ETV Bharat / state

ಬೆಂಗಳೂರು ಪೊಲೀಸ್ ಇಲಾಖೆಯ ವೆಬ್‌ಸೈಟ್‌ ವಿಳಾಸ ಬದಲಾವಣೆ

ಬೆಂಗಳೂರು ಪೊಲೀಸರ ವೆಬ್​ಸೈಟ್ ವಿಳಾಸ ಬದಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಬದಲಾವಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಧಿಕೃತ ಮಾಹಿತಿ ನೀಡಿದ್ದಾರೆ.

Bangalore Police Department Website Address
ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
author img

By

Published : Oct 24, 2022, 1:33 PM IST

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಇಲಾಖೆಯ ವೆಬ್​ಸೈಟ್ ವಿಳಾಸವನ್ನು ಸುರಕ್ಷತೆಯ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ. ಪೊಲೀಸ್ ಅಧಿಕೃತ ಖಾತೆಗಳನ್ನು ಕಿಡಿಗೇಡಿಗಳು ಹ್ಯಾಕ್ ಮಾಡುತ್ತಿರುವ ಘಟನೆಗಳು ನಡೆಯುತ್ತಿರುವುದರಿಂದ ವೆಬ್‌ಸೈಟ್ ವಿಳಾಸದಲ್ಲಿ ಮಾರ್ಪಾಡು ಮಾಡಲಾಗಿದೆ. ಈ ಕುರಿತು ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಈ ಮುನ್ನ ಬೆಂಗಳೂರು ನಗರ ಪೊಲೀಸರ ಅಧಿಕೃತ ಜಾಲತಾಣದ ವಿಳಾಸ www.bcp.gov.in ಇತ್ತು. ಆದರೆ ಇನ್ಮುಂದೆ ಈ ವಿಳಾಸ ಬದಲಾಗಲಿದೆ. ಕೆಲವೇ ದಿನಗಳಲ್ಲೇ ಬೆಂಗಳೂರು ನಗರ ಪೊಲೀಸರ ವೆಬ್ ಜಾಲತಾಣದ ವಿಳಾಸ www.bcp.karnataka.gov.in ಎಂದು ಬದಲಾಗಲಿದೆ.

ಇದನ್ನೂ ಓದಿ: ಟೋಯಿಂಗ್ ಬಗ್ಗೆ ಬೆಂಗಳೂರು ಪೊಲೀಸ್​ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ

ವೆಬ್​ಸೈಟ್​ಗೆ ಸಂಬಂಧಿಸಿದ ಸುರಕ್ಷತೆಗಾಗಿ ಈ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಈ ಬದಲಾವಣೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.