ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಇದೀಗ ಪೌರ ಕಾರ್ಮಿಕರಿಗೂ ಸೋಂಕು ಬಾಧಿಸಿದೆ. ಏಳು ಮಂದಿ ಕೊರೊನಾ ದೃಢಪಟ್ಟಿದ್ದು, ಇವರು ರಾಯಪುರ ವಾರ್ಡ್‌ನ ವಿಎಸ್ ಗಾರ್ಡನ್ ನಿವಾಸಿಗಳಾಗಿದ್ದಾರೆ.
ಬೆಂಗಳೂರು ದಕ್ಷಿಣ ವಲಯದಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಒಬ್ಬ ಪೌರಕಾರ್ಮಿಕ ಹಾಗೂ 26, 28, 31, 30 ವರ್ಷದ ನಾಲ್ವರು ಮಹಿಳಾ ಪೌರ ಕಾರ್ಮಿಕರಿಗೆ ಸೋಂಕಿತರಾಗಿದ್ದಾರೆ. ಇವರು ಗಾಂಧಿ ಬಜಾರ್ ವಾರ್ಡ್ನಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡುತ್ತಿದ್ದರು. ಸದ್ಯ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನರ್ಸ್‌ಗೂ ಸೋಂಕು:
ಜಯದೇವ ಆಸ್ಪತ್ರೆಯ ಸ್ಟಾಫ್ ನರ್ಸ್ ಮತ್ತು ವಿಜಯನಗರದ ಶರಾವತಿ ಆಸ್ಪತ್ರೆಯ ನರ್ಸ್‌ಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.
ಸೋಂಕಿಗೆ ವೃದ್ಧ ಸಾವು:
ನಗರದಲ್ಲಿ 83 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದಾರೆ. ಇವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ, ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ದೊರೆತಿದೆ.