ETV Bharat / state

ಸಿಟಿ ಸ್ಕ್ಯಾನಿಂಗ್ ಸೇವೆ ಸ್ಥಗಿತದಿಂದ ಬಡ ರೋಗಿಗಳ ಪರದಾಟ: ಮುಖ್ಯವೈದ್ಯಾಧಿಕಾರಿಯ ಸ್ಪಷ್ಟನೆ - CT Scan Problem

ಬಡವರಿಗಾಗಿ ರಿಯಾಯಿತಿ ದರದಲ್ಲಿ ಸೇವೆ ವದಗಿಸಲಾಗುತ್ತಿರುವ ಸಿಟಿ ಸ್ಕ್ಯಾನಿಂಗ್ ಕೇಂದ್ರಗಳು ತಾಂತ್ರಿಕ ಅಡಚಣೆಯಿಂದ ತಾತ್ಕಾಲಿಕ ಸ್ಥಗಿತಗೊಂಡಿದ್ದರಿಂದ ಹಾವೇರಿ ಜಿಲ್ಲೆಯ ಜನ ಪರದಾಡುವಂತಾಗಿದೆ.

ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಸ್ಥಗಿತ
ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಸ್ಥಗಿತ (ETV Bharat)
author img

By ETV Bharat Karnataka Team

Published : Sep 28, 2024, 11:32 AM IST

Updated : Sep 28, 2024, 12:56 PM IST

ಹಾವೇರಿ: ಕಳೆದ ಮೂರು ದಿನಗಳಿಂದ ಜಿಲ್ಲಾಸ್ಪತ್ರೆಯ ಸಿಟಿ ಸ್ಕ್ಯಾನ್ ಸೆಂಟರ್ ಸೇವೆ ಸ್ಥಗಿತಗೊಂಡ ಪರಿಣಾಮ ಜಿಲ್ಲಾಸ್ಪತ್ರೆಯಲ್ಲಿ ಉಚಿತ ರಿಯಾಯತಿ ದರದಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಲು ದೂರದೂರಿಂದ ಬರುವ ಬಡ ರೋಗಿಗಳು ಪರದಾಡುವಂತಾಗಿದೆ. ಕೆಲವರು ಸಾಲ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ ಮಾಡಿಸಿಕೊಳ್ಳುತ್ತಿದ್ದರೆ, ದುಡ್ಡಿಲ್ಲದವರು ಸ್ಕ್ಯಾನ್ ಇಲ್ಲದೆ ಕೇವಲ ಚಿಕಿತ್ಸೆ ಪಡೆದು ಗ್ರಾಮಕ್ಕೆ ಮರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ ಎನ್ನುತ್ತಾರೆ ರೋಗಿಗಳು.

ಸ್ಕ್ಯಾನ್ ಸೆಂಟರ್ ನಿರ್ವಹಣೆ ಮಾಡುತ್ತಿರುವ ಕೃಷ್ಣ ಡೈಗ್ನೋಸ್ಟಿಕ್‌ಗೆ ಕಳೆದ 6 ತಿಂಗಳುಗಳಿಂದ ಸರ್ಕಾರ ಹಣ ಪಾವತಿ ಮಾಡದಿರುವುದರಿಂದ ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಸೇವೆ ಸ್ಥಗಿತಗೊಂಡಿದೆ. ಕೃಷ್ಣ ಡೈಗ್ನೋಸ್ಟಿಕ್ಸ್ ರಾಜ್ಯದ 14 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪುಣೆ ಮೂಲದ ಈ ಕಂಪನಿ 2017ರಲ್ಲಿಯೇ ಆರೋಗ್ಯ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ.

ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಸ್ಥಗಿತ (ETV Bharat)

ರೋಗಿಗಳ ಅಸಹಾಯಕತೆ; ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳಿಗೆ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ರಿಯಾಯಿತಿ ದರದಲ್ಲಿ ಮಾಡಲಾಗುತ್ತೆ. ಆದರೆ, ಸರ್ಕಾರ ಈ ಸಂಸ್ಥೆಗೆ ನೀಡಬೇಕಿದ್ದ ಹಣ ಬಾಕಿ ಉಳಿಸಿಕೊಂಡಿದ್ದರಿಂದ 3 ದಿನಗಳಿಂದ ಸ್ಕ್ಯಾನಿಂಗ್ ಸೇವೆ ನಿಂತಿದೆ. ಪರಿಣಾಮ ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳು ಪರಿತಪಿಸ್ತಿದ್ದಾರೆ. ಕಳೆದ ಈ ಸ್ಕ್ಯಾನಿಂಗ್ ಸೇವೆ ಬಂದ್ ಆಗಿದ್ದರಿಂದ ರೋಗಿಗಳು ಖಾಸಗಿ ಸ್ಕ್ಯಾನಿಂಗ್ ಸೆಂಟರ್​ಗಳ‌ ಮೊರೆ ಹೋಗಿದ್ದಾರೆ. ದುಡ್ಡು ಇದ್ದೋರು ಪ್ರೈವೇಟ್ ಸ್ಕ್ಯಾನಿಂಗ್ ಸೆಂಟರ್​ಗೆ ಹೋಗುತ್ತಿದ್ದಾರೆ. ನಾವೇನು ಮಾಡೋಣ ಎಂದು ಕೆಲವು ರೋಗಿಗಳು ಅಸಹಾಯಕತೆ ಹೊರಹಾಕಿದ್ದಾರೆ.

ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಸ್ಥಗಿತ
ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಸ್ಥಗಿತ (ETV Bharat)

ಖಾಸಗಿ ಸ್ಕ್ಯಾನಿಂಗ್ ಸೆಂಟರ್​ಗಳತ್ತ ಹೋದರೆ ದುಡ್ಡು ಕೇಳುತ್ತಾರೆ. ಬಿಪಿಎಲ್ ಕಾರ್ಡ್ ಹಿಡಿದು ಆಸ್ಪತ್ರೆಗೆ ಬರೋ‌ ಬಡರೋಗಿಗಳ‌ ಪಾಡೇನು? ಉಳಿಸಿಕೊಂಡಿರುವ ಬಾಕಿ ಪಾವತಿಸಬೇಕಿದೆ. ಸರ್ಕಾರ ಕೈ ತುಂಬಾ ಸಂಬಳ ಕೊಡ್ತೀನಿ ಅಂದರೂ ಸ್ಕ್ಯಾನಿಂಗ್ ಮಾಡೋ‌ ಸಿಬ್ಬಂದಿ, ರೇಡಿಯಾಲಜಿಸ್ಟ್​ಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡೋಕೆ‌ ತಯಾರಿಲ್ಲ. ಅಂತಹದರಲ್ಲಿ ನಿರ್ವಹಣಿ ಮಾಡುವ ಕೃಷ್ಣ ಡೈಗ್ನೋಸ್ಟಿಕ್ಸ್​ಗೆ ಹಣ ಬಾಕಿ ಉಳಿಸಿಕೊಂಡಿದ್ದು ಆಶ್ಚರ್ಯ ಮೂಡಿಸುತ್ತಿದೆ ಎನ್ನುತ್ತಾರೆ ರೋಗಿಗಳು.

ವೈದ್ಯಾಧಿಕಾರಿ ಹೀಗಂತಾರೆ: ಈ ಕುರಿತಂತೆ ಹಾವೇರಿ ಜಿಲ್ಲಾಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಪರಮೇಶ್ ಹಾವನೂರು ಮಾತನಾಡಿ, ''ಇದು ಸರ್ಕಾರದ ಮಟ್ಟದಲ್ಲಿ ಆದ ಒಪ್ಪಂದ. 12 ಜಿಲ್ಲೆಗಳಲ್ಲಿ ಈ ರೀತಿಯಾಗಿತ್ತು. ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿಯೂ ಸಿಟಿ ಸ್ಕ್ಯಾನ್ ಸೆಂಟರ್ ಬಂದಾಗಿತ್ತು. ಸರ್ಕಾರ ಶುಕ್ರವಾರವಷ್ಟೇ ಮಧ್ಯಾಹ್ನ ಕಂಪನಿ ಜೊತೆ ಮಾತನಾಡಿದ್ದರಿಂದ ಸಿಟಿ ಸ್ಕ್ಯಾನಿಂಗ್ ಸೆಂಟರ್ ಪುನಃ ಆರಂಭವಾಗಲಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಕಾಲರಾ ಪ್ರಕರಣ ಪತ್ತೆ, ರೋಗಿ ಗುಣಮುಖ: ಜಿಲ್ಲಾ ಆರೋಗ್ಯಾಧಿಕಾರಿ - Cholera Disease

Last Updated : Sep 28, 2024, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.