ETV Bharat / state

ಕಾವೇರಿ ನಿವಾಸದ ಒಳಗೂ ಕಾಲಿಟ್ಟ ಕೊರೊನಾ​: ಸಿಎಂಗೆ ತಗುಲಿದ ಸೋಂಕು...!

ಕಾರು ಚಾಲಕ, ಎಸ್ಕಾರ್ಟ್ ಸಿಬ್ಬಂದಿಗೆ ಪಾಸಿಟಿವ್ ಬಂದು ಒಮ್ಮೆ ಹೋಂ ಕ್ವಾರಂಟೈನ್ ಆಗಿದ್ದ ಸಿಎಂ ಇದೀಗ ಕೊರೊನಾ ಸುಳಿಗೆ ಸಿಲುಕಿದ್ದಾರೆ. ಸಿಎಂ ಕೋವಿಡ್-19 ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಿಎಂಗೂ ತಗುಲಿದ ಸೋಂಕು
ಸಿಎಂಗೂ ತಗುಲಿದ ಸೋಂಕು
author img

By

Published : Aug 3, 2020, 7:23 AM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಅವಿರತವಾಗಿ ಪ್ರಯತ್ನ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಕೊರೊನಾ ಸೋಂಕು ತಗುಲಿದೆ. ಶಾಸಕರು, ಸಚಿವರನ್ನೂ ಬಿಡದ ಕೋವಿಡ್ ಇದೀಗ ಸಿಎಂ ಬಿಎಸ್​ವೈ ಅವರಿಗೂ ತಗುಲಿದೆ.

ಮಾರ್ಚ್​ನಲ್ಲಿ ರಾಜ್ಯದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡ ಕ್ಷಣದಿಂದಲೂ ಕೊರೊನಾ ಮುಂಜಾಗ್ರತೆಗೆ ಸಿಎಂ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಇಡೀ ದೇಶದಲ್ಲೇ ಕೇಂದ್ರಕ್ಕೂ ಮೊದಲೇ ಲಾಕ್​​ಡೌನ್​​ ಜಾರಿ ಮಾಡಿದರಲ್ಲದೇ ವಿಶೇಷ ಪ್ಯಾಕೇಜ್ ಸಹ ಘೋಷಣೆ ಮಾಡಿ ಗಮನ ಸೆಳೆದಿದ್ದರು. ನಂತರ ಕೊರೊನಾ ಟಾಸ್ಕ್ ಫೋರ್ಸ್ ರಚಿಸಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ವಲಯವಾರು ಉಸ್ತುವಾರಿ ನೇಮಕ ಮಾಡಿ ಕೊರೊನಾ ಕಡಿವಾಣಕ್ಕೆ ಯತ್ನಿಸುತ್ತಿದ್ದಾರೆ.

ಇದರ ನಡುವೆ ಎರಡು ಬಾರಿ ಸಿಎಂ ಗೃಹ ಕಚೇರಿಯಲ್ಲಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಸೀಲ್​​ಡೌನ್ ಮಾಡಲಾಗಿತ್ತು. ಆದರೂ ಸಿಎಂ ಧೃತಿಗೆಡದೇ ವಿಧಾನಸೌಧದಿಂದಲೇ ಕರ್ತವ್ಯ ನಿರ್ವಹಣೆ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಡಾ.ಸುಧಾಕರ್ ಕುಟುಂಬಕ್ಕೆ ಕೊರೊನಾ ಬಂದು ಸಚಿವರೇ ಕ್ವಾರಂಟೈನ್​​ ಆಗಿದ್ದರು. ಸಚಿವರಾದ ಸಿ.ಟಿ ರವಿ, ಬಿ.ಸಿ ಪಾಟೀಲ್ ಕೊರೊನಾ ಪಾಸಿಟಿವ್​ಗೆ ಒಳಗಾಗಿದ್ದರು. ವಿಧಾನಸೌಧ, ವಿಕಾಸಸೌಧದಲ್ಲೂ ಪಾಸಿಟಿವ್ ಪ್ರಕರಣ ಕಂಡುಬಂದಿದ್ದವು. ಆದರೂ ಸಿಎಂ ಬಿ.ಎಸ್.ಯಡಿಯೂರಪ್ಪ ಆತಂಕಕ್ಕೆ ಸಿಲುಕದೇ ಎಂದಿನಂತೆ ಸತತವಾಗಿ ಅಧಿಕಾರಿಗಳ ಸಭೆ, ವಿಡಿಯೋ ಸಂವಾದ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾರು ಚಾಲಕ, ಎಸ್ಕಾರ್ಟ್ ಸಿಬ್ಬಂದಿಗೆ ಪಾಸಿಟಿವ್ ಬಂದು ಒಮ್ಮೆ ಹೋಂ ಕ್ವಾರಂಟೈನ್ ಆಗಿದ್ದ ಸಿಎಂ ಇದೀಗ ಕೊರೊನಾ ಸುಳಿಗೆ ಸಿಲುಕಿದ್ದಾರೆ. ಸಿಎಂ ಕೋವಿಡ್-19 ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಿಎಂ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಸಂಪುಟ ಸಹೋದ್ಯೋಗಿಗಳಲ್ಲಿ ಆತಂಕ ಎದುರಾಗಿದ್ದು, ಸಿಎಂ ಶೀಘ್ರ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.