ETV Bharat / state

ಬೆಂಗಳೂರು ಡ್ರಗ್ಸ್ ಜಾಲ ಪ್ರಕರಣ: ಚಿರು ಹೆಸರು ಎಳೆದು ತಂದಿದ್ದಕ್ಕೆ ಮೇಘನಾ ರಾಜ್​ ಬೇಸರ - drugs issue

ನಿರ್ದೇಶಕ ಇಂದ್ರಜಿತ್ ಲಂಕೇಶ್​ ಅವರು ಚಿರಂಜೀವಿ ಸರ್ಜಾ ಸಾವಿನ ವಿಚಾರ ಚರ್ಚೆ ಮಾಡುತ್ತಿರೋ‌ ಹಿನ್ನೆಲೆಯಲ್ಲಿ ನಟಿ ಮೇಘನಾ ರಾಜ್​ ಬೇಸರ ವ್ಯಕ್ತಪಡಿಸಿದ್ದಾರೆ.

actor  Meghana Raj
ನಟಿ ಮೇಘನಾ ರಾಜ್
author img

By

Published : Aug 30, 2020, 2:27 PM IST

ಬೆಂಗಳೂರು: ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಬಳಕೆಯಿಂದಾಗಿ ಸರ್ಜಾ ಕುಟುಂಬ ಮತ್ತಷ್ಟು ನೊಂದಿದೆ. ಇದೇ ವಿಚಾರವಾಗಿ ಧ್ರುವ ಜೊತೆಗೆ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಮಾತನಾಡಿದ್ದಾರೆ.

ಚಿರು ಸಾವಿನ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಪ್ರಶಾಂತ್ ಅಕ್ರೋಶ ವ್ಯಕ್ತಪಡಿಸಿರುವುದಕ್ಕೆ ಧ್ರುವ ಸರ್ಜಾ ಅವರು ಪ್ರಶಾಂತ್ ಸಂಬರಗಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಡ್ರಗ್ ವಿಚಾರದಲ್ಲಿ ಅಣ್ಣ ಚಿರು ಹೆಸರು ‌ಬಳಸಿರೋದಕ್ಕೆ ಧ್ರುವ ಸರ್ಜಾ ಬೇಸರ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಗೆ ನಟಿ ಮೇಘನಾ ರಾಜ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಇಂದ್ರಜಿತ್ ಹೆಸರು ಹೇಳದೆ ಚಿರಂಜೀವಿ ಸರ್ಜಾ ಸಾವಿನ ವಿಚಾರ ಚರ್ಚೆ ಮಾಡುತ್ತಿರೋ‌ ಹಿನ್ನೆಲೆಯಲ್ಲಿ ಮೇಘನಾ ರಾಜ್​ ಅವರು ಬೇಸರ ಹೊರಹಾಕಿದ್ದಾರೆ. ಇಂದ್ರಜಿತ್ ಚಿರಂಜೀವಿ ಹೆಸರು ಯಾಕೆ ಬಳಸುತ್ತಿದ್ದಾರೆ ಎಂದು ದೇವರೇ ಬಲ್ಲ ಎಂದು ಮೇಘನಾ ಅವರು ಪ್ರಶಾಂತ್ ಸಂಬರಗಿ ಜೊತೆ ಮೆಸ್ಸೇಜ್ ಮೂಲಕ ತಿಳಿಸಿದ್ದಾರೆ.

ಸ್ಟಾರ್ ನಟರು ಹಾಗೂ ಯುವ ನಟಿಯರುಗಳು ಸಹ ಡ್ರಗ್​ ದಾಸರಾಗಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ತಿಳಿಸಿದ್ದಾರೆ. ಶೂಟಿಂಗ್​ಗೂ ಸಹ ಡ್ರಗ್ ಸೇವನೆ ಮಾಡಿಯೇ ಬರುತ್ತಿದ್ದರು ಎಂದಿದ್ದಾರೆ. ಅಷ್ಟೇ ಅಲ್ಲದೆ ಇದೀಗ ಚಿರಂಜೀವಿ ಸರ್ಜಾ ಅವರ ಸಾವಿನ ಕುರಿತು ಪ್ರಶ್ನೆ ಎತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.