ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮನೆಯ ಮೇಲಿನ ದಾಳಿಯನ್ನು ಸಿಸಿಬಿ ಅಧಿಕಾರಿಗಳು ಮುಗಿಸಿದ್ದು, ಅಗತ್ಯವಿದ್ದಲ್ಲಿ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಸೂಚಿಸಿ ಸದಾಶಿವನಗರ ಮನೆಯಲ್ಲೇ ಆತನನ್ನು ಬಿಟ್ಟು ತೆರಳಿದ್ದಾರೆ.
ಇವತ್ತು ಮುಂಜಾನೆ ಸದಾಶಿವನಗರದಲ್ಲಿರುವ ರಿಕ್ಕಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಫ್ಲಾಟ್ನ ಮಾಸ್ಟರ್ ಬೆಡ್ ರೂಮ್ ಕೀ ಬಿಡದಿ ಮನೆಯಲ್ಲಿದೆ ಎಂದು ಅವರು ತಿಳಿಸಿದ್ದರು. ನಂತರ ಬಿಡದಿ ಬಳಿ ಕರೆದೊಯ್ದು ಕೆಲ ವಸ್ತುಗಳ ಪರಿಶೀಲನೆ ನಡೆಸಿ, ಮತ್ತೆ ಸದಾಶಿವನಗರ ಬಳಿಯ ಅಪಾರ್ಟ್ ಮೆಂಟ್ಗೆ ಅವರನ್ನು ಕರೆದೊಯ್ದು ಫ್ಲಾಟ್ನ ಮಾಸ್ಟರ್ ಬೆಡ್ ರೂಮ್ನಲ್ಲಿ ಕೀ ಓಪನ್ ಮಾಡುವಂತೆ ತಿಳಿಸಿ ದಾಖಲೆಗಳ ಶೋಧ ಕಾರ್ಯ ನಡೆಸಿದ್ದಾರೆ.