ಬೆಂಗಳೂರು : ಸರಗಳ್ಳತನದಿಂದ ಅದೆಷ್ಟೋ ಮಹಿಳೆಯರು ಅವಶ್ಯಕತೆ ಇದ್ದರೂ ಮನೆಯಿಂದಾಚೆ ಬರಲು ಹೆದರುತ್ತಿದ್ದರು. ಅದರಲ್ಲೂ ಲಾಕ್‌ಡೌನ್ ಇದ್ದಿದ್ದರಿಂದ ಜನರ ಓಡಾಟವೇ ಇಲ್ಲದಂತಾಗಿದೆ. ಸರಗಳ್ಳತನದ ಪ್ರಕರಣಗಳು ಕೂಡ ಕಡಿಮೆಯಾಗಿತ್ತು. ಆದ್ರೀಗ ನಗರದಲ್ಲಿ ಮತ್ತೆ ಸರಗಳ್ಳರು ಆ್ಯಕ್ಟೀವ್ ಆಗಿದ್ದು, ಅವರ ಹಾವಳಿ ಹೆಚ್ಚಾಗಿದೆ.
ಈ ಬಾರಿ ಬೆಳ್ಳಂಬೆಳಗ್ಗೆ ವಾಕಿಂಗ್ ಮತ್ತು ಅಂಗಡಿಗೆ ಬರೋ ವೃದ್ಧೆಯರನ್ನ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಒಂಟಿಯಾಗಿ ಓಡಾಡೋ ವೃದ್ಧೆಯರನ್ನ ಟಾರ್ಗೆಟ್ ಮಾಡಿ ಚೈನ್ ಸ್ನಾಚ್ ಮಾಡ್ತಾರೆ. ಇದೇ ರೀತಿ ಇಂದು ಬೆಳ್ಳಂಬೆಳಗ್ಗೆ ಕಾಮಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳರು ಚೈನ್ ಸ್ನಾಚ್ ಮಾಡಿದ್ದಾರೆ.
ಹೆಗ್ಗನಹಳ್ಳಿಯ ಮರಿಯಾಸದನ ಶಾಲೆ ಬಳಿ ಈ ಘಟನೆ ನಡೆದಿದೆ. ಖತರ್ನಾಕ್ ಸರಗಳ್ಳರು ವೃದ್ದೆಯೊಬ್ಬರ 15 ಗ್ರಾಂ ಸರ ಕಿತ್ತು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಎರಡು ವಾರದಿಂದ ಪಶ್ಚಿಮ ವಿಭಾಗದಲ್ಲಿ ಚೈನ್ ಸ್ನಾಚ್ ಪ್ರಕರಣಗಳು ಹೆಚ್ಚಾಗಿವೆ. ಸದ್ಯ ಇಂದು ಬೆಳಗ್ಗೆ ನಡೆದ ಪ್ರಕರಣವನ್ನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಿಸಲಾಗಿದೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೃತ್ಯ ಸ್ಥಳೀಯ ಹುಡುಗರಿಂದ ನಡೆದಿರುವ ಕುರಿತು ಪೊಲೀಸರಿಗೆ ಸಂಶಯ ಮೂಡಿದೆ.
ಓದಿ: ಪೆಟ್ರೋಲ್ GSTಗೆ ಸೇರಿಸುವುದು ಪರಿಹಾರವಲ್ಲ, ಅದು ಶೋಷಣೆ: ಹೆಚ್ಡಿಕೆ