ಬೆಂಗಳೂರು : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ತನ್ನ ನಿರಂತರ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳ ಭಾಗವಾಗಿ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸುಮಾರು 1.76 ಕೋಟಿ ರೂ. ವೆಚ್ಚದ ಸಿ.ಟಿ ಸ್ಕ್ಯಾನ್ ಯಂತ್ರಗಳನ್ನು ನೀಡುತ್ತಿರುವುದಾಗಿ ತಿಳಿಸಿದೆ.
ಜಿ.ಎಂ ವೆಂಕಟೇಶ್ವರ ರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಹಾಗೂ ಡೀನ್ ಡಾ. ಮನೋಜ್ ಕುಮಾರ್, ಕರ್ನಾಟಕ ಸರ್ಕಾರದ ತೋಟಗಾರಿಕೆ ಮತ್ತು ಸೆರಿಕಲ್ಚರ್ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉಪಸ್ಥಿತಿಯಲ್ಲಿ ಆಸ್ಪತ್ರೆ ಮತ್ತು ಹೆಚ್‌ಎಎಲ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ವೇಳೆ ಹೆಚ್‌ಎಎಲ್ ಸಿಎಂಡಿ ಮಾಧವನ್, ಹೆಚ್‌ಆರ್ ನಿರ್ದೇಶಕ ಅಲೋಕ್ ವರ್ಮಾ ಹಾಜರಿದ್ದರು.
ವೈದ್ಯಕೀಯ ನೆರವು ಸಮಯದ ಅವಶ್ಯಕತೆಯಾಗಿದೆ ಮತ್ತು ಕೋವಿಡ್‌ನಿಂದ ಬಳಲುತ್ತಿರುವವರೂ ಸೇರಿದಂತೆ ರೋಗ ಪತ್ತೆಹಚ್ಚಲ ಉಪಯುಕ್ತವಾಗಿದೆ ಎಂದು ಮಾಧವನ್ ಹೇಳಿದರು.
ಇದನ್ನೂ ಓದಿ: ರಾಮನಗರಕ್ಕೆ ಟ್ರೈಟನ್ ಎಲೆಕ್ಟ್ರಿಕ್ ವಾಹನ ಕಂಪನಿ ಎಂಟ್ರಿ: ಅಗತ್ಯ ನೆರವಿಗೆ ಸಿಎಂ ಅಭಯ