ETV Bharat / state

ಸ್ಯಾಂಡಲ್​​ವುಡ್​​ನಲ್ಲಿ ಡ್ರಗ್ಸ್ ವಿಚಾರ: ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ನೀಡಿದ ಸಿಸಿಬಿ..! - Ragini Dwivedi

ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸರು ಬುಲಾವ್ ನೀಡಿದ್ದು, ನಾಳೆ ಬೆಳಿಗ್ಗೆ 10 ಗಂಟೆಗೆ ಚಾಮರಾಜಪೇಟೆ ಬಳಿ‌ಯಿರುವ ಸಿಸಿಬಿ‌ ಕಚೇರಿಗೆ ರಾಗಿಣಿ‌ ತೆರಳಲಿದ್ದಾರೆ.

CCB notice to actress Ragini Dwivedi
ನಟಿ ರಾಗಿಣಿ ದ್ವಿವೇದಿಗೆ ನೋಟೀಸ್ ನೀಡಿದ ಸಿಸಿಬಿ
author img

By

Published : Sep 2, 2020, 9:46 PM IST

ಬೆಂಗಳೂರು: ಸ್ಯಾಂಡಲ್​​ವುಡ್​​ನಲ್ಲಿ ಡ್ರಗ್ಸ್​​ ಘಾಟು ಕೇಳಿ ಬರುತ್ತಿರುವ ಬೆನ್ನಲ್ಲೇ, ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸರು ಬುಲಾವ್ ನೀಡಿದ್ದಾರೆ.‌ ನಾಳೆ ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆ ಬಳಿ‌ಯಿರುವ ಸಿಸಿಬಿ‌ ಕಚೇರಿಗೆ ರಾಗಿಣಿ‌ ತೆರಳಲಿದ್ದಾರೆ.

ಮತ್ತೊಂದೆಡೆ‌ ರಾಗಿಣಿ ಆಪ್ತ ರವಿಶಂಕರ್ ಅವರನ್ನ ‌ಇಂದು ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸಿತ್ತು. ಈತನನ ವಿಚಾರಣೆ ನಂತರ ರಾಗಿಣಿಗೆ ನೋಟಿಸ್ ‌ನೀಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್, ಈಗಾಗಲೇ ಸುಮಾರು 15 ಜನ ನಟ ನಟಿಯರ ಹೆಸರನ್ನು ಕೊಟ್ಟಿದ್ದರು. ಸದ್ಯ ರಾಗಿಣಿಗೆ ನೋಟಿಸ್ ಜಾರಿ‌ ಮಾಡಿದ ಬೆನ್ನಲ್ಲೆ, ಸ್ಯಾಂಡಲ್​​ವುಡ್​​ನಲ್ಲಿ ಮತ್ತಷ್ಟು ಡ್ರಗ್ ಸದ್ದು ಮಾಡಿದೆ.

ಖುದ್ದಾಗಿ ಹಿರಿಯ ಅಧಿಕಾರಿಗಳು ರಾಗಿಣಿ ವಿಚಾರಣೆ ನಡೆಸಲು ಮುಂದಾಗಿದ್ದು, ರಾಗಿಣಿ ವಿಚಾರಣೆಯ ನಂತರ ಬೇರೆ ಯಾವ ನಟ ನಟಿಯರು ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆಂಬ ಕುತೂಹಲ ಎದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.