ಬೆಂಗಳೂರು: ಐಎಂಎ ಬಹುಕೋಟಿ ಹಗರಣ ಸಂಬಂಧ ಮಾಜಿ ಶಾಸಕ ರೋಷನ್ ಬೇಗ್ ನಿವಾಸದ ಮೇಲೆ ನಡೆಸಿದ್ದ ಸಿಬಿಐ ದಾಳಿ ಮುಕ್ತಾಯಗೊಂಡಿದೆ.
ಇಂದು ಬೆಳಗ್ಗೆ 7 ಗಂಟೆಗೆ ವೇಳೆ 13 ಮಂದಿ ಅಧಿಕಾರಿಗಳ ಸಿಬಿಐ ತಂಡ ಕೋಲ್ಸ್ ಪಾರ್ಕ್ ರಸ್ತೆ ಬಳಿಯಿರುವ ರೋಷನ್ ಬೇಗ್ ನಿವಾಸದ ಮೇಲೆ ದಾಳಿ ಮಾಡಿ ಸುಮಾರು 8 ಗಂಟೆಗಳ ಕಾಲ ಮನೆಯಲ್ಲಿದ್ದ ದಾಖಲಾತಿ ಪತ್ರ ಪರಿಶೀಲಿಸಿತು. ಈಗಾಗಲೇ ರೋಷನ್ ಬೇಗ್ ನ್ಯಾಯಾಂಗ ಬಂಧನದಲ್ಲಿದ್ದು, ಅವರ ಪತ್ನಿ ಸಬೀಹ ಫಾತಿಮಾರ ಹೇಳಿಕೆ ಪಡೆದುಕೊಳ್ಳಲಾಗಿದೆ.
ಇನ್ನೂ ಕೆಲವೊಂದು ಮಹತ್ವದ ದಾಖಲಾತಿಗಳನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಐಎಂಎ ಪ್ರಕರಣದ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ನಿಂದ ಕಿಕ್ ಬ್ಯಾಕ್ ಪಡೆದ ಆರೋಪದಡಿ ನಿನ್ನೆ ರೋಷನ್ ಬೇಗ್ರನ್ನು ಸಿಬಿಐ ಬಂಧಿಸಿತ್ತು.