ಬೆಂಗಳೂರು: ಅಪಾಯಕಾರಿ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಅಕ್ರಮವಾಗಿ ಶೇಖರಣೆ ಮಾಡಿ ಪರವಾನಿಗೆ ಪಡೆಯದೇ ಸ್ಯಾನಿಟೈಸರ್ ತಯಾರಿಸುತ್ತಿದ್ದ ಅಡ್ಡೆಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ರೇಣುಕಾಚಾರ್ಯ ಎಂಬಾತ ಬಂಧಿತ ಆರೋಪಿ. ಕೊರೊನಾ ಹರಡುವ ಭೀತಿ ಹಿನ್ನೆಲೆ ಬಹಳಷ್ಟು ಜನ ಸ್ಯಾನಿಟೈಸರ್, ಮಾಸ್ಕ್ ಬಳಕೆ ಮಾಡಲು ಮೆಡಿಕಲ್ ಶಾಪ್‌ಗಳ ಮೊರೆ ಹೋಗ್ತಾರೆ. ಹಾಗಾಗಿ ಕೆಲವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಧಾಮನಗರದ ಬಿಲ್ಡಿಂಗ್‌ವೊಂದರಲ್ಲಿ ಯಾವುದೇ ಲೈಸೆನ್ಸ್ ಪಡೆಯದೆ ಅಪಾಯಕಾರಿ ಸ್ಫೋಟಕ ವಸ್ತುಗಳಾದ 400 ಲೀ. ಐಸೊಪ್ರೊಫೈಲ್ ಅಲ್ಕೋಹಾಲ್, ಸುಮಾರು 200 ಲೀ.ಟಾಲಿನ್ ಸುಮಾರು 100 ಲೀ. ಟರ್ಪಂಟೈನ್, 600 ಲೀ. ಅಸಿಟೋನ್, 50 ಲೀ. ಬೇಂಜೈಳ್ ಆಲ್ಕೋಹಾಲ್, ನೈಟ್ರೊ ಬೆಂಜಿನ್, ಸಿಲಿಕಾನ್ ಆಯಿಲ್, ಲಿಕ್ವಿಡ್ ಫ್ಯಾರಾಫಿನ್ ಗ್ರಿಸರೀನ್, ಮಿಥಿಲಿನ್ ಕ್ಲೋರೈಡ್ ಹಾಗೂ ಮುಂತಾದ ಸಾವಿರಾರು ಸ್ಫೋಟಕ ರಾಸಾಯನಿಕ ಬಳಸಿ ಸ್ಯಾನಿಟೈಸರ್ ತಯಾರಿ ಮಾಡುತ್ತಿದ್ದರು.
ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಶೇಖರಿಸಿಟ್ಟ ಸ್ಯಾನಿಟೈಸರ್ ಜಪ್ತಿ ಮಾಡಿ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪೆಟ್ರೋಲಿಯಂ ಆ್ಯಕ್ಟ್‌ನಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.