ETV Bharat / state

ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ದೋಖಾ : ಸದ್ಯ ಸಿಸಿಬಿ ಖೆಡ್ಡಾಕ್ಕೆ ಬಿದ್ದ ಆಸಾಮಿ - ಬಿಜೆಪಿ ನಾಯಕರ ಹೆಸರು ಹೇಳಿಕೊಂಡು ದೋಖಾ

ತನಿಖೆ ವೇಳೆ ಈತ ಬಹುತೇಕ ಮಂದಿಯಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ವಿಚಾರ ಬಯಲಾಗಿದೆ. ಸದ್ಯ ಆತನನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ..

ಯುವರಾಜ್ ಎಂಬಾತನ ಮನೆ ಸಿಸಿಬಿ ದಾಳಿ
CCB Police raided on Yuvaraj house
author img

By

Published : Dec 16, 2020, 11:54 AM IST

ಬೆಂಗಳೂರು : ಆರ್​​ಎಸ್​​ಎಸ್ ನಾಯಕ ಹಾಗೂ ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ‌ಇತರೆ ಬಿಜೆಪಿ ನಾಯಕರ ಹೆಸರೇಳಿಕೊಂಡು ವಂಚನೆ ಮಾಡುತ್ತಿದ್ದ ಯುವರಾಜ್ ಎಂಬಾತನ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ.

ಈತ‌ ಬಿಜೆಪಿ ನಾಯಕರ ಜೊತೆ ಫೋಟೋ ತೆಗೆಸಿಕೊಂಡು ಬಹಳಷ್ಟು ಮಂದಿಗೆ ತಾನು ಬಿಜೆಪಿ ನಾಯಕರ ಜೊತೆ ಬಹಳ ಆತ್ಮೀಯನಾಗಿದ್ದೇನೆ ಎಂದು ನಂಬಿಸುತ್ತಿದ್ದ. ಇತ್ತೀಚಿಗೆ ಉದ್ಯಮಿ ಸುಧೀಂದ್ರ ರೆಡ್ಡಿ ಎಂಬುವರಿಗೆ ಕೆಎಸ್​​ಆರ್​​ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಹೇಳಿ ಆತನಿಂದ ಹಣ ಪಡೆದಿದ್ದಾನೆ.

ಬಳಿಕ ಯಾವುದೇ ಹುದ್ದೆ ಕೊಡಿಸದೆ ಮೋಸ ಮಾಡಿದ್ದಾನೆ‌‌. ಈ ಕುರಿತು ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಯುವರಾಜ್ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.

ಓದಿ: ವಿಜಯ್ ದಿವಸ್ : ಹುತಾತ್ಮ ಯೋಧರಿಗೆ ಸಿಎಂ ಯಡಿಯೂರಪ್ಪ ಗೌರವ

ತನಿಖೆ ವೇಳೆ ಈತ ಬಹುತೇಕ ಮಂದಿಯಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ವಿಚಾರ ಬಯಲಾಗಿದೆ. ಸದ್ಯ ಆತನನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.