ಆನೇಕಲ್: ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಆನೇಕಲ್ನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಬಾವುಟ ಹಿಡಿದ ಯಡಿಯೂರಪ್ಪ ಬೆಂಬಲಿಗರು, ಬಿಎಸ್ವೈ ಪರ ಘೋಷಣೆ ಕೂಗಿ, ಅಭಿನಂದನೆ ಸಲ್ಲಿಸಿದರು.
ಈ ಹಿಂದೆ ಯಡಿಯೂರಪ್ಪ ಆಡಳಿತಾವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳನ್ನು ಮೆಲುಕು ಹಾಕಿದ ಬಿಜೆಪಿ ಮುಖಂಡರು, ಮುಂದೆ ಸಹ ಅದೇ ರೀತಿಯ ಜನಪರ ಕಾರ್ಯಯೋಜನೆಗಳನ್ನು ಅವರು ಜನತೆಗೆ ನೀಡುತ್ತಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರದ ಸಹಯೋಗದಲ್ಲಿ ಯಶಸ್ವಿಗೊಳಿಸಲಾಗುವುದು ಎಂದು ಪುರಸಭಾ ಸದಸ್ಯ ಬಿ. ನಾಗರಾಜು ಹೇಳಿದರು.