ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧಿತರ ಕುಟುಂಬಸ್ಥರ ಮಕ್ಕಳು ಠಾಣೆ ಬಳಿ ಬಂದು ತಮ್ಮ ಅಪ್ಪಂದಿರನ್ನು ಬಿಡಿ ಎಂದು ಕಣ್ಣೀರು ಹಾಕಿದ್ದಾರೆ.
ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಮುಂದೆ ಮಕ್ಕಳು ರೋಧಿಸುವ ದೃಶ್ಯ ಎಲ್ಲರ ಮನಕಲಕುವಂತಿತ್ತು. ಗಲಭೆ ಕೇಸ್ನಲ್ಲಿ ಈಗಾಗಲೇ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನೂ ಕೆಲವರು ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ.
ಠಾಣೆ ಮುಂದೆ ಆರೋಪಿಗಳ ಮಕ್ಕಳು ಅಪ್ಪ ಬೇಕು ಎಂದು ಸ್ಟೇಷನ್ ಮುಂದೆ ಹಠ ಹಿಡಿದರು. ಅಪ್ಪಂದಿರನ್ನು ಕಳುಹಿಸಿಕೊಡಿ ಎಂದು ಮಕ್ಕಳು ಗೋಗೆರೆದು ಠಾಣೆಯೊಳಗೆ ಹೋಗಲು ಯತ್ನಿಸಿದರು.
ಈ ವೇಳೆ ಮಹಿಳಾ ಪೊಲೀಸರು ಮಕ್ಕಳು ಮತ್ತು ತಾಯಂದಿರಿಗೆ ಸಾಂತ್ವನ ಹೇಳಿ ಕಳುಹಿಸಿದರು. ಪ್ರತಿದಿನ ಬೀದಿಯಲ್ಲಿ ಕುಳಿತು ಬಂಧನಕ್ಕೊಳಗಾದ ತಮ್ಮವರಿಗಾಗಿ ಹಲವು ದಿನಗಳಿಂದ ಕುಟುಂಬಸ್ಥರು ಕಾದು ಕುಳಿತಿದ್ದಾರೆ.