೆ ಬೊಮ್ಮನಹಳ್ಳಿ ಬಿಬಿಎಂಪಿ ಉಪ ವಿಭಾಗ ಜಂಟಿ ಅಯುಕ್ತರಾದ ಸೌಜನ್ಯ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು.
ಒತ್ತುವರಿ ಜಾಗವನ್ನು ಜೆಸಿಬಿಗಳ ಮೂಲಕ ತೆರವುಗೊಳಿಸುವ ಸಂದರ್ಭ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೂ ದಾಳಿ ನಡೆಸಲಾಯಿತು. ಬಳೇಕಹಳ್ಳಿಯ ಸ್ಟಾರ್ ಸೂಪರ್ ಮಾರ್ಕೇಟ್‍ಗೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡು ಬಂದು ಅವರಿಗೆ ಸ್ಥಳದಲ್ಲೇ 10,000 ರೂ. ದಂಡ ವಿಧಿಸಲಾಯಿತು.
ತೆರವು ಮಾಡುವುದಕ್ಕೆ 100 ಜನ ಪೂಲೀಸ್ ಸಿಬ್ಬಂದಿ ನೆರವು ನೀಡಿದರು. ಇತ್ತೀಚೆಗಷ್ಟೇ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ ಮತ್ತು ಆಯುಕ್ತರು ಬಂದು ಬನ್ನೇರುಘಟ್ಟ ರಸ್ತೆ ಅಗಲೀಕರಣ ಪರಿಶೀಲಿಸಿದ್ದರು. ಪ್ರತಿ ವಾರ ಒಂದೊಂದು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದು, ಈ ವಾರ ಬನ್ನೇರುಘಟ್ಟ ರಸ್ತೆ ಜಿ.ಡಿ ಮರದಿಂದ ಮೆಟ್ರೊ ಕೊನೆಯವರೆಗೂ ಪರಿಶೀಲನೆ ನಡೆದಿದೆ ಎಂದು ಜಂಟಿ ಆಯುಕ್ತರು ತಿಳಿಸಿದರು. ಕೆಲ ಮಾಂಸ ಮಾರುವ ಅಂಗಡಿಗಳು ಸಿಲ್ವರ್ ಕವರ್ ಬಳಸುತ್ತಿದ್ದರು. ಅವರಿಗೂ ಸಹ ದಂಡ ವಿಧಿಸಿದ್ದೇವೆ ಎಂದರು.