ETV Bharat / state

ಈದ್ಗಾ ಮೈದಾನ ವಿವಾದ: ಬಿಬಿಎಂಪಿಗೆ ದಾಖಲೆ ಸಲ್ಲಿಸಿದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್

ಈದ್ಗಾ ಮೈದಾನದ ದಾಖಲೆಗಳನ್ನು ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​(ಸಿಎಂಎ) ಬಿಬಿಎಂಪಿಗೆ ಸಲ್ಲಿಸಿದೆ.

Eidgah Ground
ಈದ್ಗಾ ಮೈದಾನ
author img

By

Published : Jun 10, 2022, 6:53 PM IST

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಮುಂದುವರಿದಿದೆ. ಮೈಸೂರು ಆಡಳಿತ ಕಾಲದಿಂದ ಇದ್ದ ದಾಖಲೆಗಳನ್ನು ಬಿಬಿಎಂಪಿಗೆ ಕರ್ನಾಟಕದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​(ಸಿಎಂಎ) ಸಲ್ಲಿಸಿದೆ. ಬಿಬಿಎಂಪಿ ವಿಶೇಷ ಆಯುಕ್ತ ಶ್ರೀನಿವಾಸ ಅವರಿಗೆ ಸುಪ್ರೀಂಕೋರ್ಟ್ ಆದೇಶ, ಮೈಸೂರು ರಾಜ್ಯ ವಕ್ಫ್ ಮಂಡಳಿಯಿಂದ 1965ರ ಅಧಿಕೃತ ಗೆಜೆಟ್ ಅಧಿಸೂಚನೆ ಸೇರಿದಂತೆ ಇನ್ನಿತರ ಹಳೆಯ ದಾಖಲೆಗಳ ಪ್ರತಿಗಳನ್ನು ಕಳುಹಿಸಲಾಗಿದೆ.

1965ರ ಜೂನ್ 7ರಂದೇ ವಕ್ಫ್ ಗೆಜೆಟ್ ಅಧಿಸೂಚನೆಯ ಅಡಿಯಲ್ಲಿ ಈದ್ಗಾ ಪ್ರದೇಶವನ್ನು ವಕ್ಫ್ ಆಸ್ತಿಯಾಗಿ ನೋಂದಾಯಿಸಲಾಗಿದೆ ಎಂದು ಅಸೋಸಿಯೇಷನ್ ​​ತಿಳಿಸಿದೆ. ದಾಖಲೆಗಳ ಪ್ರಕಾರ, ಕ್ರಮ ಸಂಖ್ಯೆ 137ರಲ್ಲಿ ಚಾಮರಾಜಪೇಟೆಯ ಈದ್ಗಾ ಸುನ್ನಿ 2 ಎಕರೆ 5 ಗುಂಟಾ ಜಮೀನು ಇದ್ದು, ಇದರ ಮಾಲೀಕತ್ವ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​ಆಫ್ ಕರ್ನಾಟಕದ ಕಾರ್ಯದರ್ಶಿಗೆ ವಹಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಿಎಂಎ ಪ್ರಧಾನ ಕಾರ್ಯದರ್ಶಿ ಜಹೀರುದ್ದೀನ್ ಅಹ್ಮದ್, ಭೂಮಿ ನಮ್ಮದು, ಇದು ಅಧಿಕೃತ ದಾಖಲೆಯಾಗಿರುವುದರಿಂದ ನಾವು ಬಿಬಿಎಂಪಿ ವಿಶೇಷ ಆಯುಕ್ತರಿಗೆ ನೀಡಿದ್ದೇವೆ. ಈ ಮೊದಲು ನ್ಯಾಯಾಲಯವು ರಂಜಾನ್ ಮತ್ತು ಬಕ್ರೀದ್ ಪ್ರಾರ್ಥನೆಗೆ ಮಾತ್ರ ಅನುಮತಿ ನೀಡಿತ್ತು. ಮತ್ತು ಸ್ಥಳವನ್ನು ಸಾರ್ವಜನಿಕರಿಗೆ ಆಟದ ಮೈದಾನವಾಗಿ ಬಳಸಲು ಅವಕಾಶ ನೀಡಲಾಯಿತು. ಈ ಹಿಂದೆ ನಡೆದ ಕಾನೂನು ಹೋರಾಟದಲ್ಲಿಯೂ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ನಮಗೆ ಜಯವಾಗಿದ್ದು, ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಬೆಳಗಾವಿ: ನೂಪುರ್ ಶರ್ಮಾ, ನವೀನ್ ಜಿಂದಾಲ್ ಬಂಧನಕ್ಕೆ ಎಸ್​ಡಿಪಿಐ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.