ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಕಾರ್ ಸ್ಟಾರ್ಟ್ ಮಾಡುವ ಮುನ್ನ ಗೇರ್ ಚೆಕ್ ಮಾಡದೆ ಹೋದ್ರೆ ಏನೆಲ್ಲಾ ಅವಘಡ ಸಂಭವಿಸುತ್ತೆ ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆ. ಬೆಂಗಳೂರು ನ್ಯೂ ಬಿಇಎಲ್ ರಸ್ತೆಯ ಆರ್.ಕೆ ಗಾರ್ಡನ್ 4ನೇ ಕ್ರಾಸಿನ ಮನೆ #31ರ ಮುಂದೆ ಘಟನೆ ನಡೆದಿದೆ.
ಕಾರ್ ರಿವರ್ಸ್ ಗೇರ್ನಲ್ಲಿರೋದನ್ನು ಗಮನಿಸದ ನಂದಿನಿ ರಾವ್ ರಾಜೇಶ್ ಎಂಬುವರು ಅಜಾಗರೂಕತೆಯಿಂದ ತಮ್ಮ ಕಾರಿನ ಮುಂದಿನ ಡ್ರೈವರ್ ಡೋರ್ ತೆಗೆದು ಸ್ಟಾರ್ಟ್ ಮಾಡಿದ್ದಾರೆ. ಕಾರಿನ ಹೊರಗೆ ನಿಂತೇ ಕಾರನ್ನು ಸ್ಟಾಟ್ ಮಾಡಿದಾಗ ರಿವರ್ಸ್ ಗೇರ್ನಲ್ಲಿದ್ದ ಕಾರ್ ಹಿಂದೆ ಚಲಿಸಿದೆ. ಕಾರಿನ ಡೋರ್ ಮತ್ತು ಪಕ್ಕದ ಮರದ ನಡುವೆ ಸಿಕ್ಕಿ ಕ್ರಷ್ ಆಗಿದ್ದಾರೆ.
ತಕ್ಷಣ 45 ವರ್ಷದ ನಂದಿನಿ ರಾವ್ ಅವರನ್ನು ಕೊಲಂಬಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸುವಷ್ಟರಲ್ಲಿ ನಂದಿನಿ ಸಾವನ್ನಪ್ಪಿದ್ದರು.
ಸದ್ಯ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ದೃಶ್ಯ ನಿಜಕ್ಕೂ ಬೆಚ್ವಿ ಬೀಳಿಸುವಂತಿದೆ. ಪ್ರತಿಯೊಬ್ಬರು ವಾಹನ ಚಲಾಯಿಸುವಾಗ ನಿಯಮ ಪಾಲನೆ ಮಾಡುವುದು ಅನಿವಾರ್ಯವಾಗಿದೆ ಎಂದು ಈ ಘಟನೆ ತಿಳಿಸುತ್ತದೆ.