ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಜ್ಯೂನಿಯರ್ ಇಂಜಿನಿಯರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಏಳು ಹುದ್ದೆಗಳ ನೇಮಕಾತಿ ನಡೆಯಲಿದ್ದು, ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ರೆಗ್ಯೂಲರ್ ಬೇಸ್ ಮೇಲೆ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಎರಡು ವರ್ಷ ಪ್ರೊಬೆಷನರಿ ಅವಧಿಯನ್ನು ಈ ಹುದ್ದೆ ಹೊಂದಿದೆ. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಜ್ಯೂನಿಯರ್ ಇಂಜಿನಿಯರ್ ಸಿವಿಲ್ನಲ್ಲಿ 5 ಮತ್ತು ಜ್ಯೂನಿಯರ್ ಇಂಜಿನಿಯರ್ ಎಲೆಕ್ಟ್ರಿಕಲ್ನಲ್ಲಿ ಒಟ್ಟು 2 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ ಅಥವಾ ಎಲೆಕ್ಟ್ರಾನಿಕ್ಸ್ನಲ್ಲಿ ಮೂರು ವರ್ಷದ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.
ಅನುಭವ: ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸ್ವಾಯತ್ತ ಸಂಸ್ಥೆಯಲ್ಲಿ ಮೂರು ವರ್ಷದ ಕೆಲಸ ಮಾಡಿದ ಅನುಭವ ಜೊತೆಗೆ ಕ್ಯಾಡ್ ಅನುಭವವನ್ನು ಅಭ್ಯರ್ಥಿಗಳು ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ 35,400 ರೂ ನಿಂದ 1,12,400 ರೂವರೆಗೆ ವೇತನ ನಿಗದಿ ಪಡಿಸಲಾಗಿದೆ.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35 ವರ್ಷ ಆಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮಾಹಿತಿ, ವಯೋಮಿತಿ, ಸಮುದಾಯ, ವಿಕಲಚೇತನ ಪ್ರಮಾಣ ಪತ್ರ ಅನುಭವ ಹಾಗೂ ಎನ್ಒಸೊ ಸೇರಿದಂತೆ ಇನ್ನಿತರ ಪ್ರಮುಖ ದಾಖಲಾತಿಗಳನ್ನು ಈ ಕೆಳಗಿನ ಲಿಂಕ್ನಲ್ಲಿ ಭರ್ತಿ ಮಾಡಬೇಕಿದೆ. https://recruitment.iisc.ac.in/regular_recruitment/index.php ಈ ಲಿಂಕ್ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಜುಲೈ 28ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್ 26 ಆಗಿದೆ. ಈ ಹುದ್ದೆ ಕುರಿತು ಅಧಿಕೃತ ಅಧಿಸೂಚನೆ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆಯಲು ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ಜಾಲತಾಣವಾಗಿರುವ iisc.ac.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಅಸಿಸ್ಟೆಂಟ್ ಪ್ರೊಜೆಕ್ಟ್ ಇಂಜಿನಿಯರ್ ನೇಮಕಾತಿ: ಐಐಎಸ್ಸಿಯಿಂದ ಬೆಂಗಳೂರು ಮತ್ತು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಖಾಲಿ ಇರುವ ನಾಲ್ಕು ಅಸಿಸ್ಟಿಂಟ್ ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್ ಹುದ್ದೆ ಭರ್ತಿಗೂ ಅರ್ಜಿ ಆಹ್ವಾನಿಸಲಾಗಿದೆ. ಬಿಇ ಅಥವಾ ಬಿಟೆಕ್ ಪದವಿ ಹೊಂದಿರುವ 45 ವರ್ಷ ವಯೋಮಿತಿ ಮೀರಿರದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೂ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಮಾಸಿಕ 15,600 ರೂ ನಿಂದ 39100 ರೂ ವೇತನ ನಿಗದಿಪಡಿಸಲಾಗಿದೆ
ಈ ಹುದ್ದೆಯಲ್ಲಿ ಆಸಕ್ತಿಹೊಂದಿರುವ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಮಾಹಿತಿ ಒಳಗೊಂಡ ಸಿವಿಯನ್ನು https://recruitment.iisc.ac.in/regular_recruitmen ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: KFDSC Recruitment: ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಉದ್ಯೋಗ.. ಅರ್ಜಿ ಸಲ್ಲಿಕೆಗೆ ಆಗಸ್ಟ್ 7ರ ವರೆಗೆ ಅವಕಾಶ