ETV Bharat / state

ಸಿಡಿ ಪ್ರಕರಣ - ಸಚಿವರ ಕೋರ್ಟ್​ ಮೊರೆ ವಿಚಾರ : ನಿಲುವಳಿ ಸೂಚನೆ ಮಂಡನೆಗೆ ಸಿದ್ದು ಮನವಿ - Siddaramaiah appeals for CD issue discussion in Vihanasabha

ಬೇರೆ ರೂಪದಲ್ಲಿ ತೆಗೆದುಕೊಂಡರೆ ಸರ್ಕಾರಕ್ಕೆ ಉತ್ತರ ನೀಡಲು ಅನುಕೂಲ. ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಮಧ್ಯಾಹ್ನಕ್ಕೆ ಸದನವನ್ನು ಸ್ಪೀಕರ್ ಮುಂದೂಡಿದರು. ಭೋಜನ ವಿರಾಮದ ನಂತರ ಸಿಡಿ ಪ್ರಕರಣ ಸದನದಲ್ಲಿ ಸ್ಫೋಟವಾಗಲಿದೆ..

Siddaramaiah
ಸಿದ್ದರಾಮಯ್ಯ ಮನವಿ
author img

By

Published : Mar 22, 2021, 3:21 PM IST

ಬೆಂಗಳೂರು : ಸಿಡಿ ಪ್ರಕರಣ ಹಾಗೂ ಆರು ಸಚಿವರು ಕೋರ್ಟ್​ಗೆ ಮೊರೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಇಂದು ನಿಲುವಳಿ ಸೂಚನೆ ಮಂಡನೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀವು ನಿಲುವಳಿ ಕೊಟ್ಟಿದ್ದೀರಾ. ಆದ್ರೆ, ಅದನ್ನು ತೆಗೆದುಕೊಳ್ಳಬೇಕಾ ಬೇಡ ಎಂಬುದು ಗೊತ್ತಿಲ್ಲ, ಸಂಶಯವಿದೆ. ನಿಮ್ಮ ಬಗ್ಗೆ ಅಲ್ಲ, ನಿಲುವಳಿ ಬಗ್ಗೆ ಸಂಶಯ ಎಂದರು.

ಆಗ ಸಿದ್ದರಾಮಯ್ಯ ಅವರು, ನನ್ನ ಮೇಲೆ ನಿಮಗೆ ಸಂಶಯವಿಲ್ಲ. ಆದರೆ, ಈ ವಿಷಯದ ಬಗ್ಗೆ ಮಾತ್ರ ನಿಮಗೆ ಸಂಶಯ‌. ಇದು ನನಗೆ ಗೊತ್ತು, ನೀವು ನನ್ನ ಗುಡ್ ಫ್ರೆಂಡ್ ಎಂದರು.

ಓದಿ:ರೈತರಿಂದ ವಿಧಾನಸೌಧ ಚಲೋ.. ಫ್ರೀಡಂ ಪಾರ್ಕ್ ತಲುಪಿದ ರ್ಯಾಲಿ

ಮಧ್ಯ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ನೀವು (ಸ್ಪೀಕರ್) ಈ ವಿಷಯ ನಿಲುವಳಿ ಸೂಚನೆಗೆ ಬರುವುದಿಲ್ಲವೆಂದು ಸಂಶಯ ವ್ಯಕ್ತಪಡಿಸಿದ್ದೀರಾ. ಹಾಗಾಗಿ, ನನ್ನ ಪ್ರಕಾರ ಇದು ನಿಲುವಳಿ ಸೂಚನೆಗೆ ಬರುವುದಿಲ್ಲ.

ಬೇರೆ ರೂಪದಲ್ಲಿ ತೆಗೆದುಕೊಂಡರೆ ಸರ್ಕಾರಕ್ಕೆ ಉತ್ತರ ನೀಡಲು ಅನುಕೂಲ ಎಂದರು. ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಮಧ್ಯಾಹ್ನಕ್ಕೆ ಸದನವನ್ನು ಸ್ಪೀಕರ್ ಮುಂದೂಡಿದರು. ಭೋಜನ ವಿರಾಮದ ನಂತರ ಸಿಡಿ ಪ್ರಕರಣ ಸದನದಲ್ಲಿ ಸ್ಫೋಟವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.