ಬೆಂಗಳೂರು: ನಗರದಲ್ಲಿ ಮತ್ತೆ ಸಿಸಿಬಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಮೆಜಿಸ್ಟಿಕ್ನಲ್ಲಿರುವ ಬಾರ್ವೊಂದರ ಮೇಲೆ ದಾಳಿ ಮಾಡಿದ್ದಾರೆ.
ನಿನ್ನೆ ಬಾರ್ನಲ್ಲಿ ಮೊಜು ಮಸ್ತಿ ಮೂಡಿನಲ್ಲಿದ್ದ ಯುವಕ- ಯುವತಿಯರಿಗೆ ಶಾಕ್ ಕಾದಿತ್ತು. ನಗರದ ಮೆಜೆಸ್ಟಿಕ್ನಲ್ಲಿರುವ ಬಾರ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಮೇರೆಗೆ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ನೆತೃತ್ವದ ತಂಡ ರಾತ್ರಿ ದಾಳಿ ನಡೆಸಿ, ಬಾರ್ನಲ್ಲಿದ್ದ 68 ಯುವತಿಯರನ್ನು ರಕ್ಷಿಸಿ, 14 ಗ್ರಾಹಕರು ಹಾಗೂ 20 ಜನ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಸುಮಾರು 65,770 ನಗದು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.