ETV Bharat / state

ಏಕಾಏಕಿ ಇಂದಿರಾ ಕ್ಯಾಂಟೀನ್ ಬಿಲ್ ಬಗ್ಗೆ ಚೈತ್ರಾ ಕುಂದಾಪುರ‌ ಹೇಳಿದ್ದೇಕೆ?

ಚೈತ್ರ ಕುಂದಾಪುರ ಇಂದಿರಾ ಕ್ಯಾಂಟೀನ್ ಬಿಲ್ ವಿಚಾರವಾಗಿ ನೀಡಿರುವ ಹೇಳಿಕೆಗೆ ದೂರುದಾರ ಪ್ರತಿಕ್ರಿಯೆ ನೀಡಿದ್ದಾರೆ.

ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ
author img

By ETV Bharat Karnataka Team

Published : Sep 14, 2023, 6:30 PM IST

ಚೈತ್ರಾ ಕುಂದಾಪುರ ಹೇಳಿಕೆ

ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯಿಂದ 5 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿದ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧಿತೆಯಾಗಿರುವ ಚೈತ್ರಾ ಕುಂದಾಪುರ‌ ಇಂದು ಮಾಧ್ಯಮಗಳ ಮುಂದೆ ಪ್ರಸ್ತಾಪಿಸಿದ ಅಂಶಗಳು‌ ಪ್ರಕರಣಕ್ಕೆ ತಿರುವು ಸಿಕ್ಕಿದೆ‌. ಮಹಿಳಾ ಸಾಂತ್ವನ ಕೇಂದ್ರದಿಂದ ಇಂದು ಸಿಸಿಬಿ ಕಚೇರಿಗೆ ಕರೆದುಕೊಂಡು ಬರುವಾಗ ಮಾಧ್ಯಮಗಳ ಕ್ಯಾಮರಾ ಕಂಡ ಚೈತ್ರಾ, ಸ್ವಾಮೀಜಿ ಬಂಧನ ಬಳಿಕ ದೊಡ್ಡವರ ಹೆಸರು ಕೂಡ ಬಹಿರಂಗವಾಗಲಿದೆ.‌ ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಯಿದೆ. ಅದಕ್ಕಾಗಿಯೇ ಈ ತರ ಷಡ್ಯಂತ್ರ ರೂಪಿಸಿದ್ದಾರೆ ಎಂದು ಪರೋಕ್ಷವಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿ ವಿರುದ್ಧ ಕಿಡಿಕಾರಿದ್ದಾರೆ. ಇದು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.

ಚೈತ್ರಾ ಮಾಡುತ್ತಿರುವ ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಆರೋಪಕ್ಕೂ ದೂರುದಾರ ಗೋವಿಂದ ಬಾಬುಗೂ ಏನು ಸಂಬಂಧ? ಆರೋಪದ ಹಿಂದೆ ಇರುವ ಸತ್ಯವೇನು ಎಂಬುದರ ಬಗ್ಗೆ ನೋಡುವುದಾದರೆ ಗೋವಿಂದಬಾಬು ಹೋಟೆಲ್ ಉದ್ಯಮಿಯಾಗಿದ್ದಾರೆ. ಬೈಂದೂರು ಮೂಲದ‌ ಇವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಬಿಬಿಎಂಪಿ ಇಂದಿರಾ ಕ್ಯಾಂಟೀನ್​ನ ಗುತ್ತಿಗೆದಾರರಾಗಿದ್ದಾರೆ. ಚೆಕ್ ಟಾಫ್ ಕಂಪೆನಿಯ ಮಾಲೀಕನಾಗಿದ್ದು ಹಲವು ವರ್ಷಗಳಿಂದ ಇಂದಿರಾ ಕ್ಯಾಂಟೀನ್​ಗೆ ಆಹಾರ ಪೂರೈಸಲಾಗುತ್ತಿದೆ‌‌. ಹಾಗಾದರೆ ಗೋವಿಂದ ಬಾಬುಗೆ ಇಂದಿರಾ ಕ್ಯಾಂಟಿನ್​ಗೆ ಸಂಬಂಧಿಸಿದಂತೆ ಬಿಲ್ ಪಾವತಿಯಾಗಿಲ್ವಾ? ಎಂಬುದರ ಬಗ್ಗೆ‌ ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್ ಪ್ರಶ್ನೆಗೆ ಉತ್ತರಿಸಿದ್ದು. ಚೆಕ್‌ ಟಾಫ್ ಕಂಪನಿಯಿಂದ ಬಿಬಿಎಂಪಿಯಿಂದ ಬಿಲ್ ಪಾವತಿಸಲಾಗಿದೆ. ಯಾವುದೇ ಬಿಲ್ ಬಾಕಿ‌ ಉಳಿಸಿಕೊಂಡಿಲ್ಲ. ಪ್ರತಿ ತಿಂಗಳು ಬಿಲ್ ಬರುತ್ತೆ. ಪಾವತಿ ಮಾಡೋದೆಲ್ಲವೂ ಸಹಜ ಪ್ರತಿಕ್ರಿಯೆಯಾಗಿದೆ ಎಂದಷ್ಟೇ ತಿಳಿಸಿದ್ದಾರೆ.

ಪ್ರಕರಣದ ಹಿಂದೆ ಯಾವ ನಾಯಕರಿಲ್ಲ: ಇಂದಿರಾ ಕ್ಯಾಂಟೀನ್ ಬಾಕಿ ಬಗ್ಗೆ‌ ಚೈತ್ರಾಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ದೂರುದಾರ ಗೋವಿಂದ ಬಾಬು ವ್ಯವಸ್ಥಿತವಾಗಿ ಸಂಚು ರೂಪಿಸಿ ಚೈತ್ರಾ, ಗಗನ್‌ ಕಡೂರು, ಹಾಗೂ ಹಾಲಶ್ರೀ ಸ್ವಾಮೀಜಿ ಅವರು ಮೋಸ ಮಾಡಿದ್ದಾರೆ. ನಾನು ಬ್ಯಾಂಕಿಂದ 10 ಕೋಟಿ ರೂಪಾಯಿ ಲೋನ್ ಪಡೆದು ನಗದು ಹಾಗೂ ಡಿಡಿ ರೂಪದಲ್ಲಿ ಹಣ ನೀಡಿದ್ದೇನೆ. ವಂಚನೆಯ ಹಿಂದೆ ದೊಡ್ಡ ನಾಯಕರಿಲ್ಲ. ಇಂದಿರಾ ಕ್ಯಾಂಟೀನ್ ವ್ಯವಹಾರಕ್ಕೂ ವಂಚನೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಸಿಬಿಗೆ ಎಲ್ಲಾ ರೀತಿಯ ಮಾಹಿತಿ ಹಾಗೂ ಅಗತ್ಯ ದಾಖಲೆ ನೀಡಿದ್ದೇನೆ. ನೋಟಿಸ್ ಕೊಟ್ಟು ವಿಚಾರಣೆಗೆ ಕರೆದರೆ ಸಿಸಿಬಿ ಮುಂದೆ ಹಾಜರಾಗುವೆ ಎಂದಿದ್ದಾರೆ.

ವಿಡಿಯೋದಲ್ಲಿ ಪ್ರಸ್ತಾಪಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಚುರುಕುಗೊಳಿಸಲಾಗಿದೆ. ಸ್ವಾಮೀಜಿ ಬಂಧಿಸಿದ ಬಳಿಕ ದೊಡ್ಡ-ದೊಡ್ಡವರ ಹೆಸರು ಬಹಿರಂಗವಾಗಲಿದೆ ಎಂದು ಬಾಂಬ್ ಹಾಕಿರುವ ಚೈತ್ರಾರನ್ನ ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಸ್ವಾಮೀಜಿ ಮೈಸೂರು ಮಠಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ನೆರವಿನಿಂದ ಪಾರಾರಿಯಾಗಿದ್ದಾರೆ. ಸ್ವಾಮೀಜಿಗೆ ಸಹಾಯ ಮಾಡಿದ ವ್ಯಕ್ತಿಯ ಮೊಬೈಲ್ ಸ್ವಿಚ್​ಆಫ್ ಬರುತ್ತಿದ್ದು, ಇಬ್ಬರ ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಂಚನೆ ಆರೋಪ ಪ್ರಕರಣ: 'ಸ್ವಾಮೀಜಿ ಬಂಧನವಾಗಲಿ, ಸತ್ಯ ತಿಳಿಯಲಿದೆ' ಎಂದ ಚೈತ್ರಾ ಕುಂದಾಪುರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.