ETV Bharat / state

ಕಾವೇರಿ ಕೂಗು ಅಭಿಯಾನ: ಸರ್ಕಾರದಿಂದ ವಿವರಣೆ ಕೇಳಿದ ಹೈಕೋರ್ಟ್

ಕಾವೇರಿ ಕೂಗು ಯೋಜನೆಯನ್ನು ಈಶ ಔಟ್ರೀಚ್ ಸಂಸ್ಥೆಯು ನಿರ್ವಹಣೆ ಮಾಡುತ್ತಿದೆ ಎಂದು ಈಶ ಫೌಂಡೇಶನ್ ನ್ಯಾಯಾಲಯಕ್ಕೆ ತಿಳಿಸಿದೆ. ಈ ಹಿನ್ನೆಲೆ ಎರಡು ಸಂಸ್ಥೆಗಳು ಕಾವೇರಿ ಕೂಗು ಯೋಜನೆಯಲ್ಲಿ ಹೇಗೆ ತೊಡಗಿಸಿಕೊಂಡಿವೆ ಎಂಬುದನ್ನು ತಿಳಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Jun 11, 2020, 10:16 PM IST

ಬೆಂಗಳೂರು: ಕಾವೇರಿ ಕೂಗು ಯೋಜನೆಯಲ್ಲಿ ಈಶ ಔಟ್ರೀಚ್ ಸಂಸ್ಥೆ ಮತ್ತು ಈಶ ಫೌಂಡೇಶನ್ ಸಂಸ್ಥೆ ಯಾವ ರೀತಿ ತೊಡಗಿಕೊಂಡಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕಾವೇರಿ ಕೂಗು ಯೋಜನೆಯನ್ನು ಈಶ ಔಟ್ರೀಚ್ ಸಂಸ್ಥೆಯು ನಿರ್ವಹಣೆ ಮಾಡುತ್ತಿದೆ ಎಂದು ಈಶ ಫೌಂಡೇಶನ್ ನ್ಯಾಯಾಲಯಕ್ಕೆ ತಿಳಿಸಿದೆ. ಈ ಹಿನ್ನೆಲೆ ಎರಡು ಸಂಸ್ಥೆಗಳು ಕಾವೇರಿ ಕೂಗು ಯೋಜನೆಯಲ್ಲಿ ಹೇಗೆ ತೊಡಗಿಸಿಕೊಂಡಿವೆ ಎಂಬುದನ್ನು ತಿಳಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ಈಶ ಫೌಂಡೇಶನ್ ಕಾವೇರಿ ನದಿ ತಪ್ಪಲು ಪ್ರದೇಶದ ಉದ್ದಕ್ಕೂ ಗಿಡ ನೆಟ್ಟು ಬೆಳೆಸುವುದಾಗಿ ಹೇಳಿ ಕಾವೇರಿ ಕೂಗು ಅಭಿಯಾನ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿ, ವಕೀಲರಾದ ಎ.ವಿ. ಅಮರನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಈಶ ಫೌಂಡೇಶನ್ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕಾವೇರಿ ಕೂಗು ಅಭಿಯಾನ ಹೆಸರಲ್ಲಿ ಹಣ ಸಂಗ್ರಹ ಮಾಡುತ್ತಿಲ್ಲ. ಬದಲಿಗೆ ರೈತರಲ್ಲಿ ಜಾಗೃತಿ ಮೂಡಿಸಲು ಗುಂಪುಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಪರ ವಕೀಲರು ಮಾಹಿತಿ ನೀಡಿ ರಾಜ್ಯ ಅರಣ್ಯ ಇಲಾಖೆಯ ಪ್ರಸ್ತಾವನೆ ಆಧಾರದ ಮೇಲೆ ಈ ಯೋಜನೆ ರೂಪಿಸಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಸರ್ಕಾರ ಹಿಂದಿನ ಹೇಳಿಕೆಗೆ ತದ್ವಿರುದ್ಧ ಮಾಹಿತಿ ನೀಡುತ್ತಿರುವಂತೆ ಕಾಣುತ್ತಿದೆ. ಸರ್ಕಾರ ಪ್ರಭಾವಕ್ಕೆ ಒಳಗಾಗಬಾರದು ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಬಳಿಕ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ, ಯೋಜನೆಯಲ್ಲಿ ಈಶ ಸಂಸ್ಥೆಗಳ ಪಾತ್ರ ಏನು ಎಂಬುದನ್ನು ಖಚಿತಪಡಿಸುವಂತೆ ತಿಳಿಸಿ, ವಿಚಾರಣೆಯನ್ನು ಜುಲೈ. 2 ಕ್ಕೆ ಮುಂದೂಡಿತು. ಇದೇ ವೇಳೆ ಅರ್ಜಿದಾರರು ಮಧ್ಯಂತರ ಮನವಿ ಸಲ್ಲಿಸಿ ಅಭಿಯಾನದಡಿ ಸಾರ್ವಜನಿಕರಿಂದ ಸಂಗ್ರಹಿಸಿರುವ 82 ಕೋಟಿ ರೂಪಾಯಿ ಹಣವನ್ನು ಸರ್ಕಾರದಲ್ಲಿ ಠೇವಣಿ ಇಡುವಂತೆ ನಿರ್ದೇಶಿಸಲು ಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.