ಬೆಂಗಳೂರು: ಬಹು ನಿರೀಕ್ಷಿತ ವೈಟ್ ಫೀಲ್ಡ್ ಹಾಗೂ ಕೆ ಆರ್ ಪುರ ನಡುವಿನ ಮೆಟ್ರೋ ಸಂಚಾರ ಮಾರ್ಗವನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುವ ಹಿನ್ನೆಲೆ ನಾಳೆ ಈ ಭಾಗದಲ್ಲಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದ್ದು, ಪರ್ಯಾಯ ಮಾರ್ಗ ಬಳಸುವಂತೆ ವಾಹನ ಸವಾರರಲ್ಲಿ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ನಾಳೆ ಮಧ್ಯಾಹ್ನ 12 ಗಂಟೆಯಿಂದ 2.30 ರವರೆಗೆ ಸಾರ್ವಜನಿಕ ಸಂಚಾರ ನಿರ್ಬಂಧಿಸಲಾಗಿದೆ. ಹೂಡಿ-ವರ್ತೂರು ರಸ್ತೆ, ವರ್ತೂರು ಕೋಡಿಯಿಂದ ಸತ್ಯ ಸಾಯಿ ಆಶ್ರಮ, ಗ್ರಾಫೈಟ್ ಇಂಡಿಯಾಯಿಂದ ವೈದೇಹಿ ಆಸ್ಪತ್ರೆ ರಸ್ತೆ, ವೈದೇಹಿ ಆಸ್ಪತ್ರೆಯಿಂದ ಬಿಗ್ ಬಜಾರ್, ಜಂಕ್ಷನ್, ಹೋಪ್ ಫಾರಂ ಜಂಕ್ಷನ್‌ನಿಂದ ಚನ್ನಸಂದ್ರದಲ್ಲಿ ವಾಹನ ಸಂಚಾರವನ್ನ ನಿರ್ಬಂಧಿಸಲಾಗಿದೆ.
ನಿರ್ಬಂಧಿಸಿದ ರಸ್ತೆಗಳಿಗೆ ಪರ್ಯಾಯ ಮಾರ್ಗಗಳು : ವರ್ತೂರು ಕೋಡಿ- ಕುಂದಲಹಳ್ಳಿ ಬ್ರಿಡ್ಜ್ - ಹಳೇ ಏಪೋರ್ಟ್ ರಸ್ತೆ ಮೂಲಕ ತಲುಪುವುದು, ಚನ್ನಸಂದ್ರ ಸರ್ಕಲ್ನಿಂದ ನಾಗೊಂಡಹಳ್ಳಿ ಇಮ್ಮಡಿಹಳ್ಳಿ -ಹಗದೂರು ಮೂಲಕ ವರ್ತೂರು ಕೋಡಿ ಕಾಟಂನಲ್ಲೂರು ಕ್ರಾಸ್ನಿಂದ ಕನ್ನಮಂಗಲ ಗೇಟ್ -ಶಿಗೇಹಳ್ಳಿ ಗೇಟ್ - ಹೆಚ್ ಪಿ ಪೆಟ್ರೋಲ್ ಬಂಕ್, ಕಾಡುಗೋಡಿಗುಂಜೂರು- ವರ್ತೂರು - ವೈಟ್‌ಫೀಲ್ಡ್ - ಹೋಪ್ ಫಾರಂ ವೃತ್ತ - ಕಾಡುಗೋಡಿ - ಕಾಟಂನಲ್ಲೂರು ಕ್ರಾಸ್ ಕಡೆಗೆನಾಲಾ ರಸ್ತೆ ಮೂಲಕ ಚನ್ನಸಂದ್ರ ತಲುಪುವುದು, ಹೂಡಿ ವೃತ್ತದಿಂದ ಗಾಫೈಟ್ ರಸ್ತೆ - ಕುಂದಲಹಳ್ಳಿ ರಸ್ತೆ ತಲುಪುವುದು. ಹೂಡಿ ವೃತ್ತದಿಂದ ಅಯ್ಯಪ್ಪನಗರ - ಭಟರಹಳ್ಳಿ ಜಂಕ್ಷನ್ - ಮೇಡಹಳ್ಳಿ ಬ್ರೆಡ್ ಮೂಲಕ ಕಾಟಂನಲ್ಲೂರು ಮೂಲಕ ತಲುಪುವುದು.
ಇದನ್ನೂ ಓದಿ : ಬಾದಾಮಿಯಲ್ಲಿ ಸಿದ್ದರಾಮಯ್ಯ ಅದ್ಧೂರಿ ರೋಡ್ ಶೋ... ಬೃಹತ್ ಹಾರ ಹಾಕಿ ಸ್ವಾಗತಿಸಿದ ಬೆಂಬಲಿಗರು
ಭಾರೀ ಗಾತ್ರದ ವಾಹನಗಳ ಸಂಚಾರ ನಿರ್ಬಂಧ (ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ) ಕಾಟಂನಲ್ಲೂರು ಕಾರ್ನಿಂದ ಕಾಡುಗೋಡಿ - ಹೋಪ್ ಫಾರಂ ಸರ್ಕಲ್ – ವರ್ತೂರು ಕೂಡಿವರೆಗೆ, ತಿರುಮಶೆಟ್ಟಿಹಳ್ಳಿ, ಕಾಸ್ನಿಂದ ಚಿನ್ನಸಂದ್ರ – ಹೋಫ್ ಫಾರಂ ವೃತ್ತದ ಕಡೆಗೆ ಟಿನ್ ಫ್ಯಾಕ್ಟರಿ ಕಡೆಯಿಂದ ಹೂಡಿ - ಐ.ಟಿ.ಪಿ.ಎಲ್ ಮುಖ್ಯರಸ್ತೆ - ಹೋಫ್ ಫಾರಂ ವೃತ್ತ ಕಡೆಗೆ, ಮಾರತ್ ಹಳ್ಳಿ ಬ್ರಿಡ್ಜ್ -ಕುಂದಲಹಳ್ಳಿ- ವರ್ತೂರು ಕೋಡಿ - ವೈಟ್ ಫೀಲ್ಡ್ ಕಡೆಗೆ
ಇದನ್ನೂ ಓದಿ : ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಳ್ಳಲಿದೆ: ಅಮಿತ್ ಶಾ ವಾಗ್ದಾಳಿ
ನಿರ್ಬಂಧಿಸಿದ ರಸ್ತೆಗಳಿಗೆ ಪರ್ಯಾಯ ಮಾರ್ಗಗಳು : ಹೊಸಕೋಟೆ – ದೊಡ್ಡಗಟ್ಟಿಗನಲ್ಲಿ - ತಿರುಮಲಶೆಟ್ಟಿ - ಚಿಕ್ಕತಿರುಪತಿ ಮೂಲಕ ಸರ್ಜಾಪುರ ತಲುಪುವುದು. ಸರ್ಜಾಪುರ– ಗುಂಜೂರು ಶ್ರೀರಾಮ ದೇವಸ್ಥಾನ – ನೆರಿಗೆ ರಸ್ತೆ – ತಿರುಮಶೆಟ್ಟಿಹಳ್ಳಿ - ದೊಡ್ಡಗಟ್ಟಿಗನಳ್ಳಿ ಮೂಲಕ - ಹೊಸಕೋಟೆ ತಲುಪುವುದು. ಟಿನ್ ಫ್ಯಾಕ್ಟರಿ - ಕೆ. ಆರ್ ಪುರಂ - ಭಟ್ಟರಹಳ್ಳಿ ಮೂಲಕ - ಹೊಸಕೋಟೆ ತಲುಪುವುದು. ಮಾರತ್‌ಹಳ್ಳಿ – ದೊಡೇನಕುಂದಿ- ಮಹದೇವಪುರ – ಟಿನ್ ಫ್ಯಾಕ್ಟರಿ ಭಟ್ಟರಹಳ್ಳಿ ಕಡೆಗೆ ತಲುಪುವುದು.
ಇದನ್ನೂ ಓದಿ : ಚಾಣಕ್ಯನ ಬೆನ್ನಲ್ಲೇ ನಾಳೆ ರಾಜ್ಯಕ್ಕೆ ಮೋದಿ ಆಗಮನ: ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ