ETV Bharat / state

ಸೋಮವಾರ ಕೇಂದ್ರ ಬಜೆಟ್ ಮಂಡನೆ.. ಬೆಟ್ಟದಷ್ಟು ನಿರೀಕ್ಷೆ ಹೊತ್ತ ರಾಜ್ಯ.. - ಸಿಎಸ್‍ಎಸ್ ಯೋಜನೆ

ಮೆಟ್ರೋ ರೈಲು, ಉಪನಗರ ರೈಲು ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಹಣದ ಕೊರತೆ ಕಾಡುತ್ತಿದೆ. ಘನತ್ಯಾಜ್ಯ ನಿರ್ವಹಣೆ ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ-3 ಮತ್ತು ಎತ್ತಿನಹೊಳೆಯಂತಹ ದೊಡ್ಡ ನೀರಾವರಿ ಯೋಜನೆಗೂ ಅನುದಾನ ನೀಡಬಹುದು ಎಂಬ ನಿರೀಕ್ಷೆ ರಾಜ್ಯ ಇಟ್ಟುಕೊಂಡಿದೆ..

Central Budget Presentation on Monday
ಕೇಂದ್ರ ಬಜೆಟ್ ಮಂಡನೆ​:
author img

By

Published : Jan 30, 2021, 8:03 PM IST

ಬೆಂಗಳೂರು : ಫೆಬ್ರುವರಿ 1(ಸೋಮವಾರ) ಕೇಂದ್ರದ ಬಜೆಟ್ ಮಂಡನೆಯಾಗಲಿದೆ. ರಾಜ್ಯ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಕೋವಿಡ್​​​ನಿಂದಾಗಿ ಈ ಬಾರಿ ದೇಶದ ಆರ್ಥಿಕತೆಯೇ ಬುಡಮೇಲಾಗಿರುವ ಇಂತಹ ಸಂದರ್ಭದಲ್ಲಿ ಎಲ್ಲ ವಲಯಗಳಲ್ಲೂ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಜನಸಾಮಾನ್ಯರ ನಿರೀಕ್ಷೆಗಳು ಹೆಚ್ಚಾಗಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಜನಪ್ರಿಯ ಘೋಷಣೆಗಳು ಈ ಬಾರಿಯ ಬಜೆಟ್‌ನಲ್ಲಿ ಇರಲಿದೆಯೇ? ಅಥವಾ ಹಳೆಯ ಘೋಷಣೆಗಳಿಗೆ ಹೆಚ್ಚುವರಿ ಹಣ ಬಿಡುಗಡೆಯಾಗಲಿದ್ಯಾ ಎಂಬ ಕುತೂಹಲ ಮೂಡಿದೆ.

ಈ ಬಾರಿಯ ನಿರೀಕ್ಷೆಗಳೇನು?: 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಘೋಷಿಸಿದ 5,495 ಕೋಟಿ ರೂ. ವಿಶೇಷ ಅನುದಾನ ಸೇರಿ ಎಲ್ಲಾ ಬಾಕಿ ಮುಕ್ತಿಗಳಿಸಲು ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಹೆಚ್ಚುವರಿ ಅನುದಾನ ನೀಡುವಂತೆಯೂ ರಾಜ್ಯ ಸರ್ಕಾರ ಮನವಿ ಮಾಡಿದೆ.

ಹೊಸ ಸಿಎಸ್‍ಎಸ್ ಯೋಜನೆ ಪರಿಚಯಿಸುವ ಸಂದರ್ಭದಲ್ಲಿ ರಾಜ್ಯದ ಅಭಿಪ್ರಾಯವನ್ನು ಕೇಂದ್ರ ಪರಿಗಣಿಸಬೇಕು. ಇಲ್ಲದಿದ್ದರೇ ರಾಜ್ಯ ಹಣಕಾಸಿನ ಮೇಲೆ ಹೊರೆ ಬೀಳಲಿದೆ. ಬಜೆಟ್‍ನಲ್ಲಿ ರೂಪಿಸಲಾದ ಯೋಜನಾ ವಿನಿಯೋಗದ ಪ್ರಕಾರ ಕೇಂದ್ರ ಸರ್ಕಾರ ಸಿಎಸ್‍ಎಸ್ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕಾಗಿದೆ. ಯೋಜನೆ ವಿನಿಯೋಗಕ್ಕಿಂತ ಕಡಿಮೆ ಹಣ ಬಿಡುಗಡೆ ಮಾಡುವುದರಿಂದ ರಾಜ್ಯದ ಮೇಲೆ ಹೆಚ್ಚುವರಿ ಹೊರೆ ಉಂಟಾಗುತ್ತದೆ. ಹೀಗಾಗಿ, ರಾಜ್ಯ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಟ್ಟಿದೆ.

ಮೆಟ್ರೋ ರೈಲು, ಉಪನಗರ ರೈಲು ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಹಣದ ಕೊರತೆ ಕಾಡುತ್ತಿದೆ. ಘನತ್ಯಾಜ್ಯ ನಿರ್ವಹಣೆ ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ-3 ಮತ್ತು ಎತ್ತಿನಹೊಳೆಯಂತಹ ದೊಡ್ಡ ನೀರಾವರಿ ಯೋಜನೆಗೂ ಅನುದಾನ ನೀಡಬಹುದು ಎಂಬ ನಿರೀಕ್ಷೆ ರಾಜ್ಯ ಇಟ್ಟುಕೊಂಡಿದೆ.

ಇನ್ನು, 15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ನೀಡಲಾಗುವ ವಿಶೇಷ ಅನುದಾನದ ಹೊರತಾಗಿ ಈವರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​​​​ಪಿ) ಖರೀದಿ ಮಾಡಿದ್ದಕ್ಕೆ 885 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ. 2020ರ ಆಗಸ್ಟ್ ತಿಂಗಳಲ್ಲಿ ಬಿದ್ದ ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು.

ಕೇಂದ್ರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ 2,261 ಕೋಟಿ ರೂ. ಬೇಡಿಕೆಗೆ ಪ್ರತಿಯಾಗಿ ಎನ್​​​ಡಿಆರ್​​​ಎಫ್ ಮತ್ತು ಎಸ್​​​ಡಿಆರ್​​​ಎಫ್‌ನಡಿ 1,369 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೋವಿಡ್​​​ನಿಂದಾಗಿ ಕುಸಿದಿರುವ ವಾಣಿಜ್ಯ, ಪ್ರವಾಸ, ಹೋಟೆಲ್, ಸಂವಹನ ಸೇರಿ ಇತರೆ ಕೆಲ ಕ್ಷೇತ್ರಕ್ಕೆ ತೆರಿಗೆ ರಿಯಾಯಿತಿ ನೀಡುವಂತೆ ಕೋರಿದ್ದು, ಇದರಿಂದ ಉದ್ಯಮಿಗಳು ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆಯಿದೆ.

ಕೃಷಿ ಕ್ಷೇತ್ರ : ದೇಶದ ವಿವಿಧ ವಲಯಗಳು ಕೋವಿಡ್‌ ಸಮಯದಲ್ಲಿ ತತ್ತರಿಸಿದ್ದರೆ, ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿ ನಿಂತಿದ್ದು ಕೃಷಿ ಕ್ಷೇತ್ರ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ 3.4 ಪ್ರತಿಶತ ಬೆಳವಣಿಗೆಯಾಗುವ ನಿರೀಕ್ಷೆಯಿದೆ.

ಸರ್ಕಾರ ಈಗಾಗಲೇ ಕೃಷಿ ಕ್ಷೇತ್ರಕ್ಕಾಗಿ ಪಿಎಂ ಕಿಸಾನ್‌ ಯೋಜನೆಯಡಿ ನೇರ ಹಣ ವರ್ಗಾವಣೆ, ಕೃಷಿ ಮೂಲ ಸೌಕರ್ಯಕ್ಕಾಗಿ 1 ಲಕ್ಷ ಕೋಟಿ ರೂ.ಗಳ ಅನುದಾನ ನೀಡಿದೆಯಾದ್ರೂ ಎಂಎಸ್‌ಎಂಇ ಮಾದರಿಯಲ್ಲೇ ಸಾಲ ಖಾತ್ರಿ ಯೋಜನೆಗಳು ಮತ್ತು ಕೆಲ ವಿಮಾ ಸ್ಕೀಮ್‌ಗಳನ್ನು ನೀಡುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ವಿವಾದಿತ 3 ಕೃಷಿ ಕಾಯ್ದೆ ಬಳಿಕ ಬಜೆಟ್​ ಸೆಷನ್​ನಲ್ಲಿ 20+ ಮಸೂದೆಗಳ ಮಂಡನೆಗೆ ಮೋದಿ ಸರ್ಕಾರ ಸಜ್ಜು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.