ETV Bharat / state

ಚಂದ್ರು ಕೇಸ್​​ನಲ್ಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ : ಆರಗ ಜ್ಞಾನೇಂದ್ರ - chandru death case

ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಸಾವಿನ ಪ್ರಕರಣವನ್ನು ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವರದಿ ಬಂದ ಮೇಲೆ ಸತ್ಯಾಂಶ ಗೊತ್ತಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

chandru-death-case-investigation-is-in-right-way-says-araga-jnanendra
ಚಂದ್ರು ಕೇಸ್​​ನಲ್ಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ : ಆರಗ ಜ್ಞಾನೇಂದ್ರ
author img

By

Published : Nov 7, 2022, 4:50 PM IST

ಬೆಂಗಳೂರು : ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಸಾವಿನ ಪ್ರಕರಣದ ಕುರಿತು ಪೊಲೀಸ್ ತನಿಖೆ ಸರಿಯಾದ ರೀತಿಯಲ್ಲಿಯೇ ನಡೆಯುತ್ತಿದೆ. ಶಾಸಕರು ಭಾವೋದ್ವೇಗದಿಂದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದಿದ್ದಾರಷ್ಟೆ. ಈ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ : ಆರ್.ಟಿ ನಗರದಲ್ಲಿರುವ ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರು ಸಾವಿನ ಪ್ರಕರಣಕ್ಕೆ ಸರ್ಕಾರ ಬಹಳ ಮಹತ್ವ ಕೊಟ್ಟಿದೆ. ಎಡಿಜಿಪಿ ಸ್ಥಳಕ್ಕೆ ಹೋಗಿದ್ದರು. ಯಾವುದನ್ನೂ ಅವಗಣನೆ ಮಾಡಿಲ್ಲ. ರೇಣುಕಾಚಾರ್ಯ ಜಾಗದಲ್ಲಿ ಯಾರೇ ಇದ್ದರೂ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದರು. ತನಿಖೆ ವಿಚಾರದಲ್ಲಿ ಯಾವುದೇ ಸಂದೇಹ ಬೇಡ. ಪೊಲೀಸರು ಯಾವುದನ್ನೂ ಮುಚ್ಚಿಡುತ್ತಿಲ್ಲ. ಮುಚ್ಚಿಡುವುದರಿಂದ ಯಾರಿಗೇನು ಪ್ರಯೋಜನ ಇದೆ ಹೇಳಿ? ಯಡಿಯೂರಪ್ಪ ನವರೂ ಭೇಟಿ ಕೊಟ್ಟಿದ್ದರು. ತನಿಖೆಯ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗುತ್ತದೆ ಎಂದು ಹೇಳಿದರು.

ರೇಣುಕಾಚಾರ್ಯ ಭಾವೋದ್ವೇಗದಿಂದ ಆ ರೀತಿ ಹೇಳಿದ್ದಾರೆ: ಮನೆಯಲ್ಲಿ ಯುವಕನನ್ನು ಕಳೆದುಕೊಂಡಿರುವ ಕಾರಣ ಭಾವುಕರಾಗಿ ಮಾತಾಡುತ್ತಾರೆ. ಸ್ವಲ್ಪ ದಿನ ಆ ರೀತಿ ಇರುತ್ತದೆ. ನಾನು ಕೂಡಾ ರೇಣುಕಾಚಾರ್ಯ ಜೊತೆ ಮಾತಾಡುತ್ತೇನೆ. ಆ ಕುಟುಂಬಕ್ಕೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ಗೃಹ ಇಲಾಖೆಯಿಂದ ತೀವ್ರತರವಾದ ತನಿಖೆ ಮಾಡಿಸುತ್ತಿದ್ದೇವೆ. ಮೂರು ಜನ ತಜ್ಞ ವೈದ್ಯರ ನೇತೃತ್ವದಲ್ಲಿ ಪೋಸ್ಟ್ ಮಾರ್ಟಮ್ ನಡೆದಿದೆ. ಪೊಲೀಸ್ ವರದಿ ಬರುವವರೆಗೂ ನಾವು ಯಾರೂ ಏನೂ ಹೇಳಲು ಆಗಲ್ಲ. ಕೊಲೆ ಪ್ರಕರಣ ದಾಖಲು ಆಗಲಿಲ್ಲ. ಅಸಹಜ ಸಾವು ಎಂದು ಎಫ್ ಐಆರ್ ಆಗಿದೆ. ವರದಿ ಬಂದ ಬಳಿಕ ಕೊಲೆಯಾಗಿದ್ದರೆ ಕೊಲೆ ಕೇಸ್ ದಾಖಲಾಗುತ್ತದೆ.ಈ ಹಂತದಲ್ಲಿ ಏನೂ ಹೇಳಲೂ ಆಗಲ್ಲ ಎಂದರು.

ಬಂಡೆ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ : ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಗೃಹ ಸಚಿವರು, ಪ್ರಕರಣದಲ್ಲಿ ಎಲ್ಲ ರೀತಿಯಿಂದಲೂ ಆಳ‌ವಾದ ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಹೇಳಿದರು.

ತುಮಕೂರು ಆಸ್ಪತ್ರೆಯಲ್ಲಿ ಬಾಣಂತಿ, ಅವಳಿ ಮಕ್ಕಳು ಸಾವು ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಘಟನೆ ನಮ್ಮ ಗಮನಕ್ಕೆ ಬಂದಿದೆ. ಅಲ್ಲಿ ಆಡಳಿತ ಬಿಗಿಗೊಳಿಸಿದ್ದೇವೆ.ಒಳಗೆ ಏನು ನಡೆದಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅದೇ ರೀತಿ ಮೈಸೂರಿನಲ್ಲಿ ನಿವೃತ್ತ ಐಬಿ ಅಧಿಕಾರಿ ಕೊಲೆ ಶಂಕೆ ಪ್ರಕರಣ ಕುರಿತು ಮೈಸೂರು ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಹಳ ಆಳವಾಗಿ ಮಾಡಲಾಗುತ್ತಿದೆ ಎಂದರು.

ಕಾಂಗ್ರೆಸ್​​ ಮುಳುಗುತ್ತಿರುವ ಹಡಗು : ಕಾಂಗ್ರೆಸ್ ನಲ್ಲಿ ಜೊತೆಯಾಗಿ ಹೋಗೋಣ ಎಂದು ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಒಟ್ಟಿಗೆ ಇದ್ದಾರೆ ಎಂದು ಯಾರು ಹೇಳಿದ್ದು?. ದೇಶದಲ್ಲಿ ಕಾಂಗ್ರೆಸ್ ಚೂರಾಗಿದೆ. ಹಡಗು ಮುಳುಗಲು ಶುರುವಾದ ಮೇಲೆ ಕ್ಯಾಪ್ಟನ್ ಬದಲಾವಣೆ ಮಾಡಿದ್ದಾರೆ. ಚೆನ್ನಾಗಿ ಓಡುತ್ತಿದ್ದಾಗ ಒಂದೇ ಕುಟುಂಬ ನಡೆಸುತ್ತಿತ್ತು. ಈಗ ಯಾರಾದಾದರೂ ತಲೆಗೆ ಕಟ್ಟಲು ಖರ್ಗೆಯವರನ್ನು ಅಧ್ಯಕ್ಷ ಮಾಡಿದ್ದಾರೆ ಎಂದು ಹೇಳಿದರು.

ಮೂರು ತಲೆಮಾರಿಗಾಗುವಷ್ಟು ಮಾಡಿದ್ದೇವೆ ಎಂದು ರಮೇಶ್ ಕುಮಾರ್ ಅವರೇ ಹೇಳಿದ್ದಾರೆ. ಇದಕ್ಕಿಂತ ಹೆಚ್ಚು ಯಾರೂ ಹೇಳಲು ಸಾಧ್ಯವಿಲ್ಲ. ಈ ದೇಶವನ್ನು ಎಷ್ಟು ಹಿಂಡಿ ಹಿಪ್ಪೆ ಮಾಡಿದ್ದಾರೆ ಎಂದು ಗೊತ್ತಾಗುತ್ತಿದೆ. ದೇಶದಲ್ಲಿ ಅಶಾಂತಿ ನಿರ್ಮಾಣಕ್ಕೆ, ದೇಶ ಬಡವಾಗಲು ಕಾಂಗ್ರೆಸ್ ಕಾರಣ. ಈಗ ಬೊಬ್ಬೆ ಹೊಡೆದರೆ ಜನ ನಂಬಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ : ಚಂದ್ರು ಹೊನ್ನಾಳಿ ಜನರ ಪ್ರೀತಿಗೆ ಪಾತ್ರನಾಗಿದ್ದ, ಅವನ ಸಾವು ಆಘಾತ ತಂದಿದೆ: ಬಿ ವೈ ವಿಜಯೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.