ETV Bharat / state

ಇಂಟರ್​​ನ್ಯಾಷನಲ್ ಹ್ಯಾಕರ್‌ನ ಪ್ರಾಣ ಸ್ನೇಹಿತನ ಬಂಧನ‌: ಸಿಸಿಬಿಯಿಂದ ವಿಚಾರಣೆ

ಇಂಟರ್​​ನ್ಯಾಷನಲ್ ಹ್ಯಾಕರ್ ಶ್ರೀಕಿ ಎಂಬಾತನ ಪ್ರಾಣಸ್ನೇಹಿತ ರಾಬಿನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಕಳೆದ ಮೂರು ವರ್ಷಗಳಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಇಬ್ಬರು ಬಹುತೇಕ ಸರ್ಕಾರಿ ವೆಬ್ ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದರು.

ಸಿಸಿಬಿ
ಸಿಸಿಬಿ
author img

By

Published : Dec 1, 2020, 1:30 PM IST

ಬೆಂಗಳೂರು: ಅಂತಾರಾಷ್ಟ್ರೀಯ ಹ್ಯಾಕರ್ ಬಂಧನ ಪ್ರಕರಣ ಬೆನ್ನಲ್ಲೇ ಮತ್ತೊಬ್ಬ ಆರೋಪಿಯ ಬಂಧನವಾಗಿದೆ. ಹ್ಯಾಕರ್​ಗೆ ಅತ್ಯಾಪ್ತನಾಗಿದ್ದ ರಾಬಿನ್​​ ಎಂಬ ಆರೋಪಿ ಪೊಲೀಸರಿಗೆ ಸಿಕ್ಕಿದ್ದಾನೆ. ಈ ಇಬ್ಬರು ಕೇವಲ ಮೂರು ವರ್ಷದಲ್ಲೇ ಪ್ರಾಣ ಸ್ನೇಹಿತರಾಗಿದ್ದರು. ಬಿಟ್ ಕಾಯಿನ್ ದಂಧೆಗೆ ಈತನೇ ಬಿಗ್ ಟ್ರೇಡರ್ ಆಗಿದ್ದ. ಹಾಗೆಯೇ ಇಬ್ಬರೂ ಸೇರಿ ಹಲವಾರು ಸರ್ಕಾರಿ ವೆಬ್ ಸೈಟ್​​ಗಳನ್ನು ಹ್ಯಾಕ್ ಮಾಡಿದ್ದಾರೆ.

ಈಗಾಗಲೇ ಬಂಧಿತನಾಗಿರುವ ಪ್ರಮುಖ ಶ್ರೀಕಿ ಎಂಬ ಹ್ಯಾಕರ್ ಹ್ಯಾಕ್ ಮಾಡೋ ಪ್ರತಿ ಬಿಟ್ ಕಾಯಿನ್​ನನ್ನ ಈತನೇ ನೋಡಿಕೊಳ್ತಿದ್ದ. ಹೀಗೆ ಕಳೆದ ಮೂರು ವರ್ಷಗಳಲ್ಲಿ ಈ ಇಬ್ಬರೂ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಕೇವಲ ವ್ಯವಹಾರಿಕವಾಗಿ ಸ್ನೇಹಿತರಾಗಿದ್ದ ಇಬ್ಬರು, ಕಳೆದ ಆರು ತಿಂಗಳಿನಿಂದ ಪ್ರಾಣ ಸ್ನೇಹಿತರಾಗಿದ್ರು. ಮೂಲತಃ ಕೊಲ್ಕತ್ತಾದವನಾಗಿದ್ದ ರಾಬಿನ್ ಖಂಡೇವಾಲ, ಕಳೆದ ಮೂರು ವರ್ಷಗಳ ಹಿಂದೆ ಬಿಟ್​ ಕಾಯಿನ್ ದಂಧೆಯಿಂದ ಹ್ಯಾಕರ್ ಶ್ರೀಕಿಗೆ ಪರಿಚಯವಾಗಿದ್ದ. ಕಳೆದ ಆರು ತಿಂಗಳಿನಿಂದ ಒಂದೇ ರೂಮ್​​ನಲ್ಲಿ ಇಬ್ಬರು ವಾಸವಿದ್ದರು. ಸದ್ಯ ರಾಬಿನ್ ಖಂಡೇವಾಲನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಇಬ್ಬರು ಬಹುತೇಕ ಸರ್ಕಾರಿ ವೆಬ್ ಸೈಟ್ ಹ್ಯಾಕ್ ಮಾಡಿದ್ದಾರೆ.

ಇದನ್ನು ಓದಿ: 'ವಿಶ್ವನಾಥ್‌ಗೆ ಸಚಿವ ಸ್ಥಾನ ಸಿಗದಂತೆ 17 ಮಂದಿ ಪೈಕಿ ಒಬ್ಬರಿಂದ ಕೋರ್ಟ್‌ಗೆ ಅರ್ಜಿ'

ಈ ಪ್ರಕರಣದಲ್ಲಿ ಇಂಟರ್​​​ನ್ಯಾಷನಲ್ ಹ್ಯಾಕರ್ ಶ್ರೀಕಿ ಬಂಧನ ಈಗಾಗಲೇ ಆಗಿತ್ತು. ಹೀಗಾಗಿ ಶ್ರೀಕಿಯ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಇನ್​ಸ್ಪೆಕ್ಟರ್ ಶ್ರೀಧರ್ ಪೂಜಾ ಪ್ರಕರಣದ ಐಓ ಆಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರ್ ಪಡಿಸಿ ಮತ್ತೆ ವಶಕ್ಕೆ ಪಡೆದು ತನಿಖೆ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.