ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೇ ಸಾಗುತ್ತಿರುವ ಡ್ರಗ್ ದಂಧೆಗೆ ಬ್ರೇಕ್ ಹಾಕಲು ನಗರ ಪೊಲೀಸರು ಪಣ ತೊಟ್ಟಿದ್ದಾರೆ. ನಿನ್ನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಗೆ ಇಬ್ಬರು ಬಲಿಯಾದ ಪ್ರಕರಣದಿಂದ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತುರ್ತು ಸಭೆ ಕರೆದಿದ್ರು. ಈ ಸಭೆಯಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ರು.
ಎನ್ಸಿಬಿ (ನ್ಯಾರ್ಕೋಟಿಕ್ ಕಂಟ್ರೋಲ್ ಬ್ಯೂರೋ), ಡಿಆರ್ಇ (ಡೈರಕ್ಟರೇಟ್ ಆಫ್ ರೆವೆನ್ಯೂ ಇಂಟಲಿಜಿನ್ಸ್), ಆರ್ಪಿಎಫ್, ಡ್ರಗ್ಸ್ ಕಂಟ್ರೋಲ್ ಡಿಪಾರ್ಟ್ ಮೆಂಟ್, ಎಫ್ಆರ್ಒ ಎಲ್ಲ ಇಲಾಖೆಗಳ ಜೊತೆ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತರು, ಸಿಟಿಯಲ್ಲಿನ ಡ್ರಗ್ ಪೆಡ್ಲರ್ಗಳನ್ನ ಹಾಗೂ ಡ್ರಗ್ ದಂಧೆಯನ್ನ ಹೇಗೆ ತಡೆಗಟ್ಟಬಹುದು ಎಂಬ ಚರ್ಚೆ ನಡೆಸಿದ್ದಾರೆ.
ಡ್ರಗ್ಸ್ ಮಾರಾಟಗಾರರು ಕಾಲೇಜ್ ವಿದ್ಯಾರ್ಥಿಗಳನ್ನ, ಟೆಕ್ಕಿಗಳನ್ನ, ಯುವಕರು, ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಡ್ರಗ್ಸ್ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ನಗರ ಆಯುಕ್ತರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.