ETV Bharat / state

ಬಿಡಿಎ ಆವರಣದಲ್ಲೇ ವಂಚಕರ ಜಾಲ: ಭೂಮಿಗೆ ಕಡಿಮೆ ಬೆಲೆ ಅಂತ ನಂಬಿದ್ರೆ ಬೀಳುತ್ತೆ ಪಂಗನಾಮ! - ಬೆಂಗಳೂರು ಲೇಟೆಸ್ಟ್ ನ್ಯೂಸ್

ಪ್ರಾಧಿಕಾರದಲ್ಲಿ ನಾಗರಿಕರನ್ನು ವಂಚಿಸುವ ಹಲವು ಪ್ರಕರಣಗಳು ದಾಖಲಾಗಿವೆ. ನಿವೇಶನಗಳನ್ನು ಕಡಿಮೆ ಬೆಲೆಯಲ್ಲಿ ಮಂಜೂರು ಮಾಡಿಸುತ್ತೇವೆ ಎಂದು ಜನರನ್ನು ವಂಚಿಸಿ, ಅಧಿಕಾರಿಗಳ ಹಾದಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತ ಬಿಡಿಎ ನಾಗರಿಕರಿಗೆ ಎಚ್ಚರ ವಹಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ಕರೆ ನೀಡಿದೆ.

cheating in BDA
ಬಿಡಿಎ ಆವರಣದಲ್ಲಿ ಎಲೆ ಎತ್ತಿವೆ ವಂಚಕರ ಜಾಲ; ಎಚ್ಚರವಹಿಸುವಂತೆ ಮನವಿ
author img

By

Published : Nov 22, 2020, 9:25 AM IST

ಬೆಂಗಳೂರು: ಬಿಡಿಎ ಆವರಣದಲ್ಲೇ ವಂಚಕರ ಜಾಲ ಇದ್ದು, ಜನರನ್ನು ಟೋಪಿ ಹಾಕಿ ಸೈಟ್‌ಗಳನ್ನು, ಫ್ಲಾಟ್​ಗಳನ್ನ ಲೂಟಿ ಮಾಡಲು ಸಿದ್ಧವಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಬಗ್ಗೆ ಪ್ರಾಧಿಕಾರದಲ್ಲಿ ನಾಗರಿಕರನ್ನು ವಂಚಿಸುವ ಹಲವು ಪ್ರಕರಣಗಳು ದಾಖಲಾಗಿವೆ. ನಿವೇಶನಗಳನ್ನು ಕಡಿಮೆ ಬೆಲೆಯಲ್ಲಿ ಮಂಜೂರು ಮಾಡಿಸುತ್ತೇವೆ ಎಂದು ಜನರನ್ನು ವಂಚಿಸಿ, ಅಧಿಕಾರಿಗಳನ್ನೇ ಹಾದಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತ ಬಿಡಿಎ ನಾಗರಿಕರಿಗೆ ಎಚ್ಚರ ವಹಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ಕರೆ ನೀಡಿದೆ.

ಬಿಡಿಎ ಆಯುಕ್ತರ ಸಿಗ್ನೇಚರ್ ಅನ್ನು ಫೋರ್ಜರಿ ಮಾಡಿ ಹಂಚಿಕೆ ಮಾಡಿರುವ ಸೈಟ್​​ಗಳನ್ನು ಬೇರೆಯವರಿಗೆ ಹಂಚಿರುವ ಬಗ್ಗೆ ಬಿಡಿಎಗೆ ಹಲವು ದೂರುಗಳು ಬಂದಿವೆ. ಬಿಡಿಎ ಸೈಟ್, ಫ್ಲಾಟ್​​ಗಳ ಜಾಡು ಹಿಡಿದು ಕೆಲ ವಂಚಕರು ಪ್ರಾಧಿಕಾರದ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಇವರ ಜೊತೆ ಪ್ರಾಧಿಕಾರದ ಕೆಲ ಸಿಬ್ಬಂದಿ ಶಾಮೀಲಾಗಿದ್ದು, ಹಣ ಮಾಡುವ ಉದ್ದೇಶದಿಂದ ನಾಗರಿಕರಿಗೆ ಕರೆಗಳನ್ನು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

cheating in BDA
ಎಚ್ಚರವಹಿಸುವಂತೆ ಬಿಡಿಎ ಮನವಿ

ಲೋಕಾಯುಕ್ತ ದಾಳಿ ನಂತರ ಬಿಡಿಎ ಕಚೇರಿ ಒಳಗೆ ಮಧ್ಯವರ್ತಿಗಳನ್ನು ಬಿಟ್ಟುಕೊಳ್ಳದಂತೆ ಎಚ್ಚರಿಸಲಾಗಿತ್ತು. ಅದರೀಗ ಪ್ರಾಧಿಕಾರದ ಎಚ್ಚರಿಕೆಯನ್ನು ಧಿಕ್ಕರಿಸಿ ಕೆಲವರು ಬೆಳ್ಳಂಬೆಳಗ್ಗೆಯೇ ಪ್ರಾಧಿಕಾರಕ್ಕೆ ಲಗ್ಗೆ ಇಟ್ಟು ಜನರನ್ನು ಯಾಮಾರಿಸುವಲ್ಲಿ ನಿರತರಾಗಿದ್ದಾರೆ.

ಬಿಡಿಎಗೆ ಸಂಬಂಧಿಸಿದ ಭೂಮಿ-ಸೈಟ್ ಹಾಗೂ ನಾಗರೀಕರು ತೊಂದರೆಗೆ ಒಳಗಾದ ಪ್ರಕರಣಗಳನ್ನು ಭೇದಿಸಲು ಪ್ರಾಧಿಕಾರದಲ್ಲೇ ಎಸ್‌ಪಿ ದರ್ಜೆಯ ಕಾರ್ಯ ಪಡೆ ಕಾರ್ಯ ನಿರ್ವಹಿಸುತ್ತಿದೆ. ಕಾರ್ಯ ಪಡೆಯಲ್ಲಿ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದು, ಕೆಲ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿದೆ. ಆದರೆ, ಕೆಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಮಧ್ಯವರ್ತಿಗಳು ರಾಜಾರೋಷವಾಗಿ ವಂಚನೆಯಲ್ಲಿ ಸಕ್ರಿಯರಾಗಿದ್ದಾರೆ. ‌ಜನರನ್ನು ಯಾಮಾರಿಸಿ ಹಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಬಿಡಿಎ ಆಯುಕ್ತ ಮಹದೇವ್​​ಗೆ ಹಲವು ದೂರುಗಳ ಬಂದ ಬಳಿಕ ಜನ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಲಾಗಿದೆ.

ಒಟ್ಟಿನಲ್ಲಿ ಸೈಟ್, ಫ್ಲಾಟ್ ವಂಚಕರ ಜಾಲ ಬಿಡಿಎನಲ್ಲಿ ರಾಜಾರೋಷವಾಗಿ ನಡೆಯುತ್ತಿದೆಯೆಂಬ ಆರೋಪಗಳು ಸಾಕಷ್ಟು ಕೇಳಿಬರುತ್ತಿವೆ. ಈ ಬಗ್ಗೆ ಬಿಡಿಎ ಆಯುಕ್ತರು ಹಾಗೂ ಬಿಡಿಎ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗುತ್ತಿಲ್ಲವೆಂಬ ಆರೋಪಗಳು ಸಹ ಇವೆ. ವಂಚನೆ ಬಗ್ಗೆ ಸಾಕಷ್ಟು ದೂರುಗಳ ಬಂದ ಮೇಲೆ ಎಚ್ಚರ ವಹಿಸಿ ಅಂತಾ ಹೇಳಲಾಗಿದೆ‌. ಯಾವುದಕ್ಕೂ ಬಿಡಿಎ ಸೈಟ್, ಫ್ಲಾಟ್ ಖರೀದಿಸುವ ಮುನ್ನ ಎಚ್ಚರ ವಹಿಸಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.