ETV Bharat / state

ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಸಿಸಿಬಿ ದಾಳಿ, ಮೂವರ ಬಂಧನ - ಆರೋಪಿಗಳ ಬಂಧನ

ಚಿಕ್ಕದಾದ ಶೆಡ್​ನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಆರೋಪಿಗಳು ಜನರ ವಾಸ ಸ್ಥಳದಲ್ಲಿ, ಸುರಕ್ಷಿತವಲ್ಲದ ಸ್ಥಳದಲ್ಲಿ, ಮುಂಜಾಗೃತ ಕ್ರಮ ಕೈಗೊಳ್ಳದೆ, ಪರವಾನಗಿ ಪಡೆದುಕೊಳ್ಳದೇ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುತ್ತಿದ್ದರು.

illegal gas filling
illegal gas filling
author img

By

Published : Oct 8, 2020, 11:38 AM IST

ಬೆಂಗಳೂರು: ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಗೆ ಅಗತ್ಯವಿರುವ ವಸ್ತುಗಳಲ್ಲೊಂದಾದ, ಪ್ರತಿಷ್ಟಿತ ಕಂಪೆನಿಗಳ ಹೆಸರಿನ ಗ್ಯಾಸನ್ನು ಅಕ್ರಮವಾಗಿ ರೀಫಿಲ್ಲಿಂಗ್ ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ತನಿಖೆಯ ವೇಳೆ ಅಕ್ರಮ ಹಣ ಸಂಪಾದನೆ ಮಾಡಲು ಈ ರೀತಿಯಾದ ಕಾರ್ಯದಲ್ಲಿ ಭಾಗಿಯಾಗಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ನಾರಾಯಣ, ಮಹೇಂದ್ರ, ಮೌನೇಶ್ ಬಂಧಿತ ಆರೋಪಿಗಳು.

ccb raid on illegal gas refilling
ಅಕ್ರಮ ಗ್ಯಾಸ್ ರೀಫಿಲ್ಲಿಂಗ್

ಈ ಆರೋಪಿಗಳು ಬೆಂಗಳೂರು ನಗರದ ಆರ್​.ಟಿ.ನಗರ ಪೋಸ್ಟ್ ಹತ್ತಿರ ಇರುವ ಚಿಕ್ಕದಾದ ಶೆಡ್​ನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅಗತ್ಯ ವಸ್ತುಗಳ ಪಟ್ಟಿಯಲ್ಲಿರುವ ಗ್ಯಾಸ್ ಸಿಲಿಂಡರ್​​ಗಳನ್ನು ಜನರ ವಾಸ, ಸುರಕ್ಷಿತವಲ್ಲದ ಸ್ಥಳದಲ್ಲಿ, ಮುಂಜಾಗೃತ ಕ್ರಮ ಕೈಗೊಳ್ಳದೆ, ಪರವಾನಗಿ ಪಡೆದುಕೊಳ್ಳದೇ, ದಹನಕಾರಿ ಪ್ರವೃತ್ತಿ ಇರುವ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಮಾಡುತ್ತಿದ್ದರು.

ccb raid on illegal gas refilling
ಅಕ್ರಮ ಗ್ಯಾಸ್ ರೀಫಿಲ್ಲಿಂಗ್

ಈ ಕುರಿತು ಮಾಹಿತಿ ಪಡೆದು ಸಿಸಿಬಿ ದಾಳಿ ‌ಮಾಡಿದಾಗ ಆರೋಪಿಗಳು ಬೆಂಕಿ ಅವಘಡ ತಪ್ಪಿಸಲು ಯಾವುದೇ ಮುಂಜಾಗ್ರತ ಕ್ರಮವನ್ನು ಅನುಸರಿಸದೆ, ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಆಟೋರಿಕ್ಷಾದಲ್ಲಿ ಮಾರಾಟ ಮಾಡುತ್ತಿದ್ದರು. ದಾಳಿ ನಡೆಸಿದಾಗ ಪ್ರತಿಷ್ಠಿತ ಕಂಪನಿಗಳಾದ ಭಾರತ್, ಇಂಡೇನ್, ಹೆಚ್​ಪಿ ಮತ್ತು ಟೋಟಲ್ ಗ್ಯಾಸ್ ಕಂಪನಿಗಳ ಗೃಹಬಳಕೆಯ ಒಟ್ಟು 125 ಗ್ಯಾಸ್ ಸಿಲಿಂಡರ್​ಗಳು ಪತ್ತೆಯಾಗಿದೆ.

ಸದ್ಯ ಪ್ರಕರಣದಲ್ಲಿ ಶಿವಣ್ಣ, ಶ್ರೀನಿವಾಸ್, ಕಾಂತರಾಜ್ ಮತ್ತು ಶಫಿ ತಲೆಮರೆಸಿಕೊಂಡಿದ್ದು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಶೋಧ ಮುಂದುವರೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.