ETV Bharat / state

ರೆಮ್ಡೆಸಿವಿರ್ ತರಲು ರೋಗಿಗಳಿಗೆ ಸೂಚಿಸುವಂತ್ತಿಲ್ಲ: ಮುಖ್ಯ ಆಯುಕ್ತ ಗೌರವ್ ಗುಪ್ತಾ

author img

By

Published : May 4, 2021, 9:51 PM IST

ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ಡೆಸಿವಿರ್​ ಲಭ್ಯ ಇದೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಸರ್ಕಾರದಿಂದ ರೆಫರ್ ಮಾಡುವ ರೋಗಿಗಳಿಗೆ ಸಾಸ್ಟ್ ಮೂಲಕ ಒದಗಿಸಲಾಗುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಪ್ರೈವೇಟ್ ಕೋಟಾದಲ್ಲಿ ಸೇರ್ಪಡೆಯಾಗುವ ರೋಗಿಗಳಿಗೆ ಬೇಕಾದ ರೆಮ್ಡೆಸಿವಿರ್ ಅವಶ್ಯಕತೆ ಬಗ್ಗೆ ಪ್ರತಿನಿತ್ಯ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು ಎಂದಿದ್ದಾರೆ.

chief-commissioner-gaurav-gupta
ಮುಖ್ಯ ಆಯುಕ್ತ ಗೌರವ್ ಗುಪ್ತ

ಬೆಂಗಳೂರು: ನಗರದ ಸರ್ಕಾರಿ ಆಸ್ಪತ್ರೆಗಳಿಗೆ ರೆಮ್ಡೆಸಿವಿರ್ ಒದಗಿಸಲಾಗುವುದು ಅದರ ಬಗ್ಗೆ ಸಮಸ್ಯೆಯಿಲ್ಲ ಎಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಹೇಳಿದ್ದಾರೆ. ಆಕ್ಸಿಜನ್ ಲಭ್ಯ ಇದ್ದರೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಟ್ಯಾಂಕ್ ಇಲ್ಲ, ಸಿಲಿಂಡರ್​ಗಳ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಕೊರತೆ ಆಗ್ತಿದೆ ಎಂದರು.

ಆಸ್ಪತ್ರೆಗಳಲ್ಲಿ ಸಾಮರ್ಥ್ಯ ಇರುವಷ್ಟೇ ರೋಗಿಗಳನ್ನು ತೆಗೆದುಕೊಳ್ಳಬೇಕು. ಆಕ್ಸಿಜನ್ ವ್ಯವಸ್ಥೆಗೆ ತಕ್ಕಂತೆ ರೋಗಿಗಳನ್ನು ದಾಖಲಿಸಿಕೊಳ್ಳಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಾಮರ್ಥ್ಯದ ಬಗ್ಗೆ ಸರ್ವೇ ಮಾಡಲಾಗುವುದು ಎಂದರು.

ರೆಮ್ಡೆಸಿವಿರ್ ತರಲು ರೋಗಿಗಳಿಗೆ ಸೂಚಿಸುವಂತ್ತಿಲ್ಲ: ಮುಖ್ಯ ಆಯುಕ್ತ ಗೌರವ್ ಗುಪ್ತಾ
ರೋಗಿಗಳಿಗೇ ರೆಮ್ಡೆಸಿವಿರ್ ವ್ಯವಸ್ಥೆ ಮಾಡಲು ಸೂಚಿಸುವುದು ತಪ್ಪು

ರೆಮ್ಡೆಸಿವಿರ್ ಲಭ್ಯತೆ ಬಗ್ಗೆ ಮಾಹಿತಿ ನೀಡಿದ ಗೌರವ್ ಗುಪ್ತಾ, ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ಡೆಸಿವಿರ್ ಲಭ್ಯ ಇದೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಸರ್ಕಾರದಿಂದ ರೆಫರ್ ಮಾಡುವ ರೋಗಿಗಳಿಗೆ ಸಾಸ್ಟ್ ಮೂಲಕ ಒದಗಿಸಲಾಗುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಪ್ರೈವೇಟ್ ಕೋಟಾದಲ್ಲಿ ಸೇರ್ಪಡೆಯಾಗುವ ರೋಗಿಗಳಿಗೆ ಬೇಕಾದ ರೆಮ್ಡೆಸಿವಿರ್ ಅವಶ್ಯಕತೆ ಬಗ್ಗೆ ಪ್ರತಿನಿತ್ಯ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ಆಸ್ಪತ್ರೆಗಳು ರೋಗಿಗಳಿಗೇ ಅಥವಾ ಅವರ ಕುಟುಂಬಕ್ಕೆ ರೆಮ್ಡೆಸಿವಿರ್ ತರಲು ಸೂಚಿಸುವುದು ಸರಿಯಲ್ಲ ಎಂದರು.

ಕೋವಿಡ್ ಟೆಸ್ಟ್ ಮಾಡಿ ಪಾಸಿಟಿವ್ ಆದ ಕೂಡಲೇ ಬೇಸಿಕ್ ಔಷಧ ತೆಗೆದುಕೊಳ್ಳಬೇಕು. ಡಬಲ್ ಮ್ಯೂಟೆಂಟ್ ನಗರದಲ್ಲಿ ಪತ್ತೆಯಾಗುತ್ತಿರುವ ಬಗ್ಗೆ ತಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಯಾವುದೇ ಮ್ಯೂಟೆಂಟ್ ಇದ್ದರೂ, ಮಾಸ್ಕ್ ಹಾಕಿಕೊಳ್ಳಬೇಕು. ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.