ಬೆಂಗಳೂರು: 2ನೇ ದಿನ ಸಿಇಟಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಭೌತಶಾಸ್ತ್ರಕ್ಕೆ 95.91%, ರಸಾಯನಶಾಸ್ತ್ರಕ್ಕೆ 95.88% ಅಭ್ಯರ್ಥಿಗಳು ಹಾಜರಾಗಿದ್ದರು. ನಾಳೆ ಕೊನೆಯ ಪರೀಕ್ಷೆ ಇದ್ದು, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ.
ನಾಳೆ ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ. ಒಟ್ಟು 1,682 ಅಭ್ಯರ್ಥಿಗಳು ಈ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.
ಇಂದು ನಡೆದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ನೊಂದಣಿ ಮಾಡಿಸಿದ್ದ ಒಟ್ಟು 2,01,834 ಅಭ್ಯರ್ಥಿಗಳಲ್ಲಿ, 1,93,588 (95.91%) ಅಭ್ಯರ್ಥಿಗಳು ಭೌತಶಾಸ್ತ್ರ ವಿಷಯಕ್ಕೆ ಮತ್ತು 1,93,522 (95.88%) ಅಭ್ಯರ್ಥಿಗಳು ರಸಾಯನಶಾಸ್ತ್ರ ವಿಷಯಕ್ಕೆ ಹಾಜರಾಗಿದ್ದಾರೆ.
ರಾಜ್ಯಾದ್ಯಂತ 530 ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಎಸ್‌ಓಪಿ ಅನುಸಾರ ಎಲ್ಲಾ ಸುರಕ್ಷತೆಯ ಕ್ರಮವನ್ನು ಖಾತರಿಪಡಿಸಿಕೊಂಡು ಪಾರದರ್ಶಕತೆಯಿಂದ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಪಾಸಿಟಿವ್ ಇದ್ದ 12 ಅಭ್ಯರ್ಥಿಗಳು ಹಾಜರಾಗಿದ್ದರು.