ETV Bharat / state

ಈದ್ಗಾ ವಿವಾದ: ಜುಲೈ 12ರಂದು ಚಾಮರಾಜಪೇಟೆ ಬಂದ್

ಜುಲೈ 12 ರಂದು ಚಾಮರಾಜಪೇಟೆ ಕ್ಷೇತ್ರ ಬಂದ್ ಆಗಲಿದೆ. ಸರ್ಕಾರಿ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು ಎಲ್ಲವೂ ಬಂದ್ ಇರಲಿದೆ ಎಂದು ರುಕ್ಮಾಂಗದ ತಿಳಿಸಿದ್ದಾರೆ.

idga controversy
ಈದ್ಗಾ ಮೈದಾನದ ಭೂವಿವಾದ
author img

By

Published : Jul 9, 2022, 6:36 PM IST

ಬೆಂಗಳೂರು: ಶುಕ್ರವಾರ ಶಾಸಕ ಜಮೀರ್ ಅಹಮದ್ ನೇತೃತ್ವದಲ್ಲಿ ಚಾಮರಾಜಪೇಟೆಯ ವೆಂಕಟರಾಮ್‌ ಕಲಾಭವನದಲ್ಲಿ ಈದ್ಗಾ ಮೈದಾನದ ಭೂವಿವಾದದ ಕುರಿತು ಸಭೆ ಕರೆಯಲಾಗಿತ್ತು. ನಮ್ಮನ್ನು ಯಾರೂ ಈ ಸಭೆಗೆ ಕರೆದಿಲ್ಲ. ನಾವು ತೀರ್ಮಾನ ಮಾಡಿದಂತೆ ಜುಲೈ 12ರಂದು ಚಾಮರಾಜಪೇಟೆ ಬಂದ್ ಮಾಡೋದು ನಿಶ್ಚಿತ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಸಂಚಾಲಕ ರುಕ್ಮಾಂಗದ ತಿಳಿಸಿದರು. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾವ್ಯಾರೂ ಸಭೆಗೆ ಹೋಗಿಲ್ಲವೆಂದು ಶಾಸಕ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಜಮೀರ್​ ಮಾತನ್ನು ಯಾರೂ ಕೇಳಬಾರದು. ಭರವಸೆ ನೀಡಿ ಸುಮ್ಮನಾಗುತ್ತಾರೆ. ಯಡಿಯೂರಪ್ಪ ಸಿಎಂ ಆದರೆ ಅವರ ಮನೆಯ ವಾಚ್ ಮೆನ್ ಆಗುತ್ತೇನೆ ಎಂದಿದ್ದರು. ಈ ಹಿಂದೆ ಕೂಡ ಧ್ವಜಾರೋಹಣ ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದರು. ಆದರೆ ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದು ಹೇಳಿದರು.

ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಸುದ್ದಿಗೋಷ್ಠಿ

ಈ ಹಿಂದೆ ಚಾಮರಾಜಪೇಟೆಯಲ್ಲಿ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು ಇದ್ದರು. ಆದರೆ ಜಮೀರ್ ಶಾಸಕರಾದ ಮೇಲೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಳ್ಳ ಕಾಕರ ಹಾವಳಿ ಹೆಚ್ಚಾಗಿದೆ. ಸರಗಳ್ಳರು, ಪಿಕ್ ಪಾಕೆಟ್ ಮಾಡುವವರು, ಭೂಗಳ್ಳರು ಹೆಚ್ಚಾಗಿದ್ದಾರೆ. ಇಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಕ್ಷೇತ್ರದಲ್ಲಿ ಆಟದ ಮೈದಾನಗಳೂ ಇಲ್ಲ. ಹೀಗಾಗಿ ಈದ್ಗಾ ಮೈದಾನ ಸರ್ಕಾರದ ಸ್ವತ್ತಾಗಿಯೇ ಉಳಿಯಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ನನ್ನ ಮಧ್ಯೆ ಮನಸ್ತಾಪದ ಪ್ರಶ್ನೆ ಇಲ್ಲ, ಅವರೊಂದಿಗೆ ಎಂದಿಗೂ ನಾವಿದ್ದೇವೆ: ಸತೀಶ ಜಾರಕಿಹೊಳಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.