ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಆರಂಭವಾಗಿದ್ದು, ಪಕ್ಷದ ಶಾಸಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರು ಮತದಾನ ಮಾಡಿದ್ದು, ಒಟ್ಟಾರೆ ಮತದಾನ ಮಾಡಿದ ಶಾಸಕರ ಸಂಖ್ಯೆ 100ನ್ನು ದಾಟಿದೆ.
ಅತಿ ಕಡಿಮೆ ಸಂಖ್ಯೆಯಲ್ಲಿ ಜೆಡಿಎಸ್ ಮತದಾರರು ಮತದಾನ ಮಾಡಿದ್ದು, ಹೆಚ್ಚಿನ ಸದಸ್ಯರು ರಿಸಲ್ಟ್ನಿಂದ ಆಗಮಿಸಬೇಕಿರುವ ಹಿನ್ನೆಲೆ ಅವರ ಮತದಾನ ಕೊಂಚ ಕಡಿಮೆ ಪ್ರಮಾಣದಲ್ಲಿ ಆಗಿದೆ. ಬಿಜೆಪಿ ಸದಸ್ಯರು ಮತದಾನದ ವಿಚಾರದಲ್ಲಿ ತೋರಿಸುತ್ತಿರುವ ಆಸಕ್ತಿಯನ್ನು ಕಾಂಗ್ರೆಸ್ ಅಥವಾ ಜೆಡಿಎಸ್ ಸದಸ್ಯರು ತೋರಿಸುತ್ತಿಲ್ಲ ಎನ್ನುವುದು ಗಮನಾರ್ಹ ಸಂಗತಿ.
ಸಿದ್ದರಾಮಯ್ಯ ಕಚೇರಿಗೆ ಸಿಟಿ ರವಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಚೇರಿಗೆ ತೆರಳುವ ಮೂಲಕ ಅಚ್ಚರಿ ಮೂಡಿಸಿದರು. ಸಿದ್ದರಾಮಯ್ಯ ಕೊಠಡಿಗೆ ಹೋಗಿದ್ದ ವಿಚಾರ ಮಾತನಾಡಿ, ಈ ಹಿಂದೆ ಅದೇ ಕೊಠಡಿಗೆ ಹೋಗಿ ಅಭ್ಯಾಸ ಅದಕ್ಕೆ ಹೋಗಿದ್ದೆ. ಅಮೇಲೆ ತಪ್ಪಿ ವಾಪಸ್ ಬಂದೆ. ಎರಡು ಅಭ್ಯರ್ಥಿಗಳು ಮೆರಿಟ್ ಮೇಲೆ, ಇನ್ನು ಎರಡು ಅಭ್ಯರ್ಥಿಗಳು ಅದೃಷ್ಟದ ಮೇಲೆ ಗೆಲ್ಲಲಿದ್ದಾರೆ. ಆತ್ಮಸಾಕ್ಷಿ ಮತ ಯಾರಿಗೆ ಬೀಳುತ್ತೆ ಕಾದು ನೋಡಿ ಎಂದರು.
ಓದಿ: ರಾಜ್ಯಸಭೆ ಚುನಾವಣೆ: ನಿರ್ಮಲಾ ಸೀತಾರಾಮನ್ಗೆ 46 ಪ್ರಥಮ ಪ್ರಾಶಸ್ತ್ಯದ ಮತ ಚಲಾವಣೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ರಾಜ್ಯ ಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ನಮ್ಮ ಎರಡು ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ಜಾತ್ಯತೀತ ವಿಚಾರವುಳ್ಳ ಎಲ್ಲ ಶಾಸಕರು ದುರಾಡಳಿತವುಳ್ಳ ಸರ್ಕಾರವನ್ನ ದೂರವಿಡುವ ನಿಟ್ಟಿನಲ್ಲಿ ಎಲ್ಲ ಶಾಸಕರು ಆತ್ಮವಿಶ್ವಾಸದಿಂದ ಮತ ಹಾಕುತ್ತಾರೆ ಎನ್ನುವ ನಂಬಿಕೆ ಇದೆ ಎಂದರು. ರಾಜಕೀಯ ಪ್ರತಿನಿಧಿಗಳಾಗಿ ಪೋಲಿಂಗ್ ಬೂತ್ ಒಳಗಡೆ ಬಿಜೆಪಿಯಿಂದ ಸಿಟಿ ರವಿ ಕಾಂಗ್ರೆಸ್ನಿಂದ ಡಿಕೆ ಶಿವಕುಮಾರ್ ಹಾಗೂ ಜೆಡಿಎಸ್ನಿಂದ ಎಚ್.ಡಿ ರೇವಣ್ಣ ಕುಳಿತಿದ್ದಾರೆ.
ಮೊದಲ ಮತ ಹಾಕಿದ ರೇವಣ್ಣ: ರಾಜ್ಯಸಭೆ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮೊದಲ ಮತದಾನವನ್ನು ಜೆಡಿಎಸ್ ಸದಸ್ಯ ಎಚ್.ಡಿ ರೇವಣ್ಣ ಮಾಡಿದರು. ಇದಾದ ಬಳಿಕ ಬಿಜೆಪಿ ಶಾಸಕರು, ಸಚಿವರು ಮತದಾನವನ್ನು ಸರದಿ ಸಾಲಲ್ಲಿ ತೆರಳಿ ಮಾಡಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಹುತೇಕ ಬಿಜೆಪಿ ಸದಸ್ಯರು ಈಗಾಗಲೇ ಮತದಾನ ಮಾಡಿದ್ದಾರೆ.